ರಷ್ಯಾದೊಂದಿಗೆ ತೈಲ ವ್ಯಾಪಾರ ನಿಲ್ಲಿಸದ ಕಾರಣ ನೀಡಿ ಅಮೆರಿಕ ಈಗಾಗಲೇ ಭಾರತದ ವಸ್ತುಗಳ ಆಮದಿನ ಮೇಲೆ ಶೇಕಡ 50ರಷ್ಟು ಸುಂಕವನ್ನು ವಿಧಿಸಿದೆ. ಇದೀಗ “ಸುಂಕಗಳ ಕುರಿತಾದ ವಿವಾದ ಬಗೆಹರಿಯುವವರೆಗೆ ಭಾರತದೊಂದಿಗೆ ಯಾವುದೇ ವ್ಯಾಪಾರ ಮಾತುಕತೆಗಳಿಲ್ಲ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಓವಲ್ ಕಚೇರಿಯಲ್ಲಿ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಪುನರಾರಂಭಗೊಳ್ಳುವ ನಿರೀಕ್ಷೆಯಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, “ಇಲ್ಲ, ನಾವು ಸುಂಕದ ವಿಚಾರಗಳನ್ನು ಪರಿಹರಿಸುವವರೆಗೆ ಮಾತುಕತೆ ನಡೆಸುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಡೊನಾಲ್ಡ್ ಟ್ರಂಪ್‌ಗೆ ಬಾಯಿ ಮುಚ್ಚಲು ನೊಬೆಲ್ ಪ್ರಶಸ್ತಿ ನೀಡಬೇಕು: ಸಿನಿಮಾ ನಿರ್ಮಾಪಕ ಹನ್ಸಲ್ ಮೆಹ್ತಾ
ಅಮೆರಿಕ ಬುಧವಾರ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ ಶೇಕಡ 25ರಷ್ಟು ಸುಂಕಗಳನ್ನು ವಿಧಿಸುವ ಕಾರ್ಯಕಾರಿ ಆದೇಶವನ್ನು ಹೊರಡಿಸಿದೆ. ಆದ್ದರಿಂದಾಗಿ ಒಟ್ಟು ಸುಂಕ ಶೇಕಡ 50ಕ್ಕೆ ಏರಿಕೆಯಾಗಿದೆ. ಅಮೆರಿಕವು ನಿರ್ದಿಷ್ಟವಾಗಿ ಭಾರತ ರಷ್ಯಾದೊಂದಿಗೆ ನಿರಂತರ ತೈಲ ಆಮದು ಮಾಡುವುದನ್ನು ವಿರೋಧಿಸಿದೆ.
ಈ ಆಮದುಗಳು ನೇರ ಅಥವಾ ಮಧ್ಯವರ್ತಿಗಳ ಮೂಲಕವಾಗಿದ್ದರೂ ಅಮೆರಿಕಕ್ಕೆ ಅಸಾಮಾನ್ಯ ಮತ್ತು ಅಸಾಧಾರಣ ಬೆದರಿಕೆಯನ್ನು ತೋರಿಸುತ್ತದೆ. ಆದ್ದರಿಂದಾಗಿ ತುರ್ತು ಆರ್ಥಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆದೇಶವು ಹೇಳಿದೆ.
