ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಕಾಡಾನೆ ನಾಲ್ಕು ದಿನದಲ್ಲಿ ಇಬ್ಬರನ್ನ ಬಲಿ ಪಡೆದ ಪರಿಣಾಮವಾಗಿ, ಬಾಳೆಹೊನ್ನೂರು-ಖಾಂಡ್ಯ ಬಂದ್ ಮಾಡಿ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಈ ಘಟನೆ ಕುರಿತು ಸರ್ಕಾರ ಶಿವಮೊಗ್ಗದ ಸಕ್ರೆಬೈಲಿನಿಂದ 4 ಕುಮ್ಕಿ ಆನೆಗಳನ್ನ ಕರೆಸಿ ಒಂದು ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಮತ್ತೊಂದು ಆನೆ ಸೆರೆ ಹಿಡಿಯಲು ಅನುಮತಿಗೆ ಮನವಿ ಸಲ್ಲಿಸಲಾಗಿತ್ತು, ನರಸಿಂಹರಾಜಪುರ ತಾಲೂಕಿನ ವಲಯ ಅರಣ್ಯ ವ್ಯಾಪ್ತಿಯ ದ್ವಾರಮಕ್ಕಿ, ಕೋಟೇಬೈಲು, ಗುಡ್ಡದಮನೆ, ಮಳಲಿ, ನೇರಲೇಕೊಪ್ಪ ಹಾಲಂದೂರು, ಗಾಂಧಿಗ್ರಾಮ, ಬಣಗಿ ಮತ್ತು ಮಡಬೂರು ಗ್ರಾಮಗಳಲ್ಲಿ ರೈತರ ಬೆಳೆ ನಷ್ಟ ವಾಗುತ್ತಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ 5ನೇ ತಾರೀಕಿನೊಳಗೆ ಪಡಿತರ ಹಂಚಿಕೆಯಾಗಬೇಕು; ಕರಾಸಪವಿಸ ಆಗ್ರಹ
ಈ ಕುರಿತು ಸಾರ್ವಜನಿಕರ ಜೀವಕ್ಕೆ ತೊಂದರೆ ನೀಡುತ್ತಿರುವ ಇನ್ನೊಂದು ಕಾಡಾನೆ ಸೆರೆ ಹಿಡಿಲು ಅನುಮತಿ ದೊರೆತಿದೆ.