ಮಂಗಳೂರಿನ ಬಲ್ಲಾಳ್‌ಬಾಗ್ ವಿವೇಕನಗರದಲ್ಲಿ ಮನೆಯಿಂದ ರೂ.8.55 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಜು. 22ರಂದು ಮನೆಯ ಸದಸ್ಯರು ಹೊರಗೆ ಹೋಗಿದ್ದ ಸಂದರ್ಭ ಮನೆಯಲ್ಲಿ ಹೋಮ್ ನರ್ಸ್ ಮತ್ತು ಅನಾರೋಗ್ಯದ ವಯೋವೃದ್ಧೆ ಮಾತ್ರ ಇದ್ದರು. ಜು. 26ರಂದು ಸೇಫ್ಲಾಕರ್‌ನ ಕೀಲಿಕೈ ಹುಡುಕಾಡಿದಾಗ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಮಂಗಳೂರು | ಅಲ್ಪಸಂಖ್ಯಾತರ ಸೇವಾ ಸಂಸ್ಥೆಗಳಿಗೆ ಅನುದಾನ: ಅರ್ಜಿ ಆಹ್ವಾನ
ಜು. 28ರಂದು ಹೊಸ ಬೀಗ ಮತ್ತು ಕೀಲಿಕೈಯನ್ನು ಮಾಡಿಸಲಾಗಿತ್ತು. ಜು. 29ರಂದು ಆ ಕೀಲಿಕೈಯ ಸಹಾಯದಿಂದ ಕಪಾಟಿನ ಸೇಫ್ಲಾಕರ್ ತೆರೆದಾಗ ಅದರಲ್ಲಿದ್ದ 171 ಗ್ರಾಂ ಚಿನ್ನಾಭರಣ ಕಳವಾಗಿರುವುದು ಮನೆಯವರ ಗಮನಕ್ಕೆ ಬಂದಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
