ಕೊಪ್ಪಳ ತಹಶೀಲ್ದಾರ್ ಕಾರ್ಯಾಲಯದ ಮೇಲ್ಫಾವಣಿ ಕುಸಿದು ಬಿದ್ದಿದ್ದು, ಕೆಳಗೆ ಕಟ್ಟಿ ಮೇಲೆ ಕುಳಿತಿದ್ದ ವೃದ್ದೆ ಕ್ಷಣಾರ್ಧದಲ್ಲಿ ಪಾರಾಗಿರುವ ಘಟನೆ ನಡೆದಿದೆ.
ನಗರದ ಶಿವ ಹಾಗೂ ಲಕ್ಷ್ಮೀ ಚಲನಚಿತ್ರ ಮಂದಿರಕ್ಕೆ ಹೋಗುವ ರಸ್ತೆಯಲ್ಲಿರುವ ತಹಶೀಲ್ದಾರ ಕಚೇರಿ ಮೇಲ್ಫಾವಣಿ ಕುಸಿದು ಬಿದ್ದು ಅಧಿಕಾರಿಯ ಕಾರು ಕೂಡ ಜಖಂ ಅಗುವುದು ಸ್ವಲ್ಪದರಲ್ಲೇ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಕಂದಾಯ ಇಲಾಖೆಯ ಕಟ್ಟಡ ತುಂಬಾ ಹಳೆಯದಾಗಿದ್ದು ಕಚೇರಿಯ ಒಳಭಾಗವೂ ಬಹುತೇಕ ಶಿಥಿಲಗೊಂಡಿದೆ. ಮೇಲ್ಫಾವಣಿ ಕುಸಿದಿದ್ದನ್ನು ನೋಡಿದ ಸಿಬ್ಬಂದಿ ಹಾಗೂ ಸಾರ್ವಜನಿಕರು ‘ಯಾರಾದರೂ ಕೈಕಾಲು ಮುರಿದಿದ್ದರೆ ಏನ್ ಗತಿ’ ಎಂದು ಜಿಲ್ಲಾಡಳಿತದ ಮೇಲೆ ಹಿಡಿ ಶಾಪ ಹಾಕಿದರು.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ವಿವಿಧ ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಜಿಲ್ಲಾಡಳಿತದಿಂದ ಅರ್ಜಿ ಆಹ್ವಾನ
ಕೊಪ್ಪಳ ನಗರ ಕಂದಾಯ ಇಲಾಖೆ ಕಟ್ಟಡ ಅಪಾಯದಲ್ಲಿ ಸ್ಥಿತಿಯಲ್ಲಿದ್ದು ಯಾವಾಗ ಕುಸಿದು ಬಿದ್ದು ಯಾರಿಗೆ ಅಪಾಯ ಕಾದಿದೆಯೋ ಎಂಬ ಭಯದಲ್ಲಿ ಸಿಬ್ಬಂದಿ ಹಾಗೂ ತಾಲೂಕಿನ ಸಾರ್ವಜನಿಕರು ಆತಂಕಿತರಾಗಿದ್ದಾರೆ.


