ಕೊರಟಗೆರೆ ತಾಲ್ಲೂಕಿನ ಸಿ.ಎನ್ ದುರ್ಗ ಹೋಬಳಿಯ ಬೂದಗವಿ (ಸಿದ್ದರಬೆಟ್ಟ) ಗ್ರಾಮದಲ್ಲಿನ ದೇವಾಲಯಕ್ಕೆ ತೆರಳಿದ್ದ ವೃದ್ಧೆಯ ಚಲನವಲನ ಗಮನಿಸಿ ವೃದ್ದೆಯು ಬಸ್ಸು ಸ್ಟಾಂಡ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಆರೋಪಿಗಳಾದ ರಂಗರಾಜು, ಶ್ರೀದೇವಿ ವೃದ್ಧೆಯ ಗಮನವನ್ನು ಬೇರೆಡೆ ಸೆಳೆದು ಬ್ಯಾಗ್ ನಲ್ಲಿದ್ದ ಚಿನ್ನಾಭರಣವನ್ನು ಕದ್ದು ಪಾರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು , ತನಿಖೆ ನಡೆಸಿದ ಕೊರಟಗೆರೆ ಪೊಲೀಸ್ ತಂಡ ಮಿಂಚಿನ ಕಾರ್ಯಚರಣೆ ಮೂಲಕ ಎರಡೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹೂಲೀಕುಂಟೆ ಗ್ರಾ.ಪಂ ವ್ಯಾಪ್ತಿಯ ದೇವರಹಳ್ಳಿ ಗ್ರಾಮದ ಬಸಮ್ಮ ಎಂಬ ವೃದ್ಧೆಯು ಸಿದ್ದರಬೆಟ್ಟದ ದೇವಸ್ಥಾನಕ್ಕೆ ಬಂದಿದ್ದರು, ಇವರ ಗಮನ ಬೆರೆಡೆಸೆಳೆದು ಯಾಮಾರಿಸಿ ಬ್ಯಾಗ್ ನಲ್ಲಿದ್ದ ಸುಮಾರು 100ಗ್ರಾಂ ಚಿನ್ನಾಭರಣ ಕದ್ದು ಪಾರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡು ವೃದ್ಧೆಗೆ ಹಿಂತಿರುಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳಾದ ರಂಗರಾಜು, ಶ್ರೀದೇವಿ ಶಿರಾ ತಾಲ್ಲೂಕಿನ ಮೂಕನಹಳ್ಳಿ ಗ್ರಾಮದ ವಾಸಿಗಳು ಎಂದು ತಿಳಿದು ಬಂದಿದ್ದು, ಪ್ರಕರಣ ಬೇಧಿಸಿದ ಪೊಲೀಸರು 48ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್ ಮಾರ್ಗದರ್ಶದಂತೆ ಪಿಎಸ್ಐ ತೀರ್ಥೇಶ್ ನೇತೃತ್ವದ ಪೋಲಿಸ್ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್ಐ ಗಂಗಾಧರಪ್ಪ, ಸಿಬ್ಬಂದಿಗಳಾದ ದೊಡ್ಡಲಿಂಗಯ್ಯ, ಮೋಹನ್, ಸಂಜೀವರೆಡ್ಡಿ ರಾಮಚಂದ್ರ,ರವಿ, ಜಗದೀಶ್,ಪ್ರದೀಪ್ ಮೊದಲಾದವರು ಭಾಗಿಯಾಗಿದ್ದರು.