ಸ್ಥಳೀಯವಾಗಿ ಕೆಲವೇ ಬೆರಳೆಣಿಕೆಯಷ್ಟು ಬಸ್ ಗಳ ಸಂಚಾರ, ದೂರದೂರುಗಳಿಗೆ ತೆರಳಲು ಮುಂಜಾನೆಯಿಂದಲೇ ಆಗಮಿಸುತ್ತಿದ್ದ ಪ್ರಯಾಣಿಕರು, ಸರ್ಕಾರದ ಮಾತುಕತೆಗೆ ಬಗ್ಗದೇ ಮುಷ್ಕರ ಮುಂದುವರೆಸಿರುವ ಕೆಎಸ್ ಆರ್ ಟಿಸಿ ನೌಕರರು. ಚಿಕ್ಕಮಗಳೂರಿನಲ್ಲಿ ಸಾಮಾನ್ಯವಾಗಿ ಈದಿನ ಬೆಳಗ್ಗೆಯಿಂದಲೇ ಕಂಡು ಬಂದ ದೃಶ್ಯಗಳು. ಬಸ್ ಸಂಚಾರ ವಿರಳವಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲದ ಬಿಸಿ ತಟ್ಟಲಾರಂಬಿಸಿದೆ.
ಚಿಕ್ಕಮಗಳೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಹಾವಳಿ ಹೆಚ್ಚಾಗಿದೆ. ಎಲ್ಲಿ ನೋಡಿದರು ಖಾಸಗಿ ವಾಹನಗಳು ನಿಂತಿವೆ. ಪ್ರಯಾಣಿಕರು ದುಬಾರಿ ಹಣ ಕೊಟ್ಟು ಹೋಗಲು ಕಷ್ಟಕರವಾಗಿದೆ ಎಂದು ಪ್ರಯಾಣಿಕರು ಈದಿನ. ಕಾಮ್ ಗೆ ಮಾಹಿತಿ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪ್ರವಾಸಿ ತಾಣಕ್ಕೆ ಆನ್ ಲೈನ್ ನೋಂದಣಿ ನಿಷೇಧಿಸಿ: ಎದ್ದೇಳು ಕರ್ನಾಟಕ ಆಗ್ರಹ
ಶಾಲಾ, ಕಾಲೇಜಿನಿಂದ ಮರಳಿ ಮನೆಗೆ ತೇರಳಬೇಕಾದ ವಿದ್ಯಾರ್ಥಿಗಳಿಗೆ ತುಂಬ ಸಮಸ್ಯೆಯಾಗುತ್ತಿದೆ. “ನಾವು ಕಾಲೇಜು ಮುಗಿಸಿ ಮನೆಗೆ ಹೋಗಲು ಬಸ್ ಇಲ್ಲದೆ, ಆಟೋದವರನ್ನ ನಾನು ಮತ್ತು ನನ್ನ ಸ್ನೇಹಿತರು ಕೇಳಿದಕ್ಕೆ ಎರಡು ಪಟ್ಟು ಹಣ ಕೇಳಿದರು. ಏನು ಮಾಡೋದು ಗೊತ್ತಾಗುತ್ತಿಲ್ಲ” ಎಂದು ದ್ವಿತೀಯ ಪದವೀಧರ ವಿದ್ಯಾರ್ಥಿನಿ ಈದಿನ. ಕಾಮ್ ಜೊತೆ ಮಾತಾಡಿದರು.