ಬೆಂಗಳೂರು ಮಾರ್ಕೆಟ್ ಕಡೆ ಹೊರಟಿದ್ದ ಟೊಮೋಟೊ ತುಂಬಿದ್ದ ಲಾರಿ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಎದುರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೋಟಸಾಗರ ಗ್ರಾಮದಿಂದ ರೈತರ ಟೊಮೋಟೊ ತುಂಬಿಕೊಂಡ ಲಾರಿ ಪಟ್ಟಣದ ಗುಬ್ಬಿಯಪ್ಪ ದೇವಾಲಯದ ಮುಂದೆ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ. ಕ್ರೇಟ್ ನಲ್ಲಿ ತುಂಬಿದ್ದ ಟೊಮೋಟೊ ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸ್ಥಳದಲ್ಲಿ ಸಾರ್ವಜನಿಕರು ಚಾಲಕ ಹಾಗೂ ಕ್ಲೀನರ್ ನನ್ನು ರಕ್ಷಿಸಿ ಟೊಮೋಟೊ ಕ್ರೇಟ್ ಗಳನ್ನು ರಕ್ಷಿಸಿದರು.
ಬೆಂಗಳೂರು ಮಾರುಕಟ್ಟೆಗೆ ತೆರಳುವ ಟೊಮೋಟೊ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಉಂಟಾಗಿದೆ. ಚಾಲಕನ ನಿರ್ಲಕ್ಷ್ಯ ಬಗ್ಗೆ ರೈತರ ಆಕ್ರೋಶ ವ್ಯಕ್ತವಾಯಿತು. ದೇವಾಲಯ ಮುಂದೆ ತಿರುವು ಬಳಿ ವೇಗ ನಿಯಂತ್ರಣ ಮಾಡಬೇಕಿತ್ತು. ರಸ್ತೆಯ ಬದಿಯಲ್ಲಿ ಸಾಮಾನ್ಯವಾಗಿ ಜನರು ಇರುತ್ತಿದ್ದರು. ಅದೃಷ್ಟವಶಾತ್ ಲಾರಿ ಬಂದ ವೇಳೆ ಯಾರೂ ಇಲ್ಲದ ಕಾರಣ ಬಾರಿ ಅನಾಹುತ ತಪ್ಪಿದೆ.