ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತಾಲೂಕಿನ ಕೇಶವಪುರ ಮಾರುತಿ ಪುರದ ಸಮೀಪದ ಹೂವಿನ ಕೋಣೆ ಎಂಬ ಊರು ಈಗ ಸುದ್ದಿಯಲ್ಲಿದೆ ಬಹುತೇಕ ಗಂಗಾಮತಸ್ಥರೇ ಇರುವ ಊರಿನಲ್ಲಿ ಸುಮಾರು 45 ಮನೆಗಳಿವೆ ಮಟ್ಟಿ ಮನೆ ದೊಡ್ಡೇರಿ ಎನ್ನುವ ಎರಡು ಕುಟುಂಬಗಳು ಇರುವ ಊರಿನಲ್ಲಿ ಒಂದರಿಂದ ಐದನೇ ತರಗತಿಯ ಸರ್ಕಾರಿ ಶಾಲೆ ಇದೆ ಸುಮಾರು 18 ಜನ ಮಕ್ಕಳು ಇಲ್ಲಿ ಓದುತ್ತಿದ್ದಾರೆ.
ಹೂವಿನಕೋಣೆ ಸರ್ಕಾರಿ ಶಾಲೆಗೆ ತನ್ನದೇ ಆದ ಹಿಂದೆ ಅಲ್ತಾಫ್ ಹಾಗೂ ತೀರ್ಥ್ ಕುಮಾರ್ ಎನ್ನುವ ಶಿಕ್ಷಕರು ಇದ್ದಾಗ ಈ ಶಾಲೆ ಉತ್ತುಂಗ ಸ್ಥಿತಿಯಲ್ಲಿತ್ತು ಆಗ ಸುಮಾರು 35 ಜನ ಮಕ್ಕಳಿದ್ದರು ಈಗ ಅದು 18 ಜನಕ್ಕೆ ಇಳಿದಿದೆ. ಈಗ ಅಲ್ತಾಫ್ ಹಾಗೂ ತೀರ್ಥ್ ಕುಮಾರ್ ಇಬ್ಬರ ಟೀಚರ್ ಗಳು ಇಲ್ಲ ಈಗ ಅತಿಥಿ ಶಿಕ್ಷಕರುಗಳು ಇದ್ದಾರೆ ಒಬ್ಬರು ಶಿವಮೊಗ್ಗದಿಂದ ಬಂದರೆ ಇನ್ನೊಬ್ಬರು ಸ್ಥಳೀಯ ವಿಜಯಪುರದಿಂದ ಬರುತ್ತಾರೆ
ಸ್ಥಳೀಯವಾಗಿ ಬರುವ ಅತಿಥಿ ಟೀಚರ್ ಮಹಿಳೆ ಆಗಿದ್ದಾರೆ. ಇವರ ಜೊತೆಗೆ ಅಡುಗೆ ಮಾಡುವ ಸಿಬ್ಬಂದಿ ಒಬ್ಬರು ಇದ್ದಾರೆ ಒಟ್ಟಾರೆ ನಾಲ್ಕು ಜನ ಇದ್ದಾರೆ. ಈ ಶಾಲೆ ಈಗ ಸುದ್ದಿಯಲ್ಲಿದೆ ಏಕೆಂದರೆ ಈ ಶಾಲೆಯ ನೀರಿನ ಟ್ಯಾಂಕಿಗೆ ವಿಷ ಹಾಕಲಾಗಿದೆ. ಇದು ದೊಡ್ಡ ಮಟ್ಟದ ಸುದ್ದಿಯಾಗಿದ್ದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣ ತನಿಖೆ ನಡೆಸುವಂತೆ ಎಸ್ ಪಿ ಅವರಿಗೆ ಸೂಚಿಸಿದ್ದರು.
ಎಸ್ ಪಿ ಮಿಥುನ್ ಕುಮಾರ್ ಅವರು ಸಹ ಸ್ಥಳಕ್ಕೆ ಭೇಟಿ ನೀಡಿ ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿ ನಾಲ್ಕು ತಂಡಗಳನ್ನು ರಚನೆ ಮಾಡಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು.

ಇವರ ಆದೇಶದ ಮೇರೆಗೆ ವಿವಿಧ ಹಂತಗಳಲ್ಲಿ ತನಿಖೆ ನಡೆಯುತ್ತಿದೆ ಆಡಳಿತ ಮಂಡಳಿ, ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ಪೋಷಕರು, ಊರಿನ ಜನರು, ಇವೆಲ್ಲದರ ಜೊತೆಗೆ ಶಾಲೆಯ ಮಕ್ಕಳನ್ನು ಪೊಲೀಸ್ ಇಲಾಖೆ ವಿಚಾರಣೆಗೆ ಒಳಪಡಿಸಿದ್ದರು.
ಹೂವಿನಕೋಣೆ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣದಿಂದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ನಾಲ್ಕು ದಿನಗಳ ಹಿಂದೆ ದಾಖಲಾಗಿದ್ದರು. ಬಹಳ ಗಂಭೀರವಾಗಿದ್ದ ವಿಷಯ ಮಕ್ಕಳಾಟಿಕೆಯಲ್ಲಿ ಕೊನೆಯಾಗಿದೆ. ಮಕ್ಕಳ ಹುಡುಗಾಟಿಕೆಯಲ್ಲಿ ನೀರಿಗೆ ವಿಷ ಬೆರೆಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರವರು ಸಹ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಭಯೋತ್ಪಾದನೆಗಿಂತ ಗಂಭೀರ ವಿಷಯ ಎಂದು ತಿಳಿಸಿದ್ದರು.
ಸಿಎಂ ಅವರ ಅದೇಶ ಬೆನ್ನಲ್ಲೇ ತನಿಖೆ ಚುರುಕುಗೊಂಡಿತ್ತು. ಪೊಲೀಸರು ಫುಲ್ ಅಲರ್ಟ್ ಆಗಿದ್ದು ವಿವಿಧ ರೀತಿಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣ ಭೇದಿಸಲು ಮೂರು ತಂಡಗಳ ರಚನೆಯನ್ನು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಡಿದ್ದರು. ತನಿಖೆಗಾಗಿ ಒಟ್ಟು 18 ಪೊಲೀಸರ ನಿಯೋಜಿಸಿದ್ದರು.
ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ತಂಡ ರಚನೆ ಆಗಿತ್ತು. ಟೆಕ್ನಿಕಲ್ ಎವಿಡೆನ್ಸ್ ಕಲೆಹಾಲು ಪೊಲೀಸರು ಮುಂದಾಗಿದ್ದಾರೆ. ಟವರ್ ಡಂಪ್ ಮೂಲಕ ತನಿಖೆ ಆರಂಭ ಮಾಡಿದ್ದರು.

ಐದನೇ ತರಗತಿಯ ಬಾಲಕನೇ ಈ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ.ಈ ಘಟನೆ ನಡೆಯುವ 15 ದಿನಗಳ ಹಿಂದೆ ಈತನ ಸ್ನೇಹಿತ ಫಿನಾಯಿಲ್ ಹಾಕಿದ್ದನ್ನ ಗಮನಿಸಿದ ಬಾಲಕ ನೀರಿಗೆ ವಿಷ ಬೆರೆಸಿದ್ದಾನೆ ಎಂದು ತಿಳಿದು ಬಂದಿದೆ. ಮಕ್ಕಳ ಈ ಹುಡುಗಾಟಿಕೆ ಇತರರ ಪ್ರಾಣಕ್ಕೆ ಆಪತ್ತು ತಂದಿತ್ತು.