ಧರ್ಮಸ್ಥಳದ ನೇತ್ರಾವತಿ ನದಿ ಪರಿಸರದಲ್ಲಿ ಅಕ್ರಮವಾಗಿ ಮಾನವ ದೇಹಗಳನ್ನು ಹೂಳಲಾಗಿದೆ ಎಂಬ ದೂರು ಆಧರಿಸಿ ಹಲವು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು 11ನೇ ಪಾಯಿಂಟ್ ಸಮೀಪದಲ್ಲಿ ಸುಮಾರು 8-9 ತಿಂಗಳ ಹಳೆಯ ಸಂಪೂರ್ಣ ಅಸ್ಥಿಪಂಜರ ಸಿಕ್ಕಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ “ಈ ವರದಿ ಸುಳ್ಳು, ಸಿಕ್ಕಿರುವುದು ಹಳೆಯ ಅಸ್ಥಿಪಂಜರ, ಹೊಸದಲ್ಲ” ಎಂದು ಎಸ್ಐಟಿ ಮೂಲಗಳು ಈದಿನ ಡಾಟ್ ಕಾಮ್‌ಗೆ ತಿಳಿಸಿದೆ.
ದೂರುದಾರ ಗುರುತಿಸಿದ್ದ 13 ಸ್ಥಳಗಳ ಪೈಕಿ ಆರನೇ ಪಾಯಿಂಟ್ ಮತ್ತು 11ನೇ ಪಾಯಿಂಟ್‌ನ ಸಮೀಪದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. 11ನೇ ಪಾಯಿಂಟ್‌ನ ಸಮೀಪದಲ್ಲಿ ಮರದ ಬುಡದಲ್ಲಿ ಸಂಪೂರ್ಣ ಅಸ್ಥಿಪಂಜರ ಸಿಕ್ಕಿದೆ, ಅದು 8-9 ತಿಂಗಳು ಹಳೆಯದ್ದು ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಇದು ಸುಳ್ಳು ಮಾಹಿತಿ. ಈವರೆಗೆ ಸಿಕ್ಕಿರುವುದೆಲ್ಲವೂ ಹಳೆಯ ಅಸ್ಥಿಪಂಜರಗಳು ಎಂದು ಎಸ್ಐಟಿ ಮೂಲಗಳು ಈದಿನ ಡಾಟ್ ಕಾಮ್‌ಗೆ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? BREAKING NEWS | ಧರ್ಮಸ್ಥಳ ಪ್ರಕರಣ: ಪಾಯಿಂಟ್ ನಂ 11ರ ಸಮೀಪದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ
ನಿನ್ನೆ ನಡೆದ ಕಾರ್ಯಾಚರಣೆ ವೇಳೆ ದೂರುದಾರ 11ನೇ ಪಾಯಿಂಟ್‌ನ ಸಮೀಪದ ಪ್ರದೇಶದಲ್ಲೂ ಅಕ್ರಮವಾಗಿ ಮೃತದೇಹ ಹೂತಿರುವುದಾಗಿ ತಿಳಿಸಿದ್ದಾನೆ. ಹಾಗೆಯೇ ಹೊಸದಾಗಿ ಇನ್ನೂ 17 ಸ್ಥಳಗಳನ್ನು ಗುರುತಿಸಲಾಗಿದ್ದು, ಒಟ್ಟು 30 ಸ್ಥಳಗಳನ್ನು ಗುರುತು ಮಾಡಲಾಗಿದೆ. 11ನೇ ಪಾಯಿಂಟ್ ಸಮೀಪ ಅಸ್ಥಿಪಂಜರದ ಅವಶೇಷವೂ ಪತ್ತೆಯಾಗಿದೆ.
ಈ ಬೆನ್ನಲ್ಲೇ ಟಿವಿ9 ಸೇರಿದಂತೆ ಹಲವು ಮಾಧ್ಯಮಗಳು ದೂರುದಾರ ಹೊಸದಾಗಿ ಗುರುತಿಸಿದ ಸ್ಥಳದಲ್ಲಿ ಮರದ ಬುಡದಲ್ಲಿ 8ರಿಂದ 9 ತಿಂಗಳು ಹಳೆಯ ಅಸ್ಥಿಪಂಜರ ಸಿಕ್ಕಿದೆ. ಸಂಪೂರ್ಣ ಅಸ್ಥಿಪಂಜರ ಸಿಕ್ಕಿದ್ದು, ಅದು ಪುರುಷನದ್ದು ಎಂದು ವರದಿ ಮಾಡಿದೆ. ದೂರುದಾರ 1990-2000ರ ವ್ಯಾಪ್ತಿಯಲ್ಲಿ ಆಗಿರುವ ಪ್ರಕರಣಗಳ ಬಗ್ಗೆ ತಿಳಿಸಿದ್ದಾನೆ. ಆದರೆ ಇದು 8ರಿಂದ 9 ತಿಂಗಳು ಹಳೆಯ ಅಸ್ಥಿಪಂಜರ ಎಂದು ಮಾಧ್ಯಮಗಳು ಹೇಳಿಕೊಂಡಿದೆ.
ಈ ಬಗ್ಗೆ ಎಸ್‌ಐಟಿ ತಂಡವನ್ನು ಈದಿನ ಡಾಟ್ ಕಾಮ್ ಸಂಪರ್ಕಿಸಿದ್ದು, “ಇವೆಲ್ಲವೂ ಸುಳ್ಳು ಸುದ್ದಿಗಳು. ನಿನ್ನೆ ಸಿಕ್ಕಿರುವಂತದ್ದು ಹಳೆಯ ಮೃತದೇಹ, ಹೊಸದಲ್ಲ. ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿದ್ದು ಅದನ್ನು ನಂಬಬೇಡಿ” ಎಂದು ಎಸ್ಐಟಿ ಮೂಲಗಳು ಈದಿನ ಡಾಟ್ ಕಾಮ್‌ಗೆ ತಿಳಿಸಿದೆ.
