ಧರ್ಮಸ್ಥಳದ ನೇತ್ರಾವತಿ ನದಿ ಪರಿಸರದಲ್ಲಿ ಅಕ್ರಮವಾಗಿ ಮಾನವ ದೇಹಗಳನ್ನು ಹೂಳಲಾಗಿದೆ ಎಂಬ ದೂರು ಆಧರಿಸಿ ನಡೆಯುತ್ತಿರುವ ಕಾರ್ಯಾಚರಣೆ ವೇಳೆ ಪಾಯಿಂಟ್ ನಂಬರ್ 11ರ ಸಮೀಪದಲ್ಲಿ ಬೇರೆ ಒಂದು ಸ್ಥಳದಲ್ಲಿ ಮೂಳೆ ಪತ್ತೆಯಾಗಿದೆ ಎಂದು ಮಾಹಿತಿ ಲಭಿಸಿದೆ. ಬಂಗ್ಲಗುಡ್ಡೆಯಲ್ಲಿ ಮೂಳೆ ಸಿಕ್ಕಿದೆ ಎಂದು ಎಸ್‌ಐಟಿ ಮೂಲಗಳಿಂದ ತಿಳಿದುಬಂದಿದೆ.
ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದು ಈ ಪೈಕಿ ಆರನೇ ಸ್ಥಳದಲ್ಲಿ ಮೂಳೆಗಳು ಪತ್ತೆಯಾಗಿದೆ. ಇಂದು 11ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾದಾಗ ಅನಾಮಿಕ ದೂರುದಾರ ಅದರ ಸಮೀಪದಲ್ಲೇ ಇರುವ ಮತ್ತೊಂದು ಸ್ಥಳದಲ್ಲಿಯೂ ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? BREAKING NEWS | ಧರ್ಮಸ್ಥಳ ಪ್ರಕರಣ: ಪಾಯಿಂಟ್ ನಂ 6ರಲ್ಲಿ ಮೂಳೆ ಪತ್ತೆ
ದೂರುದಾರ ತಿಳಿಸಿದ ಈ ಹಿಂದೆ ಗುರುತು ಮಾಡದ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಮೂಳೆಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ದೂರುದಾರ ತೋರಿಸಿದಂತೆ ಮತ್ತೆ ಒಟ್ಟಾಗಿ 17 ಪಾಯಿಂಟ್ ಗುರುತು ಮಾಡಲಾಗಿದೆ. ಎಸ್‌ಐಟಿ ಒಟ್ಟಾಗಿ 30 ಕಡೆ ಹುಡುಕಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಆರನೇ ಪಾಯಿಂಟ್‌ನಲ್ಲಿ ಮಾನವ ದೇಹದ ಸೊಂಟದ ಕೆಳಭಾಗದ ಮೂಳೆಗಳು ಸಿಕ್ಕಿದ್ದವು. ಇದೀಗ ಮೂಳೆ ಮಾತ್ರವಲ್ಲದೆ ಮಹಿಳೆಯ ಬಟ್ಟೆಯೂ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ.
