ಕಾರು ಚಾಲಕ ಬಾಬು ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೇಸ್ ಕಾರ್ಯಕರ್ತರ ಪ್ರತಿಭಟನೆ
ಚಿಕ್ಕಬಳ್ಳಾಪುರ: ಜಿಪಂ ಲೆಕ್ಕಾಧಿಕಾರಿ ಕಾರು ಚಾಲಕನಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್. ಬಾಬು ಸಾವಿಗೆ ನಾಗೇಶ್ ಮತ್ತು ಮಂಜುನಾಥ್ ಮೂಲಕ ಪರೋಕ್ಷವಾಗಿ ಸಂಸದ ಡಾ. ಕೆ.ಸುಧಾಕರ್ ಕಾರಣರಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೇಸ್ ಕಾರ್ಯಕರ್ತರು ಪ್ರತುಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಪಂ ದ್ವಾರಬಾಗಿಲು ಬಳಿ ಲೆಕ್ಕಾಧಿಕಾರಿಗಳ ಕಾರು ಚಾಲಕ ಬಾಬು ನೇಣಿಗೆ ಶರಣಾಗಿದ್ದು, ಡೆಟ್ ನೋಟಲ್ಲಿ ಸಂಸದ ಸುಧಾಕರ್ ಬೆಂಬಲಿಗ ನಾಗೇಶ್ ಜತೆಗೆ ಲೆಕ್ಕಾಧಿಕಾರಿ ಮಂಜುನಾಥ್ ಹೆಸರನ್ನ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.ಸುಧಾಕರ್ ಹೆಸರನ್ನೂ ಉಲ್ಲೇಖಿಸಿರುವ ಕಾರಣ ಈ ಮೂವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ದಲಿತ ಚಾಲಕ ಬಾಬು ಕುಟುಂಬಕ್ಕೆ ನ್ಯಾಯಾ ಒದಗಿಸಿಕೊಡಬೇಕೆಂದು ಒತ್ತಾಯಿಸಿ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಂಗ್ರೇಸ್ ಮುಖಂಡ ವಕೀಲ ಮುನೇಗೌಡ ಮಾತನಾಡಿ ದಲಿತ ಯುವಕ ಇತ್ತೀಚೆಗೆ ಮದುವೆಯಾಗಿ ಬದುಕು ಕಟ್ಟಿಕೊಂಡಿದ್ದ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸ ಲಕ್ಷಾಂತರ ಹಣ ಪಡೆದು ವಂಚನೆ ಎಸಗಿರುವ ನಾಗೇಶ್ ಮತ್ತು ಮಂಜುನಾಥ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಬಾಬುರವರು ನೀಡಿದ್ದ ಹಣವನ್ನ ವಸೂಲಿ ಮಾಡಿ ಅವರ ಕುಟುಂಬಕ್ಕೆ ವಾಪಸ್ಸುಕೊಡಬೇಕೆಂದರು.
ಮತ್ತೊಬ್ಬ ಮುಖಂಡ ಡ್ಯಾನ್ಸ್ ಸೀನು ಮಾತನಾಡಿ ನೇಣಿಗೆ ಶರಣಾದ ಬಾಬು ಆತನಿಂದ ಹಣಪಡೆದು ಸರ್ಕಾರಿ ಕೆಲಸದ ಆಸೆ ಇಡಿಸಿದ್ದ ನಾಗೇಶ್ ಸುಧಾಕರ್ ಬೆಂಬಲಿಗ, ಸಂಸದ ಸುಧಾಕರ್ ಹೆಸರೂ ಡೆಟ್ ನೋಟಲ್ಲಿ ಬರೆದಿರುವುದರಿಂದ ಮೂವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
*ಇದನ್ನು ಓದಿದ್ದೀರಾ..?*
ಚಿಕ್ಕಬಳ್ಳಾಪುರ | ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿ
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ,ನಾಗಭೂಷಣ್,ಮಂಗಳಪ್ರಕಾಶ್,ನಾರಾಯಣಮ್ಮ,
ರಕ್ಷಿತ್ ರೆಡ್ಡಿ,ಕುಬೇರ್ ಅಚ್ಚು, ಚೇತನ್,ವೆಂಕಟಲಕ್ಷ್ಮಮ್ಮ, ಬಿಸೇಗಾರಹಳ್ಳಿ ನಾಗೇಶ್,ನಾಗೇಶ್ ರೆಡ್ಡಿ,ಹಮೀಮ್,ಪೆದ್ದಣ್ಣ,ಅಣ್ಣೆಮ್ಮ,ವಿನಯ್ ಬಂಗಾರಿ, ಖಲೀಲ್,ಬಾಬಾಜಾನ್,ಮಂಗಳಪ್ರಕಾಶ್,
ಉಮೇಶ್. ಜಿ,ಆಕಲಹಳ್ಳಿ ಶಿವು,ಮತ್ತು ಇತರರು ಇದ್ದರು.