ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತ ಕಳವು: ಚುನಾವಣಾ ಆಯೋಗವೇ ನೇರ ಬೆಂಬಲ ನೀಡಿತೆ?  

Date:

Advertisements

2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನ ಸೆಂಟ್ರಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮನ್ಸೂರ್ ಅಲಿ ಖಾನ್ ಹಾಗೂ ಬಿಜೆಪಿಯಿಂದ ಪಿ ಸಿ ಮೋಹನ್ ಸ್ಪರ್ಧಿಸಿದ್ದರು. ಎಣಿಕೆಯಲ್ಲಿ ಅಂತಿಮ ಕ್ಷಣದವರೆಗೂ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮುನ್ನಡೆ ಕಾಯ್ದುಕೊಂಡಿದ್ದರೂ, ಕೊನೆಯ ಸುತ್ತುಗಳಲ್ಲಿ ಬಿಜೆಪಿಯ ಪಿ ಸಿ ಮೋಹನ್ 32,707 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಇದೇ ಕ್ಷೇತ್ರದಲ್ಲಿ 1,00,250 ಮತಗಳವು ಆಗಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟು 5 ವಿಧದಲ್ಲಿ ಮತ ಕಳ್ಳತನವಾಗಿರುವುದನ್ನು ತಮ್ಮ ದಾಖಲೆಗಳಲ್ಲಿ ವಿವರಿಸಿದ್ದಾರೆ.    

ಮಹದೇವಪುರದಲ್ಲಿ ನಡೆದ ಮತಗಳ್ಳತನದಲ್ಲಿ ಕಾಂಗ್ರೆಸ್‌ ನಡೆಸಿದ ಸಮೀಕ್ಷೆಯಲ್ಲಿ ಹಲವು ಅಕ್ರಮಗಳು ಬಯಲಿಗೆ ಬಂದಿವೆ. ಒಂದು ಲಕ್ಷಕ್ಕೂ ಅಧಿಕ ಮತದಾರರಿಂದಾಗಿ ಬಿಜೆಪಿ ಅಭ್ಯರ್ಥಿ ಸುಲಭವಾಗಿ ಜಯ ಗಳಿಸಿದ್ದಾರೆ. ಹಾಗೆ ನೋಡಿದರೆ ಮಹದೇವಪುರ ಕ್ಷೇತ್ರ ಹೊರತುಪಡಿಸಿ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭರ್ಜರಿ ಮುನ್ನಡೆಯಲ್ಲಿದ್ದರು. ಕೊನೆಯ ಸುತ್ತುಗಳಲ್ಲಿ ಮಹದೇವಪುರ ಕ್ಷೇತ್ರದ ಮತ ಎಣಿಕೆಯಾದಾಗ ಬಹತೇಕ ಮತಗಳು ಬಿಜೆಪಿ ಪಕ್ಷದ ಪಾಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ 6,26,208 ಲಕ್ಷ ಮತಗಳನ್ನು ಪಡೆದರೆ, ಬಿಜೆಪಿಯ ಪಿ ಸಿ ಮೋಹನ್ 6,58,915 ಮತಗಳನ್ನು ಪಡೆದರು.

ಅಧಿಕೃತ ದಾಖಲೆಗಳ ಅಧ್ಯಯನ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ನ ಮಾಹಿತಿಯನ್ನು ಆಧರಿಸಿ, ಒಟ್ಟು 1,00,250 ಮತಗಳ ಬಗ್ಗೆ ಗಂಭೀರ ಅಕ್ರಮಗಳ ಪಟ್ಟಿಯನ್ನು ರಾಹುಲ್‌ ಗಾಂಧಿ ನೀಡಿದ್ದಾರೆ. ಈ ಚುನಾವಣೆಯಲ್ಲಿ 5 ರೀತಿಯಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಲಾಗಿದೆ. ಮತದಾರರ ಪಟ್ಟಿಗೆ 1,00,250 ಹೆಸರು ಅಕ್ರಮವಾಗಿ ಸೇರಿಸಲಾಗಿದೆ. ಈ ಪೈಕಿ 11,965 ನಕಲಿ ಮತದಾರರನ್ನು ಸೇರಿಸಲಾಗಿದ್ದರೆ, ಸುಳ್ಳು, ತಪ್ಪಾದ ವಿಳಾಸಗಳಲ್ಲಿ 40,009, ಅಕ್ರಮವಾಗಿ ಹೆಸರು ಸೇರಿಸಿರುವ ಮತದಾರರ ಸಂಖ್ಯೆ 10,452 ಇದ್ದರೆ, ತಪ್ಪಾದ ಭಾವಚಿತ್ರಗಳಲ್ಲಿ 4,132 ಹಾಗೂ 33,692 ಮಂದಿ ಫಾರ್ಮ್‌ 6 ಅನ್ನು ದುರ್ಬಳಕೆ ಮಾಡಿಕೊಂಡು ಮತದಾನ ಮಾಡಿದ್ದಾರೆ.

Advertisements

ನಾಲ್ಕು ಬೂತ್‌ಗಳಲ್ಲಿ ಒಬ್ಬ ವ್ಯಕ್ತಿಯ ಹೆಸರು

ಮಹದೇವಪುರ ಕ್ಷೇತ್ರದ ಬೂತ್ ಸಂಖ್ಯೆ 116, 124, 125 ಮತ್ತು 126ರಲ್ಲಿ ಗುರುಕಿರತ್ ಸಿಂಗ್ ಡ್ಯಾಂಗ್ ಎನ್ನುವ ವ್ಯಕ್ತಿಯ ಹೆಸರು ಕಾಣಿಸಿಕೊಂಡಿದೆ. ಹಾಗೆಯೇ ಇದೇ ಕ್ಷೇತ್ರದಲ್ಲಿರುವ ಮತದಾರರು ಮುಂಬೈ, ಪುಣೆ, ವಾರಣಾಸಿ ಸೇರಿದಂತೆ ಮೂರ್ನಾಲ್ಕು ರಾಜ್ಯಗಳಲ್ಲಿ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 40 ಸಾವಿರಕ್ಕೂ ಅಧಿಕ ನಕಲಿ ಮತದಾರರಿದ್ದಾರೆ. ಇವರಲ್ಲಿ ಬಹುತೇಕರಿಗೆ ವಿಳಾಸವೇ ಇಲ್ಲ. ವಿಳಾಸ ಹೊಂದಿದ್ದರೂ ವಿಳಾಸದ ಜಾಗದಲ್ಲಿ “0”, “-“, “#” ಮುಂತಾದ ಅಕ್ಷರಗಳನ್ನು ನಮೂದಿಸಲಾಗಿದೆ. ಇದಲ್ಲದೆ, ಕೆಲವೊಂದು ವಿಳಾಸಗಳಲ್ಲಿ ಅಸಾಧಾರಣ ಸಂಖ್ಯೆಯಲ್ಲಿ ಮತದಾರರು ನೋಂದಾಯಿತರಾಗಿದ್ದಾರೆ. ಉದಾಹರಣೆಗೆ, ಒಂದು ಮನೆ ವಿಳಾಸದಲ್ಲಿ 80 ಜನರ ಮತದಾರರ ಹೆಸರುಗಳು ನೋಂದಾಯಿತವಾಗಿದ್ದರೆ, ಮತ್ತೊಂದು ಮನೆ ವಿಳಾಸದಲ್ಲಿ 791 ಮತದಾರರ ಹೆಸರುಗಳು ದಾಖಲಾಗಿವೆ. ಇಂಥ ನೂರಾರು ಗಂಭೀರ ಲೋಪಗಳು ಬಹಿರಂಗಗೊಂಡಿವೆ. 4,132 ಮಂದಿಯ ತಪ್ಪಾದ ಫೋಟೋಗಳನ್ನು ಕಂಡುಹಿಡಿಯಲಾಗಿದೆ. ಈ ಫೋಟೋಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಅಥವಾ ಸೂಕ್ಷ್ಮ ಗಾತ್ರದ ಫೋಟೋಗಳಿವೆ. ಯಾವುದನ್ನು ಕಂಡು ಹಿಡಿಯಲು ಸಾಧ್ಯವಿಲ್ಲದ ರೀತಿಯಲ್ಲಿ ಈ ಫೋಟೊಗಳಿವೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿ ಮೋದಿಗೆ ಅದಾನಿ-ಅಂಬಾನಿ ದೋಸ್ತಿ ತಂದ ದುರ್ಗತಿ

33 ಸಾವಿರಕ್ಕೂ ಅಧಿಕ ಮತದಾರರಿಂದ ಫಾರಂ ನಂಬರ್ 6 ದುರ್ಬಳಕೆ

ಮೊದಲ ಬಾರಿಯ ಮತದಾರರಿಗೆ ಮೀಸಲಾಗಿರುವ ಫಾರಂ ನಂಬರ್‌ 6 ಅನ್ನು 33,692 ಮತದಾರರಿಂದ ದುರ್ಬಳಕೆ ಮಾಡಲಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 70 ವರ್ಷದ ಶಕುನ್‌ ರಾಣಿ ಎಂಬುವವರು 2 ತಿಂಗಳಲ್ಲಿ 2 ಬಾರಿ ನೋಂದಣಿಯಾಗಿದ್ದಾರೆ. ಸ್ವಲ್ಪ ಬದಲಾವಣೆಯಿರುವ ಫೋಟೋ ಹಾಗೂ ಹೆಸರನ್ನು ಬಳಸಿ ಮತ ಚೀಟಿ ತಯಾರಿಸಿಕೊಂಡಿದ್ದು, ಇದೇ ವ್ಯಕ್ತಿ ಕಳ್ಳತನದಿಂದ ಎರಡು ಬಾರಿ ಮತದಾನ ಮಾಡಿದ್ದಾರೆ. ಸಂಜೆ ಐದು ಗಂಟೆಯ ಬಳಿಕ ಅತಿ ಹೆಚ್ಚು ಮತದಾನವಾಗಿದೆ. ವಿಪಕ್ಷಗಳು ಚುನಾವಣಾ ಆಯೋಗ ಸಂಪರ್ಕಿಸಿದರೆ ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲ. ಆಯೋಗ ಡಿಜಿಟಲ್ ರೂಪದಲ್ಲಿ ಮತದಾರರ ಪಟ್ಟಿ ನೀಡಲು ನಿರಾಕರಿಸಿದೆ. ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ನೀಡಲಿಲ್ಲ. ಸಿಸಿಟಿವಿ ದೃಶ್ಯಗಳನ್ನು ಅಳಿಸಲಾಗಿದೆ. ಈ ಪಟ್ಟಿಯನ್ನು ಮುದ್ರಿತ ರೂಪದಲ್ಲಿ ನೀಡಲಾಗುತ್ತಿದೆ. ವಿಪಕ್ಷಗಳಿಗೆ ಎಲೆಕ್ಟ್ರಾನಿಕ್ ಪಟ್ಟಿ ದೊರೆತಿದ್ದರೆ, ವಂಚನೆ ಪತ್ತೆಯಾಗುತ್ತಿತ್ತು. ಆಯೋಗದ ಈ ನಡೆಯು ಶಂಕಾಸ್ಪದವಾಗಿದೆ. ಡಿಜಿಟಲ್ ಸೌಲಭ್ಯಗಳನ್ನು ಬಳಸಿ ಓದಲು ಸಾಧ್ಯವಾಗದಂತಹ ರೀತಿಯಲ್ಲಿ ಮತದಾರರ ಪಟ್ಟಿಯನ್ನು ಕಾಗದದಲ್ಲಿ ಮುದ್ರಿತ ರೂಪದಲ್ಲಿ ನೀಡಲಾಗುತ್ತಿದೆ. ಈ ಮೂಲಕ ವಿಪಕ್ಷಗಳು ಪಟ್ಟಿ ಪರಿಶೀಲನೆ ನಡೆಸುವುದನ್ನು ತಡೆಯಲು ಯತ್ನಿಸಲಾಗುತ್ತಿದೆ.

ಒಸಿಆರ್‌ ತಂತ್ರಜ್ಞಾನ ಬಳಸಿ ಮತಗಳವಿನ ಪಟ್ಟಿ ಪರಿಶೀಲನೆಯ ಕಾರ್ಯವನ್ನು ಗಂಭೀರವಾಗಿ ಕೈಗೊಳ್ಳಲಾಗಿದ್ದು, ಪ್ರತಿ ಪುಟ, ಪ್ರತಿ ಕ್ಷೇತ್ರದ ಮತದಾರರ ಪಟ್ಟಿ ನಿಖರವಾಗಿ ಪರಿಶೀಲನೆಗೊಳಪಟ್ಟಿದೆ. ಈ ಸಂಪೂರ್ಣ ವರದಿ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯುಂಟಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಭಾರತದ ಮತದಾನ ವ್ಯವಸ್ಥೆಯು ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕೆಂಬ ಸಾರ್ವಜನಿಕ ನಿರೀಕ್ಷೆಯ ಪ್ರತಿರೂಪವಾಗಿದೆ. ಆದರೆ ಎಲ್ಲವನ್ನು ಗಾಳಿಗೆ ತೂರಲಾಗಿದೆ.

ಮಹಾರಾಷ್ಟ್ರ, ಹರಿಯಾಣದಲ್ಲೂ ಅನೇಕ ಅಕ್ರಮಗಳು

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿದೆ ಎನ್ನುವಾಗ ಲಕ್ಷಾಂತರ ಹೆಸರುಗಳು ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಬಗ್ಗೆ ವಿಪಕ್ಷಗಳು ದಾಖಲೆಗಳನ್ನು ನೀಡಿದವು. ಸೇರ್ಪಡೆಗೊಂಡ 40 ಲಕ್ಷ ಮತದಾರರು ನಿಗೂಢರಾಗಿದ್ದರು. ಐದು ತಿಂಗಳಲ್ಲಿ ಲಕ್ಷಾಂತರ ಮತದಾರರು ಸೇರಿಕೊಂಡರು. ಆದರೆ ಚುನಾವಣಾ ಆಯೋಗವು ಈ ಮತದಾರರ ಪಟ್ಟಿಯ ಬಗ್ಗೆ ಪ್ರಶ್ನೆ ಕೇಳಿದ ವಿಪಕ್ಷಗಳ ಪ್ರಶ್ನೆಗೆ ಚುನಾವಣಾ ಆಯೋಗ ಯಾವುದೇ ಉತ್ತರ ನೀಡಲಿಲ್ಲ. ಮತದಾರರ ಪಟ್ಟಿ ಸರಿಯಾಗಿದೆಯೇ ಅಥವಾ ತಪ್ಪಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡಲಿಲ್ಲ. ಸಂಜೆ 5 ಗಂಟೆಯ ನಂತರ ಮತದಾರರ ಮತದಾನದ ಪ್ರಮಾಣ ಹೆಚ್ಚಳಗೊಂಡಿತು. ಸಂಜೆ 5 ಗಂಟೆಯ ನಂತರ ಮತದಾನ ಹೆಚ್ಚಳ ಸೇರಿದಂತೆ ಹಲವು ಪ್ರಶ್ನೆಗಳಿಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಲಿಲ್ಲ.

ಹರಿಯಾಣದಲ್ಲೂ ಅಕ್ರಮ

ಹರಿಯಾಣದಲ್ಲಿ ಬಿಜೆಪಿ ಗೆಲುವಿಗೆ ಮತದಾರರ ಪಟ್ಟಿಯೇ ಕಾರಣವಾಗಿರುವ ಬಗ್ಗೆ ವಿಪಕ್ಷಗಳ ಗಂಭೀರ ಆರೋಪವಾಗಿದೆ. ಕೇವಲ 8 ಸ್ಥಾನಗಳಿಂದ ವಿಪಕ್ಷ ಕಾಂಗ್ರೆಸ್‌ ಅಧಿಕಾರ ರಚಿಸುವುದನ್ನು ಕಳೆದುಕೊಂಡಿತು. ಇಲ್ಲಿನ 2 ಕೋಟಿ ಮತದಾರರಲ್ಲಿ ಈ 8 ಕ್ಷೇತ್ರಗಳ ಸೋಲಿನ ಒಟ್ಟು ಮತಗಳ ಅಂತರ ಕೇವಲ 22,779. ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಈ ವ್ಯತ್ಯಾಸಗಳೇ ಕಾರಣವಾಯಿತು. ಈ ಬಗ್ಗೆ ಆಕ್ಷೇಪವೆತ್ತಿದ ವಿಪಕ್ಷಗಳಿಗೆ ಚುನಾವಣಾ ಆಯೋಗ ಮತದಾರರ ಅಗತ್ಯ ದಾಖಲೆಗಳನ್ನು ಒದಗಿಸಲಿಲ್ಲ. ಇವೆಲ್ಲವನ್ನು ಗಮನಿಸಿದರೆ ಆಯೋಗ ಒಂದು ಪಕ್ಷದ ಪರವಾಗಿ ಕೆಲಸ ಮಾಡಿದೆ ಎಂಬುದನ್ನು ತಿಳಿಸುತ್ತದೆ. ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಕೇವಲ ಆಯೋಗದ ಜವಾಬ್ದಾರಿಯಷ್ಟೇ ಅಲ್ಲ, ಜನರೂ ಸಹ ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ. ಆಯೋಗವನ್ನು ಪ್ರಶ್ನಿಸಬೇಕಿದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಬಹುಮತಕ್ಕೆ ಸಮೀಪವಾದ 25 ಸ್ಥಾನಗಳನ್ನು 33 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದೆ. ಇವೆಲ್ಲವನ್ನು ಗಮನಿಸಿದರೆ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X