ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು ಬಿಟ್ಟುಹೋದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ಮೋದಗಾ ಗ್ರಾಮದ ಕಾರ್ಡಿಯಲ್ ಗ್ರೇಷಿಯಸ್ ಆಸ್ಪತ್ರೆಯಲ್ಲಿ ಮೇ 15ರಂದು ಮಗುವನ್ನು ಉದ್ದೇಶಪೂರ್ವಕವಾಗಿ ಬಿಟ್ಟುಹೋದರು ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಗುರುತು ತಿಳಿಯದ ಕಾರಣ ಮಕ್ಕಳ ರಕ್ಷಣಾ ಘಟಕದವರು ಆಕೆಯನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಸೇರಿಸಿದ್ದಾರೆ.
ಇದುವರೆಗೆ ಮಗುವಿನ ಪಾಲಕರು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾರಿಹಾಳ ಠಾಣೆ ಪೊಲೀಸರು ಉದ್ದೇಶಪೂರ್ವಕವಾಗಿ ಮಗುವನ್ನು ಬಿಟ್ಟುಹೋದ ಆರೋಪದಡಿ ಅಪರಾಧ ಪ್ರಕರಣ ದಾಖಲಿಸಿದ್ದಾರೆ.