ಇತ್ತೀಚೆಗೆ ನಿಧನರಾದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಬೀದರ ನಗರದಲ್ಲಿ ವಿಶ್ವ ಕ್ರಾಂತಿ ದಿವ್ಯಾಪೀಠ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ದಿವ್ಯಾಪೀಠದ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ ಅವರು ಮಾತನಾಡಿ, ʼಸತ್ಯಪಾಲ್ ಮಲಿಕ್ ಸತ್ಯಶುದ್ಧ ರಾಜಕಾರಣಿ. ನೇರ ನಿಷ್ಠರವಾಗಿ ಮಾತನಾಡದ ಇಂದಿನ ರಾಜಕಾರಣದಲ್ಲಿ ಸತ್ಯಾಪಾಲ್ ಅವರ ವ್ಯಕ್ತಿತ್ವ ಭಿನ್ನವಾಗಿತು. ಅವರ ಸತ್ಯ ಮಾತುಗಳೇ ಅವರಿಗೆ ಮುಳುವಾಗಿ ಕೊನೆಗೆ ಸುಳ್ಳು ಆರೋಪಗಳ ತನಿಖೆಗೆ ಒಳಗಾಗಿದ್ದು ದೇಶದ ದುರಂತ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಧೋರಣೆ ಸಲ್ಲದುʼ ಎಂದರು.
ಸಾಮಾಜಿಕ ಚಿಂತಕ ಬಿ.ವಿ ಜಗದೀಶ್ವರ ಮಾತನಾಡಿ, ʼಸತ್ಯಪಾಲ್ ಮಲಿಕ್ ಅವರು ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಭಾರತೀಯ ಕ್ರಾಂತಿ ದಳ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. ಶಾಸಕ, ರಾಜ್ಯಸಭಾ ಸದಸ್ಯರಾಗಿದ್ದರು. ಸಮಾಜವಾದಿ ಪಕ್ಷದಲ್ಲಿ ಮುಂದುವರೆದರು. 2004ರಿಂದ ಬಿಜೆಪಿಗೆ ಸೇರಿ ಬಿಹಾರ, ಒಡಿಶಾ, ಗೋವಾ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರುʼ ಎಂದು ಸ್ಮರಿಸಿದರು.
ʼಸತ್ಯಪಾಲ್ ಅವರು ಸಂದಿಗ್ಧ ಸಾಮಾಜಿಕ ಸನ್ನಿವೇಶದಲ್ಲಿ ತಮ್ಮ ರಾಜಕೀಯ ಚಾಕಚಕ್ಯತೆ ಮೆರೆದ ಸತ್ಯ ಶುದ್ಧ ಹಸ್ತ ರಾಜಕಾರಣಿ. ಇಂದಿನ ಯುವ ಪೀಳಿಗೆ ಸಮಾಜಘಾತುಕ ಶಕ್ತಿಯಿಂದ ಎಚ್ಚರವಹಿಸಿ ಶುದ್ಧ ರಾಜಕಾರಣ ಕಟ್ಟಲು ಮುಂದಾಗಬೇಕು. ಸತ್ಯಪಾಲ್ ಮಲಿಕ್ ಅಂತಹ ಅಪರೂಪ ರಾಜಕೀಯ ನಾಯಕರು ನಮಗೆ ಆದರ್ಶ ಆಗಬೇಕುʼ ಎಂದರು.
ಇದನ್ನೂ ಓದಿ : ಬೀದರ್ | ಡಿಜಿಟಲ್ ಗ್ರಂಥಾಲಯದಲ್ಲಿ ಓದಿ ವಿದೇಶದಲ್ಲಿ ನೌಕರಿ : ಹಳ್ಳಿ ಹುಡುಗನ ಸಾಧನೆಗೆ ಎಲ್ಲರೂ ದಿಲ್ ಖುಷ್!
ಸಭೆಯಲ್ಲಿ ಸಾಮಾಜಿಕ ಚಿಂತಕರಾದ ಶಿವಯ್ಯ ಸ್ವಾಮಿ, ಸಿದ್ದು ಫುಲಾರಿ ಮತ್ತಿರರು ಹಾಜರಿದ್ದರು.