‘ಭೂ ಹಗರಣಕ್ಕೂ ಸಾವುಗಳಿಗೂ ಸಂಬಂಧ ಇದೆ’- ಎಡಪಂಥೀಯರ ನಿಯೋಗದ ಮುಂದೆ ಧರ್ಮಸ್ಥಳ ಜನರ ಅಹವಾಲು

Date:

Advertisements

ಧರ್ಮಸ್ಥಳದಲ್ಲಿ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ಭೂ ಹಗರಣದ ಹಿನ್ನಲೆಯಲ್ಲೂ ವಿಸ್ತರಿಸುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಧರ್ಮಸ್ಥಳದ ಸ್ಥಳೀಯ ನಾಯಕರು ಎಡಪಂಥೀಯರ ನಿಯೋಗವನ್ನು ಆಗ್ರಹಿಸಿದರು. ಸಿಪಿಐಎಂ ರಾಜ್ಯ ಕಾರ್ಯದರ್ಶಿಯಾಗಿರುವ, ಚಿಂತಕ ಕೆ ಪ್ರಕಾಶ್, ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ, ಮುನೀರ್ ಕಾಟಿಪಳ್ಳ, ಬಿ ಎಂ ಭಟ್, ಈಶ್ವರಿ ಪದ್ಮುಂಜ ಸೇರಿದಂತೆ ಹಲವು ಸ್ಥಳೀಯ ಎಡಪಂಥೀಯ ಚಿಂತಕ ಹೋರಾಟಗಾರರ ನಿಯೋಗ ಎರಡು ದಿನಗಳ ಕಾಲ ಧರ್ಮಸ್ಥಳ ನಿವಾಸಿಗಳ ಜೊತೆ ಚರ್ಚೆ ನಡೆಸಿತು.

ಪದ್ಮಲತಾ ಅವರ ಸಹೋದರಿಯ ಮನೆಯಲ್ಲಿ ಸಮಾಲೋಚನಾ ಸಭೆ ನಡೆಲಾಯಿತು. 1986ರಲ್ಲಿ ಅಪಹರಣಗೊಂಡು ಕೊಲೆಯಾದ ಪದ್ಮಲತಾ ಅವರ ಸಹೋದರಿ ಇಂದ್ರವತಿಯವರು ಮಾತನಾಡಿ “ಪದ್ಮಲತಾ ಕೊಲೆಗೂ ಭೂ ಮಾಫಿಯಾಗೂ ಸಂಬಂಧ ಇದೆ. ನನ್ನ ತಂದೆ ದೇವಾನಂದ ಅವರು ಕಮ್ಯೂನಿಸ್ಟ್ ಮುಖಂಡರಾಗಿದ್ದರು. 80 ರ ದಶಕದಲ್ಲಿ ಧರ್ಮಸ್ಥಳದಲ್ಲಿ ಮಲೆಕುಡಿಯರ ಹಾಡಿ ಇತ್ತು. ಸುಮಾರು 14 ಮನೆಗಳು ಆ ಮಲೆಕುಡಿಯ ಹಾಡಿಯಲ್ಲಿದ್ದವು. ಮಲೆಕುಡಿಯರನ್ನು ಒಕ್ಕಲೆಬ್ಬಿಸಬೇಕು ಎಂದು ಪ್ರಯತ್ನಗಳು ನಡೆದವು. ಮಲೆಕುಡಿಯರು ಒಪ್ಪದೇ ಇದ್ದಾಗ ಬಲಪ್ರಯೋಗ ಮಾಡಲಾಯಿತು. ಆಗ ಕಮ್ಯೂನಿಸ್ಟ್ ಮುಖಂಡರಾಗಿದ್ದ ದೇವಾನಂದರು ಮಲೆಕುಡಿಯರ ಪರವಾಗಿ ಹೋರಾಟಕ್ಕಿಳಿದು ಮಲೆಕುಡಿಯರ ಭೂಮಿ ಉಳಿಸಿದರು. ತಂದೆಯ ಮೇಲಿನ ಈ ದ್ವೇಷ ಕೂಡಾ ಪದ್ಮಲತಾ ಕೊಲೆಗೆ ಕಾರಣವಾಗಿದೆ. ಹಾಗಾಗಿ ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಅಸಹಜ ಸಾವು, ಆತ್ಮಹತ್ಯೆ, ಕೊಲೆಗಳಿಗೂ ಭೂದಾಹಕ್ಕೂ ಸಂಬಂಧವಿದೆಯೇ ಎಂದು ಎಸ್‌ಐಟಿ ಗಮನಿಸಬೇಕು” ಎಂದು ಮನವಿ ಮಾಡಿದರು.

“ಚುನಾವಣೆಯ ಸಂದರ್ಭದಲ್ಲಿ ತಂದೆ ದೇವಾನಂದರ ಮೇಲೆ ಹಗೆತನ ಜಾಸ್ತಿಯಾಯಿತು. ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಚುನಾವಣೆಯೇ ನಡೆದಿರಲಿಲ್ಲ. ತಂದೆ ಸಿಪಿಐಎಂನಲ್ಲಿ ಸ್ಪರ್ಧಿಸಿದ ಬಳಿಕ ಚುನಾವಣೆ ನಡೆಯಿತು. ಒಂದೆಡೆ ಮಲೆಕುಡಿಯರ ಭೂಹೋರಾಟದ ನೇತೃತ್ವ, ಇನ್ನೊಂದೆಡೆ ಪ್ರಜಾಸತ್ತಾತ್ಮಕ ಚುನಾವಣೆ ನಡೆಸಿದ ಕೋಪ ಪದ್ಮಲತಾ ಅಪಹರಣಕ್ಕೆ ಕಾರಣವಾಯಿತು. ನಾಮಪತ್ರ ವಾಪಸ್ ತೆಗೆದುಕೊಂಡರೆ ಮಗಳು ವಾಪಸ್ ಬರಬಹುದು ಎಂದು ತಂದೆಗೆ ಸಂದೇಶ ಕಳುಹಿಸಿದರೂ ತಂದೆ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ. ಆ ಬಳಿಕ ಪದ್ಮಲತಾ ಕೊಲೆಯಾಗಿ ದೇಹವು ಕೊಳೆತ ಸ್ಥಿತಿಯಲ್ಲಿ ನೆರಿಯ ನದಿಯಲ್ಲಿ ಪತ್ತೆಯಾಯಿತು” ಎಂದು ಪದ್ಮಲತಾ ಸಹೋದರಿ ಮಾಹಿತಿ ನೀಡಿದರು.

Advertisements

“ಭೂಮಿ ನೀಡದೇ ಇದ್ದರೆ ಸ್ಥಳೀಯರನ್ನು ಅಪಹರಣ ಮಾಡುವ, ಹಲ್ಲೆ, ಕೊಲೆಗಳನ್ನು ಮಾಡುವ ಬಗ್ಗೆ ಈ ಹಿಂದಿನಿಂದಲೂ ದೂರುಗಳು, ಚರ್ಚೆಗಳಿವೆ. ಪಿತ್ರಾರ್ಜಿತ ಆಸ್ತಿಯಲ್ಲದೇ, ಖರೀದಿ ಮಾಡಿರುವ ಎಲ್ಲಾ ಆಸ್ತಿಗಳು ಹೇಗೆ ಖರೀಧಿ ಪ್ರಕ್ರಿಯೇ ನಡೆಯಿತು ಎಂಬ ಬಗ್ಗೆ ತನಿಖೆ ಆಗಬೇಕು. ಜನರು ಕಡಿಮೆ ದರಕ್ಕೆ ಭೂಮಿ ನೀಡಿ ಊರು ಬಿಟ್ಟು ಹೋಗೋದರ ಹಿಂದೆ ಕ್ರಿಮಿನಲ್ ಚಟುವಟಿಕೆ ಇದೆ. ಒಂದೊಂದು ಆಸ್ತಿ ಖರೀದಿಯ ಹಿಂದೆಯೂ ಒಂದೊಂದು ಅಪರಾಧ ಚಟುವಟಿಕೆ ಇದೆ. ಹಾಗಾಗಿ ಎಲ್ಲಾ ಆಸ್ತಿ ಖರೀದಿಯನ್ನು ತನಿಖೆ ನಡೆಸಬೇಕು” ಎಂದು ಲಕ್ಷ್ಮಣ ಗೌಡ ಆಗ್ರಹಿಸಿದರು.

ಭೂಮಾಫೀಯಾದ ಹಿನ್ನಲೆಯಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸಿದೆ. ಹಾಗಾಗಿ ಎಸ್ ಐಟಿ ತನಿಖೆಯು ಅಸ್ತಪಂಜರನ್ನು ಕೇವಲ ಮಹಿಳೆಯರ ನಾಪತ್ತೆ, ಅತ್ಯಾಚಾರ, ಕೊಲೆಗೆ ಮಾತ್ರ ಸೀಮಿತಗೊಳಿಸಿ ನೋಡಬಾರದು. ಅಸ್ತಿಪಂಜರಗಳ ಲಭ್ಯವಾಗುವುದರ ಹಿಂದೆ, ನಾಪತ್ತೆ, ಅತ್ಯಾಚಾರ ಕೊಲೆಗಳ ಹಿಂದೆ ಭೂ ಮಾಫಿಯಾವೂ ಇದೆ. ಹಾಗಾಗಿ ಧರ್ಮಸ್ಥಳದಲ್ಲಿ ನೊಂದಣಿಯಾದ ಎಲ್ಲಾ ಜಮೀನುಗಳ ಬಗ್ಗೆ ತನಿಖೆಯಾಗಬೇಕು ಎಂದು ಬಿ ಎಂ ಭಟ್ ಹೇಳಿದರು.

ಹಲವು ಸ್ಥಳೀಯರನ್ನು ಎಡಪಂಥೀಯ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿದ್ದು, ಭೂಹಗರಣ ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ಬಗ್ಗೆಯೇ ಹೆಚ್ಚು ಮಾಹಿತಿ ನೀಡಿದರು. ಸ್ಥಳೀಯರ ಮಾಹಿತಿಯ ಆಧಾರದಲ್ಲಿ ಧರ್ಮಸ್ಥಳದ ಭೂಹಗರಣ ಹೋರಾಟ ಕೈಗೆತ್ತಿಕೊಳ್ಳಲು ನಿರ್ಧರಿಸಲಾಯಿತು.

ಈಗಾಗಲೇ ರಚನೆಯಾಗಿರುವ ಎಸ್ ಐಟಿ ಕೆಲಸ ಶ್ಲಾಘನೀಯವಾಗಿದೆ. ಎಸ್ಐಟಿಯು ಅಸ್ತಿಪಂಜರ ಪತ್ತೆ ಪ್ರಕರಣವನ್ನು ಭೂ ಹಗರಣಗಳ ಹಿನ್ನಲೆಯಲ್ಲೂ ತನಿಖೆ ನಡೆಸಬೇಕು. ಭೂ ಮಾಫೀಯಾದ ದೌರ್ಜನ್ಯಗಳನ್ನೂ ಎಸ್ ಐಟಿ ವರದಿಯಲ್ಲಿ ಸೇರಿಸಿಕೊಳ್ಳಬೇಕು. ಒಂದು ವೇಳೆ ಈಗಿರುವ ಎಸ್ ಐಟಿಯಲ್ಲಿ ಧರ್ಮಸ್ಥಳ ಭೂ ಹಗರಣ ತನಿಖೆ ಮಾಡುವುದಕ್ಕೆ ಕಾನೂನಿನ ತೊಡಕಿದ್ದರೆ ಪ್ರತ್ಯೇಕ ಎಸ್‌ಐಟಿ ರಚಿಸಬೇಕು. ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಯನ್ನು ಆಗ್ರಹಿಸುತ್ತೇವೆ ಎಂದು ಚಿಂತಕ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ ಕೆ ಪ್ರಕಾಶ್ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X