ವಾಣಿಜ್ಯ ಅಡಕೆ ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಡಕೆಕಾಯಿ ಮತ್ತು ಗೋಟು ಸುಲಿಯುವ ನವ ನವೀನ ಯಂತ್ರಗಳನ್ನು ನಮ್ಮಲ್ಲಿ ಆವಿಷ್ಕಾರ ಮಾಡಲಾಗಿದೆ. ಈ ವರ್ಷದ ಮೊದಲ ನೂರು ಮಂದಿ ಗ್ರಾಹಕ ರೈತ ಮಿತ್ರರಿಗೆ ವರ ಮಹಾಲಕ್ಷ್ಮೀ ಹಬ್ಬ ಆಗಸ್ಟ್ 8 ರಂದು ಅಭಿನಂದಿಸುವ ಕಾರ್ಯಕ್ರಮ ವಿನೂತನವಾಗಿ ಆಯೋಜಿಸಲಾಗಿದೆ ಎಂದು ತುಳಸಿ ರಂಗನಾಥ ಟ್ರೇಡರ್ ಮಾಲೀಕ ಎಲ್.ಎನ್.ಮಂಜುನಾಥ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದ ತುಳಸಿ ರಂಗನಾಥ ಟ್ರೇಡರ್ ಮಳಿಗೆ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಚೇಳೂರು ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಹಲವು ಭಾಗದಿಂದ ಮಾದರಿ ರೈತರು, ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಅಡಕೆ ಬೆಳೆಗೆ ಉತ್ತಮ ಮಾರುಕಟ್ಟೆ ಸಿಗುವ ಈ ಸಮಯದಲ್ಲಿ ಅಡಕೆಕಾಯಿ ಮತ್ತು ಗೋಟು ಸುಲಿಯಲು ಸಾಕಷ್ಟು ಪರದಾಡುವ ರೈತರ ಪಾಡು ಕಣ್ಮುಂದೆ ನೋಡಿದ ನಾನು ಕೂಡ ರೈತನಾಗಿ ಕೂಲಿ ಕಾರ್ಮಿಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ನವೀನ ಯಂತ್ರಗಳ ನಮ್ಮಲ್ಲೇ ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಉತ್ತಮ ಸ್ಪಂದನೆ ದೊರೆತ ಹಿನ್ನಲೆ ಚೇಳೂರು, ಗುಬ್ಬಿಯಲ್ಲಿ ಘಟಕ ಆರಂಭಿಸಿ ರೈತರಿಗೆ ಯಂತ್ರಗಳ ಬಳಕೆ ಹಾಗೂ ರಿಪೇರಿ ಮಾಡಿಕೊಳ್ಳುವ ಹಾಗೂ ಬಿಡಿ ಭಾಗಗಳ ಮಾರಾಟ ನಡೆಸಿದ್ದೇವೆ. ಯಂತ್ರ ಖರೀದಿಸುವ ವರ್ಷದ ಎಲ್ಲಾ ರೈತರಿಗೆ ಆತ್ಮೀಯ ಅಭಿನಂದನೆ ಸಲ್ಲಿಸಲು ವರ ಮಹಾಲಕ್ಷ್ಮೀ ಹಬ್ಬದಂದು ಆಯ್ಕೆ ಮಾಡಿ ಪ್ರತಿ ವರ್ಷ ಕಾರ್ಯಕ್ರಮ ನಡೆಸಿ ರೈತರಿಗೆ ಕೃಷಿ ನಡೆಸಲು ಉತ್ತೇಜನ ನೀಡಲಾಗುತ್ತಿದೆ ಎಂದ ಅವರು ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಸಮ್ಮುಖದಲ್ಲಿ ನೂರು ರೈತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಯುವ ರೈತ ಮಂಜುನಾಥ್ ಅವರ ಕೃಷಿ ಆಸಕ್ತಿ ಹಾಗೂ ಹೊಸ ತಂತ್ರಜ್ಞಾನ ಬಳಸಿ ಯಂತ್ರಗಳ ತಯಾರಿಕೆ ಯುವ ಪೀಳಿಗೆಗೆ ಮಾದರಿ ಎನಿಸಿದ್ದಾರೆ. ವಾಣಿಜ್ಯ ಅಡಕೆ ಬೆಳೆ ಹೆಚ್ಚಾದಂತೆ ಈ ಯಂತ್ರಗಳ ಬಳಕೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಯಂತ್ರಗಳ ಬಳಕೆಗೆ ಸ್ಫೂರ್ತಿ ತುಂಬಲು ಜಿಲ್ಲೆಯ ರೈತರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.