ಗುಬ್ಬಿ | ಹಾಗಲವಾಡಿ ಕೆರೆಗೆ ನೀರು ಹರಿಸಲು ಕ್ರಮಕೈಗೊಳ್ಳಿ : ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚನೆ

Date:

Advertisements

ಹಾಗಲವಾಡಿ ಕೆರೆಗೆ ನೀರು ಪೂರೈಕೆಗೆ ಈಗಾಗಲೇ ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ. ಕೊನೆಯ 6 ಕಿಮೀ ದೂರದ ಕಾಮಗಾರಿಗೆ ಕೆಲ ರೈತರಿಂದ ತೊಡಕಾದ ಹಿನ್ನಲೆ ನಾನೇ ಖುದ್ದು ರೈತರೊಟ್ಟಿಗೆ ಚರ್ಚಿಸುತ್ತೇನೆ. ಹೇಮಾವತಿ ಅಧಿಕಾರಿಗಳು ವಿಳಂಬ ಮಾಡದೆ ಈ ವರ್ಷದಲ್ಲೇ ಕೆರೆಗೆ ನೀರು ಹರಿಸಲು ಶ್ರಮ ಪಡುವಂತೆ ಶಾಸಕ ಎಸ್.ಆರ್ ಶ್ರೀನಿವಾಸ್ ಸೂಚನೆ ನೀಡಿದರು.

ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಹೇಮಾವತಿ ನೀರು ಹರಿಸುವ ಮಹತ್ವದ ಯೋಜನೆಗಳಾದ ಹಾಗಲವಾಡಿ, ಮಠದಹಳ್ಳ ಕೆರೆ ಹಾಗೂ ಬಿಕ್ಕೆಗುಡ್ಡ ಕೆರೆ ಯೋಜನೆ ಈಗಾಗಲೇ ವಿಳಂಬ ಆಗಿತ್ತು. ಈ ನಿಟ್ಟಿನಲ್ಲಿ ಈ ವರ್ಷದಲ್ಲಿ ಮೂರು ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

16 ಕಿಮೀ ದೂರದ ನಾಲೆ ಕೆಲಸಕ್ಕೆ ಕೊನೆಯ 6 ಕಿಮೀ ಮಾತ್ರ ಬಾಕಿ ಇದೆ. ಉಳಿದ 10 ಕಿಮೀ ಈಗಾಗಲೇ ಕೆಲಸ ಸಂಪೂರ್ಣಗೊಂಡಿದೆ. ಈ ಜೊತೆಗೆ ಉಪ ಮುಖ್ಯಮಂತ್ರಿ ಅವರಿಂದ ಚಾಲನೆಗೊಂಡ ಮಠದಹಳ್ಳ ಕೆರೆ ಯೋಜನೆಯ ಪೈಪ್ ಗಳ ಪರಿಶೀಲನೆ ನಡೆದಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದ ಅವರು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ಜಾಣ ಕುರುಡುತನ ತೋರುತ್ತಿದೆ. ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಣೆ, ಯಾರಿಂದ ಯಾರಿಗೆ ಎಲ್ಲವೂ ತಿಳಿದಿದ್ದು ಅಧಿಕಾರಿಗಳು ಮಾರಾಟದ ಗುರಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದು ಇಲಾಖೆಯ ಅಸಹಾಯಕತೆ ಎತ್ತಿಹಿಡಿದರು.

Advertisements

ರಸಗೊಬ್ಬರ ಕೊರತೆ ಬಾರದಂತೆ ಕೃಷಿ ಅಧಿಕಾರಿಗಳು ನಿಗಾವಹಿಸಬೇಕು. ಖಾಸಗಿ ಅಂಗಡಿಗಳು ಕಾಳ ಸಂತೆ ಮಾರಾಟ ಮಾಡಿದಂತೆ ಕ್ರಮ ಕೈಗೊಳ್ಳಬೇಕು. ಮಳೆಗಾಲದ ಈ ಸಮಯ ಕೃಷಿ ಇಲಾಖೆಯ ಕೆಲಸ ಹೆಚ್ಚು. ಬಿತ್ತನೆ ಬೀಜ, ಗೊಬ್ಬರ ಇನ್ನಿತರ ಪರಿಕರಗಳ ಕೊರತೆ ಬಾರದಂತೆ ನಿಗಾ ವಹಿಸಿ ಎಂದು ಸೂಚಿಸಿದ ಶಾಸಕರು ಶಿಕ್ಷಣ ಇಲಾಖೆ ಕೂಡಲೇ ಹಳೆಯ ಶಾಲಾ ಕಟ್ಟಡಗಳು, ಶಿಥಿಲಾವಸ್ಥೆಯ ಕೊಠಡಿಗಳು ಕೆಡವಿ ನಿವೇಶನ ಮಾಡಲು ಪಟ್ಟಿ ತಯಾರಿಸಬೇಕು. ತಡವಾದರೆ ಮಳೆಗೆ ಅನಾಹುತ ಜರುಗಲಿದೆ ಎಂದು ಎಚ್ಚರಿಕೆ ನೀಡಿದರು.

ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಎಚ್ ಎಎಲ್ ಘಟಕದಿಂದ ಡಯಾಲಿಸಿಸ್ ಯೂನಿಟ್ ಸಿಗಲಿದೆ. ಡಾಕ್ಟರ್ ಇದರ ಸದುಪಯೋಗ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಈ ಜೊತೆಗೆ ನಾಯಿ ಕಡಿತ, ಹಾವು ಕಡಿತದ ಔಷಧಿ ಸದಾಕಾಲ ದಾಸ್ತಾನು ಇರಿಸಬೇಕು ಎಂದು ಸಲಹೆ ನೀಡಿ, ಕಾರ್ಮಿಕ ಇಲಾಖೆ ನೀಡಿದ ಕೂಲಿ ಕಾರ್ಮಿಕರ ಕಾರ್ಡ್ ಬಹುತೇಕ ಅನರ್ಹರಿಗೆ ದೊರಕಿದೆ. ಈ ಫೇಕ್ ಕಾರ್ಡ್ ಸ್ಥಳ ಮಹಜರು ಮಾಡಿ ರದ್ದು ಮಾಡುವಂತೆ ಕಾರ್ಮಿಕ ನಿರೀಕ್ಷಕರಿಗೆ ಸೂಚನೆ ನೀಡಿದರು. ಅರಣ್ಯ ಇಲಾಖೆ ರಸ್ತೆ ಬದಿ ಗಿಡ ನೆಟ್ಟು ಪೋಷಿಸುವ ದಾಖಲೆ ಪೇಪರ್ ನಲ್ಲಿದೆ. ವಾಸ್ತವದಲ್ಲಿ ಗಿಡಗಳು ಇಲ್ಲ. ಇದ್ದರೂ ವಿದ್ಯುತ್ ಕಂಬಗಳು ಕೆಳಗೆ ಹಾಕಿ ಮರ ಕಡಿಯುವಂತಿಲ್ಲ, ತಂತಿ ಬದಲಿಸುವಂತಿಲ್ಲ. ಈ ರೀತಿ ಸಮಸ್ಯೆಗಳೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆ ಹೀಗೆ ಎಲ್ಲಾ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು.

ಸಾರಿಗೆ ನಿಗಮ ಸಿಬ್ಬಂದಿಗಳಿಗೆ ಎಲ್ಲವೂ ನೀಡಿದೆ. 2020 ರಿಂದ ವೇತನ ಪರಿಷ್ಕರಣೆ ಬೇಡಿಕೆ ಇಟ್ಟಿದ್ದಾರೆ. 2023 ರಿಂದ ನೀಡಲು ಒಡಂಬಡಿಕೆ ಆಗಿತ್ತು. ಇದರಂತೆ 2027 ಕ್ಕೆ ಪರಿಷ್ಕರಣೆ ಮಾಡುತ್ತೇವೆ ಎಂಬುದು ಸರ್ಕಾರದ ಮಾತು. ಈಗಾಗಲೇ 1800 ಕೋಟಿ ಅರಿಯರ್ಸ್ ನೀಡಲಾಗಿದೆ. 9 ಸಾವಿರ ಕೋಟಿ ವೇತನ ಕೂಡಾ ನೀಡಲಾಗಿದೆ. ಕೋವಿಡ್ ಸಮಯದ ನಷ್ಟ ಯಾರೂ ಅರಿತಿಲ್ಲ. ಎಲ್ಲವೂ ಕೇಳುತ್ತಿದ್ದಾರೆ. ಈಗ ಕೈಕೋರ್ಟ್ ನಿರ್ದೇಶದಂತೆ ನಿಗಮ. ನಡೆದುಕೊಳ್ಳುತ್ತದೆ ಎಂದು ತಿಳಿಸಿದರು

ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಬಿ.ಎಲ್.ಕೃಷ್ಣಪ್ಪ, ತಾಪಂ ಇಓ ಶಿವಪ್ರಕಾಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.


eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

ವಿಜಯನಗರ | ಅಲೆಮಾರಿ ಸಮುದಾಯಗಳ ಅಭಿವೃದ್ಧಿಯೇ ನಿಗಮದ ಮುಖ್ಯ ಧ್ಯೇಯ: ಪಲ್ಲವಿ

ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಮುಂಚೂಣಿಗೆ...

Download Eedina App Android / iOS

X