ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ದೋಚುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಎಟಿಎಂ ಮಷಿನ್‌ನಲ್ಲಿ ಹಣ ಡ್ರಾ ಮಾಡುವ ಜಾಗಕ್ಕೆ ಹಣ ಹೊರಗೆ ಬಾರದಂತೆ ಯಾವುದೋ ಸಾಧನವನ್ನು ಅಳವಡಿಸಿ, ಗ್ರಾಹಕರು ಡ್ರಾ ಮಾಡಿದ ಹಣ ಅವರಿಗೆ ಸಿಗದಂತೆ ಮಾಡಿ, ಅವರು ಹೊರಗೆ ಹೋದ ನಂತರ ಮಷಿನ್ ನಿಂದ ಆ ಹಣವನ್ನು ಹೊರತೆಗೆಯುತ್ತಿದ್ದ ಆರೋಪಿ. ಈ ರೀತಿಸುಮಾರು 2 ಲಕ್ಷ ಹಣ ಕಳವು ಆಗಿದೆ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುಧೀರ್ ದೂರು ನೀಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಕೆ ಅವರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ಎಂ.ಮಂಜುನಾಥ್, ನಗರ ಠಾಣೆ ಪಿಎಸ್‌ಐ ಎಸ್.ಎಂ.ಅಮರ್, ರತ್ನಭಾಯಿ.ಬಿ.ಅವರನ್ನುಳಗೊಂಗ ತಂಡ, ಬೊಮ್ಮನಹಳ್ಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಯಾಜ್ ಉದ್ದೀನ್‌ನನ್ನು ಬಂಧಿಸಿ ಹೆಚ್ಚಿನ ತನಿಖೆಗೊಳಪಡಿಸಿದಾಗ ಆರೋಪಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ 15 ಸಾವಿರ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಹಿರಿಯ ವಕೀಲ ದಿ.ಹರಿಕುಮಾರ್ ಸ್ಮರಣಾರ್ಥ 8 ದಿನಗಳ ಕ್ರಿಕೆಟ್ ಕ್ರೀಡಾಕೂಟ
ಈ ಕಾರ್ಯಾಚರಣೆ ಕೈಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಷಮತೆಯನ್ನು ಎಸ್‌ಪಿ ಶ್ಲಾಘಿಸಿದ್ದಾರೆ.