ವಿಜಯನಗರದ ಕಮಲಾಪುರ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಹಾಗೂ ಪ್ರತಿ ಕಾಲೇಜು ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ ವಿಜಯನಗರ ತಾಲೂಕು ಸಮಿತಿ ಒತ್ತಾಯಿಸಿದೆ.
ಕಮಲಾಪುರದ ಪುರಸಭೆಯ ಮುಖ್ಯಧಿಕಾರಿ ಡಿ ಈರಣ್ಣ, ಬಸ್ ನಿಲ್ದಾಣ ಅಧಿಕಾರಿಗಳು ಪಿ.ವಾಸುದೇವ್ ಹಾಗೂ ಕೆಡಿಪಿ ಮೆಂಬರ್ ಕಾಳಪ್ಪ ಅವರಿಗೆ ಎಸ್‌ಎಫ್‌ಐ ಮನವಿ ಪತ್ರ ಸಲ್ಲಿಸಿದೆ.
ಎಸ್ಎಪ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವರೆಡ್ಡಿ ಮಾತನಾಡಿ, “ಕಮಲಾಪುರುದ ಸುತ್ತು ಮುತ್ತಲಿನ ಗ್ರಾಮೀಣ ಪ್ರದೇಶದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಕಮಲಾಪುರದ ಕಾಲೇಜಿಗೆ ಬರುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆ ಹಾಗಾಗಿ ಅದಕ್ಕೆ ಅವಕಾಶ ಕೊಡದೆ ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದ ಹಳ್ಳಿಗಳಿಗೆ ಕೂಡುಲೆ ಬಸ್ ಬಿಡಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಸಹಕಾರ್ಯದರ್ಶಿ ಕೆ.ಎ. ಪವನ್ ಕುಮಾರ್ ಮಾತನಾಡಿ, “ಕಾಲೇಜು ಇಲ್ಲದ ಸಮಯದಲ್ಲಿ ಪುಂಡ ಪೋಕರಿಗಳು ಕಾಲೇಜಿನ ಆವರಣದಲ್ಲಿ ಡ್ರಿಂಕ್ಸ್, ಅನೈತಿಕ ಚಟುವಟಿಕೆಗಳು, ಹಾಗೂ ಕಾಲೇಜು ಗೋಡೆಗಳ ಮೇಲೆ ಅಶ್ಲೀಲ ಬರೆಯುತ್ತಿದ್ದಾರೆ. ಹಾಗಾಗಿ ಇದಕ್ಕೆಲ್ಲಾ ಕಡಿವಣ ಹಾಕವಂತೆ ಎಸ್‌ಎಫ್‌ಐ ಒತ್ತಾಯಿಸುತ್ತದೆ.. ಅಲ್ಲದೇ ಶಾಲಾ-ಕಾಲೇಜು ಒಂದೇ ಆವರಣದಲ್ಲಿ ಇರವುದರಿಂದ ಕಾವಲುಗಾರನನ್ನು ನೇಮಕ ಮಾಡಬೇಕು. ಕಾಲೇಜಿನ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಜಯನಗರ | ಮಕ್ಕಳ ಸಾಹಿತ್ಯಕ್ಕೆ ಅಂತರಾಳದ ಅಭಿವ್ಯಕ್ತಿ ಅತ್ಯಗತ್ಯ: ಡಾ. ಕೆ ಶಿವಲಿಂಗಪ್ಪ ಹಂದಿಹಾಳು
ಈ ವೇಳೆ ಕಾಲೇಜು ಘಟಕದ ಅಧ್ಯಕ್ಷೆ ಹರಿಪ್ರಿಯಾ, ಕಾರ್ಯದರ್ಶಿ ದುರ್ಗೇಶ್, ಉಪಾಧ್ಯಕ್ಷ ಸುಭಾಷ್, ಸುಲೋಚನ, ಮೋಹಿನಿ ಶ್ರೀನಿಧಿ, ಸಹಕಾರ್ಯದರ್ಶಿ ಕೇಶವ, ರಮೇಶ್, ಅಜಯ, ಸದಸ್ಯ ವೀರೇಶ್, ನಾಗರಾಜ್, ಮಾರೆಮ್ಮ ಹಾಗೂ ನುರೂರು ವಿದ್ಯಾರ್ಥಿಗಳು ಇದ್ದರು.