ಗ್ರಾಮದಲ್ಲಿ ಶವಹೂಳಿಕೆಗಾಗಿ ಮೃತದೇಹವನ್ನು ನದಿ ದಾಟಿ ಅಂತಿಮ ಸಂಸ್ಕಾರ ಮಾಡಿದ ಘಟನೆ ಸಿಂಧನೂರು ತಾಲ್ಲೂಕು ಮುಕ್ಕುಂದ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದು ಶವ ಸಂಸ್ಕಾರಕ್ಕಾಗಿ ಸಾರ್ವಜನಿಕರು ನದಿಯಲ್ಲಿ ಈಜಿ ಹಾಗೂ ಹರಿಗೋಲಿನಲ್ಲಿ ಶವಸಾಗಿಸಿ ಅಂತ್ಯಕ್ರಿಯೆ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಗ್ರಾಮದ ಸ್ಮಶಾನ ನದಿ ದಂಡೆ ಮೇಲಿದೆ. ಮಳೆಗಾಲದಲ್ಲಿ ತುಂಗಭದ್ರ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಮಯದಲ್ಲಿ ಪ್ರತಿ ವರ್ಷ ಇದೆ ಸಮಸ್ಯೆ ಕಾಡುತ್ತದೆ. ಹಲವು ಬಾರಿ ಅಧಿಕಾರಿಗಳಿಗೆ ರಸ್ತೆ ಅಗತ್ಯ ಸೌಲಭ್ಯಗಳು ಒದಗಿಸಿ ಎಂದು ಮನವಿ ಮಾಡಿದರು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಗುರುರಾಜ ನಿವಾಸಿ ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಎಂ ಪ್ರವಾಸ ರದ್ದು – ಹಟ್ಟಿ ಚಿನ್ನದ ಗಣಿಯಲ್ಲಿ ಸಮಾರಂಭ ಮುಂದೂಡಿಕೆ
ನಡುಗಡ್ಡೆಯಲ್ಲಿರುವ ಸ್ಮಶಾನಕ್ಕೆ ಹೋಗಲು ಹರಿಗೋಲು ಮೂಲಕ ಶವವನ್ನು ಸಾಗಿಸಿ, ಈಜಿ ನಡುಗಡ್ಡೆ ತಲುಪಿ ಶವಸಂಸ್ಕಾರ ಮಾಡುತ್ತಾ ಹಲವು ಬಾರಿ ಮಾಡುತ್ತಾ ಬಂದಿದ್ದೇವೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಬೇಕು. ಸ್ಮಶಾನಕ್ಕೆ ಹೋಗುವುದಕ್ಕೆ ಮುಖ್ಯ ರಸ್ತೆಯಾದರೆ ಇಂತಹ ಸಮಸ್ಯೆ ಎದುರಾಗಲ್ಲ ಎಂದು ಒತ್ತಾಯಿಸಿದರು.

