ರಾಣೇಬೆನ್ನೂರು ತಾಲೂಕಿನ ಹುಲಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟು ವರ್ಷಗಳ ಕಾಲ ಸೇವೆಸಲ್ಲಿಸಿ ನಿವೃತ್ತಿಯಾಗುತ್ತಿರುವ ಎಂ ಎಚ್ ಬಜ್ಜಿ ಗುರುಗಳಿಗೆ ಎಸ್‌ಡಿಎಂಸಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಸದಸ್ಯರು ಶಿಕ್ಷಕರ ಗುರುಬಳಗದೊಂದಿಗೆ ಹಾಗೂ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಮಸ್ತ ಪದಾಧಿಕಾರಿಗಳು ಗ್ರಾಮಸ್ಥರು ಸೇರಿ ಸನ್ಮಾನಿಸಿ ಗೌರವಿಸಿ ಅಭಿನಂದನಾ ಪತ್ರ ನೀಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರು ಭೀಮಪ್ಪ ಕುಡಪಲಿ ಮಾತನಾಡಿ, “ಎಂ ಎಚ್ ಬಜ್ಜಿ ಗುರುಗಳು ನಮ್ಮ ಹುಲಿಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ವರ್ಷ ನಮ್ಮ ಶಾಲೆಯ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ನಮ್ಮ ಶಾಲೆಯ ಹೆಮ್ಮೆಯ ಗುರುಗಳಾಗಿದ್ದಾರೆ. ಇವತ್ತಿನ ದಿನ ನಮ್ಮ ಶಾಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯರಿಂದ, ಎಸ್‌ಡಿಎಂಸಿ ಸದಸ್ಯರಿಂದ ಹಾಗೂ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಿಂದ, ಶಾಲಾ ಶಿಕ್ಷಕರ ವತಿಯಿಂದ ಸನ್ಮಾನಿಸಿ ಗೌರವಿಸಿ ಅಭಿನಂದನೆ ಪತ್ರ ಹಾಗೂ ಸವಿನೆನಪಿನ ಉಡುಗುರೆ ಕೊಟ್ಟು ಬೀಳ್ಕೊಡುತ್ತಿದ್ದೇವೆ. ಮುಂದೆ ಅವರು ನಮ್ಮ ಶಾಲೆಯನ್ನು ಮರೆಯದೆ ಶಾಲೆಯ ಶುಭ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ನಮ್ಮ ಊರಿನ ಜಾತ್ರೆ ಹಬ್ಬಗಳಲ್ಲಿ ಭಾಗವಹಿಸಬೇಕು. ಗುರುಗಳು ಶಾಲೆಗೆ ಬಂದಾಗ ಮಕ್ಕಳು, ಗ್ರಾಮಸ್ಥರು ಗುರುಗಳಿಗೆ ಗೌರವಗಳೊಂದಿಗೆ ನಮಸ್ಕರಿಸುವಂತಹ ಮನೋಭಾವನೆ ಬಂದಾಗ ಮಾತ್ರ ಸುದೀರ್ಘವಾಗಿ ಸೇವೆಸಲ್ಲಿಸಿದ್ದಕ್ಕೂ ಸಾರ್ಥಕವಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಡಿವೈಎಫ್ಐ ಮನವಿಗೆ ಬಿಇಒ ಸ್ಪಂದನೆ: ಜಾರದಗುಡ್ಡೆ ಶಾಲೆಯ ಅವ್ಯವಸ್ಥೆ ಸರಿಪಡಿಸುವ ಭರವಸೆ
ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹನಗೋಡಿಮಠ, ಮುಖ್ಯೋಪಾಧ್ಯಾಯ ಕಾಳಿಂಗಪ್ಪ ಆಲದಗೇರಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ ಬಣಕಾರ, ಸ್ವಾಕರವೇ ತಾಲೂಕ ಅಧ್ಯಕ್ಷ ಚಂದ್ರಪ್ಪ ಬಣಕಾರ, ಚಂದ್ರುಗೌಡ, ಕೆಂಚನಗೌಡ್ರು, ಸಾಕಮ್ಮ, ಸುಮಾ ಕೋಲಕಾರ ಸೇರಿದಂತೆ ಶಾಲೆಯ ಸಹ ಶಿಕ್ಷಕರು, ಸುತ್ತಮುತ್ತಲಿನ ಶಾಲೆಯ ಸಹ ಶಿಕ್ಷಕರು, ಗ್ರಾಮಸ್ಥರು ಶಾಲೆಯ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.