ಯುದ್ಧಭೂಮಿಯಲ್ಲಿ ಕಾದಾಡಲು ನೆರವಾಗಿ ಡಿಕಮಿಷನ್ ಆಗಿರುವ ಟಿ-55 ಸರಣಿಯ ಟ್ಯಾಂಕ್ ಮಂಗಳೂರು ನಗರದ ಕದ್ರಿಯ ಯುದ್ಧ ಸ್ಮಾರಕದಲ್ಲಿ ಇನ್ನೂ ಮುಂದೆ ಪ್ರಮುಖ ಆಕರ್ಷಣೆ ಕೇಂದ್ರವಾಗಲಿದೆ. ಪುಣೆಯ ಆರ್ಮಿ ಆರ್ಡಿನೆನ್ಸ್ ಡಿಪೋದಿಂದ ತಂದಿರುವ ಯುದ್ಧ ಟ್ಯಾಂಕ್ ಸೋಮವಾರ ಸಂಜೆ ನಗರಕ್ಕೆ ತಲುಪಿದೆ.
ಪುಣೆಯಿಂದ ಹೊರಟ ಟ್ಯಾಂಕ್ ಟ್ರೇಲರ್‌ನಲ್ಲಿ ಟಿ-55 ಟ್ಯಾಂಕನ್ನು ನಗರಕ್ಕೆ ತಂದಿದ್ದು ಸ್ವಾತಂತ್ರೋತ್ಸವ ದಿನದ ಮೊದಲೇ ಇಲ್ಲಿ ಇದನ್ನು ಸ್ಥಾಪಿಸುವ ಉದ್ದೇಶವಾಗಿತ್ತು.
ಇದನ್ನೂ ಓದಿ: ಮಂಗಳೂರು | ಹಕ್ಕು ಪ್ರಾಪ್ತಿಗೆ ಹೋರಾಟ ಅನಿವಾರ್ಯ: ಬಿ.ಎಂ ಭಟ್
ಸೇನೆಯಲ್ಲಿ ಯುದ್ಧದ ಸಮಯದಲ್ಲಿ ಬಳಸಿದ ಯಾವುದಾದರೂ ಯಂತ್ರೋಪಕರಣವನ್ನು ನಗರದಲ್ಲಿ ಸ್ಥಾಪಿಸಬೇಕು ಎಂಬ ಬಯಕೆ ಹಿಂದಿನಿಂದಲೇ ಇತ್ತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇದಕ್ಕೆ ಬೆಂಬಲವಾಗಿ ನಿಂತು ಇಲ್ಲಿಗೆ ತರಲು ಪ್ರಯತ್ನಿಸಿದ್ದರು. ನಾಲೈದು ತಿಂಗಳ ಪರಿಶ್ರಮದ ಫಲವಾಗಿ ಟ್ಯಾಂಕರ್ ಕೊನೆಗೂ ನಗರ ತಲುಪಿದೆ. ಹೊಸ ಟ್ಯಾಂಕರ್‌ಗಳು ಬರುವ ಮುನ್ನ ಟಿ-54, ಟಿ-55 ಸರಣಿಯ ಟ್ಯಾಂಕ್‌ಗಳೇ ಭಾರತ ಸೇನಾಪಡೆಯ ಪ್ರಮುಖ ಅಸ್ತ್ರವಾಗಿತ್ತು. ರಾಜಸ್ತಾನದಲ್ಲಿ ಇವುಗಳನ್ನು ಬಳಸಲಾಗುತ್ತಿತ್ತು.
