ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದು ವಿಕೃತಿ ಮೆರೆದಿರುವ ಭೀಕರ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಸಮೀಪದ ಮುತ್ಯಾಲಮ್ಮ ದೇವಾಲಯದ ಬಳಿ ಈ ಭೀಕರ ಘಟನೆ ನಡೆದಿದೆ.
ಲಿಂಗಾಪುರದ ಸೇತುವೆ ಬಳಿ ಮಹಿಳೆಯ ಕೊಲೆಯಾದ ಬಳಿಕ ಹೊಟ್ಟೆಯ ಭಾಗ, ಚಿಂಪುಗಾನಹಳ್ಳಿ ಸೇತುವೆ ಬಳಿ ಕರುಳು, ಕೈ ಮತ್ತು ಮುತ್ಯಾಲಮ್ಮ ದೇವಾಲಯದ ಎದುರು ಮತ್ತೊಂದು ಕೈನ ಭಾಗಗಳು ಕಾಣಿಸಿಕೊಂಡಿವೆ. ಇದರ ಜತೆಗೆ ಗರುಡಚಲ ನದಿ ದಡದಲ್ಲಿ ಮೂಟೆಯೊಂದು ಪತ್ತೆಯಾಗಿದೆ. ಬೇರೆ ಕಡೆ ಕೊಲೆ ಮಾಡಿದ್ದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೂಟೆಯಲ್ಲಿ ತುಂಬಿ ಎಸೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರಂಭದಲ್ಲಿ ದೇಹದ ಭಾಗಗಳು ಮಹಿಳೆಯದ್ದ, ಪುರುಷನದ್ದ ಎಂದು ಹುಡುಕಾಟ ನಡೆಸಲಾಗಿತ್ತು. ಕೈ, ಹೊಟ್ಟೆ ಭಾಗ, ಕರುಳಿನ ಭಾಗಗಳು ಸಿಕ್ಕಿವೆ. ಶವದ ವಾಸನೆ ಬಂದ ಹಿನ್ನೆಲೆ ಸ್ಥಳೀಯರು ದೂರು ನೀಡಿದ್ದರು.
ಮಹಿಳೆಯ ಕೊಲೆ ಮಾಡಿದ ನಂತರ ಮೃತ ದೇಹವನ್ನು ತುಂಡು ತುಂಡಾಗಿ ಬೇರ್ಪಡಿಸಿ ಕೈಕಾಲು ಒಂದು ಕಡೆ, ಹೃದಯದ ಭಾಗ ಮತ್ತೊಂದು ಕಡೆ, ಹೊಟ್ಟೆ ಮತ್ತು ಕರುಳಿನ ಭಾಗ ಇನ್ನೊಂದು ಕಡೆ, ತಲೆಬುರುಡೆ ಮತ್ತು ಮುಖವೇ ಕಾಣದಂತೆ ಕತ್ತರಿಸಿ ಕಪ್ಪು ಬಣ್ಣದ ಕವರ್‌ನಲ್ಲಿ ಹಾಕಿ ರಸ್ತೆಯುದ್ದಕ್ಕೂ ಎಸೆಯಲಾಗಿದೆ.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಹೇಳಿಕೆ ನೀಡಿದ್ದು, “ಬೆಳಿಗ್ಗೆ 8.30ಸುಮಾರಿಗೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಬಗ್ಗೆ ಮಾಹಿತಿ ಬಂದ ಪ್ರಕಾರ ಹೊಳವನಹಳ್ಳಿ ಹೋಬಳಿಯ ಲಿಂಗಾಪುರ, ಚಿಂಪುಗಾನಹಳ್ಳಿ ಗ್ರಾಮಗಳಲ್ಲಿನ ರಸ್ತೆ ಪಕ್ಕದ ಜಮೀನುಗಳಲ್ಲಿ ಮನುಷ್ಯನ ಕೈ, ಹೊಟ್ಟೆಭಾಗದ ಕತ್ತರಿಸಿ ಭಾಗಗಳು ಸಿಕ್ಕಿವೆ. ಅವುಗಳನ್ನು ಎಫ್‌ಎಸ್‌ಐಗೆ ಕಳುಹಿಸಲಾಗಿದೆ. ದೇಹ ಗುರುತುಪಡಿಸಲ್ಲಾಗಿಲ್ಲ, ಇದು ಯಾವಾಗ ತಂದು ಹಾಕಿರುವುದು ಎಂಬುದೂ ತಿಳಿದುಬಂದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿ
“ತಕ್ಷಣ ತನಿಖೆ ಚುರುಕುಗೊಳಿಸಿ ಅದಷ್ಟು ಬೇಗ ಆರೋಪಿಯನ್ನು ಪತ್ತೆಹಚ್ಚಿ, ನಡೆದಿರುವ ಘಟನೆ ಬಗ್ಗೆ ತಿಳಿಸುತ್ತೇವೆ. ಸದ್ಯಕ್ಕೆ ಅದು ಮಹಿಳೆ ಅಥವಾ ಪುರುಷನ ದೇಹವೇ ಎಂಬುದು ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಮಹಿಳೆಯ ದೇಹದ ಭಾಗಗಳೆಂದು ಕಂಡುಬಂದಿದೆ. ಜಿಲ್ಲೆ ಸೇರಿದಂತೆ ಹೊರರಾಜ್ಯ ಆಂದ್ರಪ್ರದೇಶದ ಕಾಣೆಯಾದ ಪ್ರಕರಣಗಳ ಬಗ್ಗೆ ತಿಳಿದುಕೊಂಡು ಹೆಚ್ಚಿನ ತನಿಖೆ ನಡೆಸಿ, ಎಫ್‌ಎಸ್‌ಇ ವರದಿಗಳು ಬಂದ ನಂತರ ಹಚ್ಚಿನ ಮಾಹಿತಿಯನ್ನು ನೀಡಲಾಗುತ್ತದೆ, ದೇಹದ ಬಿಡಿ ಭಾಗಗಳು ಸಿಕ್ಕಿರುವುದು ಕಂಡರೆ ಈ ಕೃತ್ಯ ನಡೆದು ಸುಮಾರು ಆರೇಳು ದಿನಗಳಾಗಿರುವ ಶಂಕೆ ಇದೆ” ಎಂದು ಹೇಳಿದರು.
ಘಟನಾ ಸ್ಥಳಕ್ಕೆ ತುಮಕೂರು ಎಸ್‌ಪಿ ಅಶೋಕ್, ತಿಪಟೂರು ಡಿವೈಎಸ್‌ಪಿ ಕುಮಾರಶರ್ಮ, ಕೊರಟಗೆರೆ ಸಿಪಿಐ ಅನಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.