ಶಿವಮೊಗ್ಗ ನಗರದಲ್ಲಿ ಸದಾ ಒಂದಲ್ಲ ಒಂದು ರೀತಿಯಲ್ಲಿ ವಾಹನ ಸವಾರರಿಗೆ, ಸರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಪಿಎಸ್ಐ ತಿರುಮಲೇಶ್ ಹಾಗೂ ಪಶ್ಚಿಮ ಸಂಚಾರಿ ಪೊಲೀಸರ ತಂಡ,
ಇಂದು ಸಾಗರ ರಸ್ತೆಯಲ್ಲಿರುವ ಶರಾವತಿ ಡೆಂಟಲ್ ಕ್ಲಿನಿಕ್ ಎದುರು, ಪಿಎಸ್ಐ ತಿರುಮಲೇಶ್ ಮತ್ತು ಮಂಜುನಾಥ್ ಎ. ಹೆಚ್.ಸಿ. ಪ್ರಶಾಂತ್ ಸಿಪಿಸಿ, ದಿನೇಶ್ ಸಿಪಿಸಿ ಇವರನ್ನೊಳಗಂಡ ತಂಡದಿಂದ ಅಪಘಾತ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬ್ಲಿಂಕರ್ ಅನ್ನು ಅಳವಡಿಸಿದ್ದಾರೆ.

ಸ್ವತಃ ಪಿಎಸ್ಐ ತಿರುಮಲೇಶ್ ಹಾಗೂ ಸಿಬ್ಬಂದಿಗಳು ಬ್ಲಿಂಕರ್ ಅಳವಡಿಸುವ ವೇಳೆಯಲ್ಲಿ ಗುಂಡಿ ಅಗೆಯಲು ಹಾಗು ಬ್ಲಿಂಕರ್ ಅಳವಡಿಸಿದ ನಂತರ ಗುಂಡಿ ಮುಚ್ಚಲು ಕೆಲಸಗಾರರಿಗೆ ನೆರವಾಗಿರುವ ವಿಡಿಯೋ ವೈರಲ್ ಆಗುತ್ತಿದೆ.
ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸ್ಥಳದಲ್ಲಿ ಬ್ಲಿಂಕರ್ ಅವಶ್ಯಕತೆ ಇದ್ದಿದ್ದನ್ನ ಮನಗಂಡು ಜಿಲ್ಲಾ ಪೊಲೀಸ್ ಇಲಾಖೆ ಅಪಘಾತ ತಡೆಯುವ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆ ಇಟ್ಟಿದ್ದಾರೆ.