ಶಿವಮೊಗ್ಗದಲ್ಲಿ ಇಂದು ಮೈಸೂರು-ಶಿವಮೊಗ್ಗ ರೈಲಿನಲ್ಲಿ ರೈಲು ಚಲುಸುವವಾಗಲೇ ಇಂಜಿನ್ ಮತ್ತು ಬೋಗಿ ಸಂಪರ್ಕ ಕಳೆದು ಕೊಂಡು, ಆರ್ಧ ರೈಲು ಚಲಿಸಿದ ದೃಶ್ಯ ಲಭ್ಯವಾಗಿದೆ. ಬೋಗಿಗಳನ್ನು ಬಿಟ್ಟು ಇಂಜಿನ್ ದೂರ ಚಲಿಸಿದ ಘಟನೆ ವರದಿಯಾಗಿದೆ.
ಶಿವಮೊಗ್ಗ ನಗರದೊಳಗೆ ಇರುವ ತುಂಗಾ ಸೇತುವೆ ಮೇಲೆ ಘಟನೆ ನಡೆದಿದೆ. ತುಂಗಾ ಸೇತುವೆ ಮೇಲೆ ಸ್ವಲ್ಪ ದೂರ ಇಂಜಿನ್ ಇಲ್ಲದೇ ಬೋಗಿಗಳು ಚಲಿಸಿವೆ. ಘಟನೆ ಗಮನಿಸಿದ ಪ್ರಯಾಣಿಕರಲ್ಲಿ ಆತಂಕ ಹೆಚ್ಚಿದೆ. ತುಂಗಾನದಿಯ ರೈಲ್ವೆ ಹಳಿಗಳ ಮೇಲೆ ಇಂಜಿನ್ ಒಂದೇ ಚಲಿಸಿದೆ. 50 ನಿಮಿಷಗಳ ಕಾಲ ಇಂಜಿನ್ ಬಿಟ್ಟು ಸೇತುವೆಯ ಒಂದು ತುದಿಯಲ್ಲಿ ಬೋಗಿಗಳು ಚಲಿಸಿವೆ. ಇದರಿಂದ ಸ್ವಲ್ಪಕಾಲ ಪ್ರಯಾಣಿಕರು ಭಯಭೀತರಾಗಿದ್ದಾರೆ.

ನಂತರ ಸ್ಥಳಕ್ಕೆ ಆಗಮಿಸಿದ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಸ್ಯೆ ಬಗೆ ಹರಿಸಿದ್ದಾರೆ. ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟು ಪ್ರಯಾಣ ಮುಂದುವರೆಸಿದ್ದಾರೆ.
ತಾಳಗುಪ್ಪದಿಂದ ಮೈಸೂರು ಕಡೆಗೆ ಹೊರಟಿದ ರೈಲು ತುಂಗ ನದಿಯ ರೈಲ್ವೆ ಸೇತುವೆ ಬಳಿ ಬಂದಾಗ ಇಂಜಿನ್ ನಿಂದ 8 ನೇ ಬೋಗಿ ಕಳಚಿಕೊಂಡಿತ್ತು.ಶಿವಮೊಗ್ಗ ರೈಲ್ವೆ ನಿಲ್ದಾಣ ಬಿಟ್ಟು ವಿದ್ಯಾನಗರದ ಮಹದೇವಿ ನಿಲ್ದಾಣಕ್ಕೆ ಸಾಗುವ ವೇಳೆ ಈ ಘಟನೆ ನಡೆದಿದೆ.

ಇಂದು ಸಂಜೆ 5 ಗಂಟೆಗೆ ಈ ಘಟನೆ ನಡೆದಿದ್ದು 50 ನಿಮಿಷ ಬೋಗಿ ಜೋಡಣೆ ಮಾಡಲು ಸಮಯ ತೆಗೆದುಕೊಂಡಿದೆ. ರೈಲ್ವೆ ಇಂಜಿನಿಯರ್, ಆರ್ ಪಿಎಫ್ ಸೇರಿದಂತೆ ಹಲವು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಭಾಗಿಯಾಗಿ ಮುಂದಿನ ಪ್ರಯಾಣವನ್ನ ಅನುವು ಮಾಡಿಕೊಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿವೆ.