ಶಿವಮೊಗ್ಗ ಗ್ರಾಮಾಂತರದ ಆಯನೂರು/ಕೋ ಹಳ್ಳಿಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳು sdmc ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪೋಷಕರು ಗ್ರಾಮಸ್ಥರು ಒಟ್ಟಾಗಿ ಧರಣಿ ಸತ್ಯಾಗ್ರಹ ಮಾಡಿದ್ದಾರೆ.
ವಿಷಯ ಏನಂದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ನೂರಿಂದ ನೂರ ಹತ್ತು ವಿದ್ಯಾರ್ಥಿಗಳು ಇರುವ ಈ ಶಾಲೆಯಲ್ಲಿನ, ತರಗತಿಗಳಿಗೆ ಕೊಠಡಿಗಳು ಲಭ್ಯವಿಲ್ಲವೆಂದು, ಇರುವ ಕೊಠಡಿಗಳಲ್ಲಿ 2 ಕೊಠಡಿ ಹಳೆಯದಾಗಿರುತ್ತದೆ ಎಂದು ಆರೋಪಿಸಿರುತ್ತಾರೆ.

ಶಿಥಿಲವಾಗಿರುವ ಕಟ್ಟಡಗಳು ಈ ಮಳೆಗಾಲದಲ್ಲಿ, ಮಳೆ ನೀರಿನಿಂದ ಸೋರುತ್ತಿದೆ, ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಕೇಳಲು ವಿಪರೀತ ತೊಂದರೆ ಆಗುತ್ತಿದೆ.
ಹಾಗಾಗಿ ನೂತನ ಕಟ್ಟಡ ನಿರ್ಮಿಸಿಕೊಡಿ, ಹಾಗೂ ದಾಖಲಾತಿ ಹೆಚ್ಚಾಗಿರುವುದರಿಂದ ಮಕ್ಕಳು ಶಾಲೆಯ ವರಾಂಡದಲ್ಲಿ ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ಎದುರಾಗಿರುವದರಿಂದ ಮಕ್ಕಳಿಗೆ ತೊಂದರೆ ತೀವ್ರ ಸಮಸ್ಯೆ ಎದುರಾಗಿರುತ್ತದೆ.
ಈ ಸಮಸ್ಯೆಯನ್ನು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿಯನ್ನು ನೀಡಿದರು ತೀವ್ರ ನಿರ್ಲಕ್ಷತನ ತೋರಿರುವುದರಿಂದ, ಇಲ್ಲಿಯವರೆಗೆ ಯಾವದೇ ಮೂಲಭೂತ ಸೌಕರ್ಯವಿಲ್ಲದಾಗಿದೆ ಎಂದು ಆರೋಪಿಸಿದ್ದಾರೆ, ಮತ್ತು ಶಿಕ್ಷಣ ಇಲಾಖೆಗೆ ಹಲವಾರು ಮನವಿ ನೀಡಿದರು ಸಹ ಇಲ್ಲಿಯವರೆಗೆ ಯಾವದೇ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ಶಿಕ್ಷಣ ಇಲಾಖೆಗೆ ಹಲವು ಬಾರಿ ತಿಳಿಸಿ ಹೇಳಿದರು ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ವಿಷಯಯನ್ನೇ ನಿರ್ಲಕ್ಷ ಮಾಡಿದ್ದೂ ಈ ಸಂಬಂಧ SDMC,ಪೋಷಕರು,ಗ್ರಾಮಸ್ಥರು, ವಿದ್ಯಾರ್ಥಿಗಳೆಲ್ಲ ಬೆಸೆತ್ತು ಇಂದು ಶಾಲೆಯ ತರಗತಿ ಬಹಿಷ್ಕರಿಸುವ ಮೂಲಕ ಧರಣಿ ಸತ್ಯಗ್ರಹ ನೆಡೆಸಿದ್ದಾರೆ.
ಸರ್ಕಾರಿ ಶಾಲೆ ಉಳಿಸಿ, ಶಾಲೆ ಬೆಳೆಸಿ ಎಂದು ಹೇಳುವ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ,ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಪಾಠ ಮಾಡುವುದು ಹೇಗೆ ಅಂತ ತಿಳಿಸಿ ಬೇಕು ಎಂದು ಪ್ರಶ್ನಿಸಿದ್ದಾರೆ ? ಮತ್ತೆ ಕೊಠಡಿ ನಿರ್ಮಾಣ ಮಾಡಿಕೊಡಿ ಎಂದು ಪೋಷಕರಾದ ಅಬ್ದುಲ್ ಕಲೀಲ್ ತಿಳಿಸಿದರು.

ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ಸಿಕ್ಬತ್ತ್ ಉಲ್ಲಾ , ಮೊಹಮ್ಮದ್ ಖಾಲಿದ್ ಸದಸ್ಯರಾದ ಜಲಾಲ್ ಸಾಬ್, ರುಕ್ಸನ, ಬಾನು,ಸಾಬಿಹಾ ಬಾನು ಹಾಗೂ ಸೈಫುಲ್ಲಿ ಖಾನ್ ಇತರ ಪೋಷಕರು ಧರಣಿ ಯಲ್ಲಿ ಭಾಗವಹಿಸಿ ಕೊಠಡಿಯನ್ನು ತುರ್ತು ನಿರ್ಮಾಣ ಮಾಡಿಕೊಡಿ ಎಂದು ಆಗ್ರಹಿಸಿರುತ್ತಾರೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.