1925ರಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ಜನ್ಮತಾಳಿ 100 ವರ್ಷಗಳ ಸಂಭ್ರಮ ಹಾಗೆಯೇ, 50 ವರ್ಷಗಳ ಇತಿಹಾಸ ಹೊಂದಿರುವ ಚಿಕ್ಕಮಗಳೂರು ಜಿಲ್ಲಾ ಸಮಿತಿಯ 14ನೇ ಜಿಲ್ಲಾ ಸಮ್ಮೇಳನ ಆಗಸ್ಟ್ 7-8 ಕ್ಕೆ ಸಮ್ಮೇಳನ ನಡೆಯಲಿದೆ ಎಂದು ಕಮ್ಯೂನಿಸ್ಟ್ ಪಕ್ಷ ವತಿಯಿಂದ ಪತ್ರಿಕಾಗೋಷ್ಠಿ ಮಂಗಳವಾರ ನಡೆಸಲಾಯಿತು.
ಸುಮಾರು 80ರ ದಶಕದಲ್ಲಿ ಆರಂಭವಾದ ಪಕ್ಷ ನಿರಂತರವಾಗಿ ತೋಟ ಕಾರ್ಮಿಕರ ಹಕ್ಕುಗಳು ಜಿಲ್ಲೆಯ ನಿರುದ್ಯೋಗಿ ಯುವಕರ ಉದ್ಯೋಗ, ವಿದಾರ್ಥಿಗಳಿಗೆ ಸೂಕ್ತ ಹಾಸ್ಟೆಲ್ ವ್ಯವಸ್ಥೆ, ಭೂಹೀನ ರಹಿತರಿಗೆ ಭೂಮಿ (ಬಗರ್ ಹುಕುಂ ಚಳುವಳಿ) ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಮತ್ತು ಶೋಷಿತರ ಹೇಳಿಗೆಗಾಗಿ ಹೋರಾಟ, ನಿವೇಶನರಹಿತರಿಗಾಗಿ ಹೋರಾಟ ನಡೆಸಿ ಜನರಿಗೆ ಭೂಮಿ ಮತ್ತು ವಸತಿ ಕೊಡಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಹೆಗ್ಗಳಿಕೆ ಭಾರತ ಕಮ್ಯೂನಿಸ್ಟ್ ಪಕ್ಷಕ್ಕಿದೆ ಎಂದು ತಾಲೂಕು ಅಧ್ಯಕ್ಷೆ ನಳಿನಾ ತಿಳಿಸಿದರು.
ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಕೇವಲ 600 ಮತಗಳ ಅಂತರದಲ್ಲಿ ಸೋತ ಪಕ್ಷವು, ಹಲವು ತಾಲ್ಲೂಕು, ಪಂಚಾಯಿತಿ, ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ ಸದಸ್ಯರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹಣಬಲ, ಜಾತಿಬಲ, ಚುನಾವಣೆ ವ್ಯವಸ್ಥೆಯಿಂದ ಚುನಾವಣಾ ಗೆಲುವಿನ ಮತ ಪಡೆಯುವಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಿರುವುದು ನಿಜ ಅದರೆ ನೈತಿಕ ಹೋರಾಟದಲ್ಲಿ ಜಿಲ್ಲೆಯ ರಾಜಕೀಯ ವ್ಯವಸ್ಥೆಯನ್ನು ಪ್ರತಿನಿಧಿಸಬಲ್ಲ ಶಕ್ತಿಯಾಗಿರುವುದು ಹೆಮ್ಮೆಯಾಗಿದೆ ಎಂದು ತಿಳಿದರು.
ರಾಜಕೀಯ, ಆರ್ಥಿಕ, ಸಾಮಾಜಿಕ ಅಸಮತೋಲನೆಯಿಂದ ದೇಶ ಮತ್ತು ಸ್ವರ್ಥ ರಾಜಕಾರಣದಿಂದ ರೈತರು, ಕಾರ್ಮಿಕರು, ಯುವಜನರು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಸ್ವಚ್ಛ ನ್ಯಾಯ ಸಮ್ಮಿತ ರಾಜಕೀಯ ವ್ಯವಸ್ಥೆಯನ್ನು ಕಲ್ಪಿಸುವ ಅವಶ್ಯಕತೆಗೆ ಭಾರತ ಕಮ್ಯೂನಿಸ್ಟ್ ಪಕ್ಷದತ್ತ ಜನರ ಸಹಕಾರ ಅಗತ್ಯವಾಗಿದ್ದು, ಜಿಲ್ಲೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ನಡೆಸುವ ಹೋರಾಟ ಮತ್ತು ಸಾಧನೆಗಳನ್ನು ಈ ಸಮಾವೇಶದಲ್ಲಿ ಚರ್ಚಿಸಿ ಪಕ್ಷವನ್ನು ಬಲ ಪಡಿಸಲು ಅಗತ್ಯ ವೇದಿಕೆಯಾನ್ನಾಗಿ ಸಿಕೊಳ್ಳಲು ತೀರ್ಮಾನಿಸಿದೆ ಎಂದು ಕಮ್ಯೂನಿಸ್ಟ್ ಪಕ್ಷದ ಮುಖಂಡರು ತಿಳಿಸಿದರು. ಈ ವೇಳೆ ಸಿಪಿಐ ಮುಖಂಡರು ಭಾಗವಹಿಸಿದರು.