- ಪ್ರಜಾಪ್ರಭುತ್ವ ಉಳಿವಿಗೆ ಚುನಾವಣೆಗಲೇ ಜೀವಾಳ
- ಭಾರತದ ಸಂವಿಧಾನ ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡಿದೆ.
ಚುನಾವಣೆಗಳೇ ಪ್ರಜಾಪ್ರಭುತ್ವದ ಜೀವಾಳ, ಪ್ರಜಾಪ್ರಭುತ್ವದ ರಥ ಮುಂದೆಸಾಗಲು ಚುನಾವಣೆಗಳು ಅಗತ್ಯವಾಗಿವೆ. ನೀವು ನೀಡುವ ಒಂದು ಮತದಿಂದ ದೇಶದ ಪಥ ಬದಲಾಯಿಸಬಲ್ಲದು ಎಂದು ಸಾಹಿತಿ ಉಪನ್ಯಾಸಕ ಸುರೇಶ ಬಳಗಾನೂರು ಹೇಳಿದರು.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದ ಆವರಣದಲ್ಲಿ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ರಾಯಚೂರು ವಿಶ್ವ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಮತದಾನದ ಮಹತ್ವ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
“ಮತದಾನದ ಹಕ್ಕನ್ನು ಪಡೆಯಲು ಹಿಂದೆ ಕ್ರಾಂತಿಗಳೇ ನಡೆದಿವೆ. ಬ್ರಿಟನ್, ಅಮೇರಿಕಾ ಮುಂತಾದ ರಾಷ್ಟ್ರಗಳಲ್ಲಿ ಸರ್ವರಿಗೂ ಸಮನಾದ ಮತದಾನದ ಹಕ್ಕು ಇಲ್ಲ. ಆದರೆ ಭಾರತದ ಸಂವಿಧಾನ ನಮಗೆ ಸಮಾನ ಮತದಾನದ ಹಕ್ಕನ್ನು ನೀಡಿದೆ. ಅದನ್ನು ಸರಿಯಾಗಿ ಬಳಸಿ ದೇಶದ ಪ್ರಗತಿಗೆ ನಾಂದಿಹಾಡಬೇಕಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಸ್ಕಿಯ ಖ್ಯಾತ ವೈಧ್ಯ, ಶಿಕ್ಷಣಪ್ರೇಮಿ ಡಾ.ಶಿವಶರಣಪ್ಪ ಇತ್ಲಿ ಮಾತನಾಡಿ, “ಮತದಾನ ನಮ್ಮೆಲ್ಲರ ಹಕ್ಕು , ಅದನ್ನುಸರಿಯಾಗಿ ಅರಿಯುವ ಮೂಲಕ ದೇಶದ ಪ್ರಗತಿಗೆ ಕಾರಣೀಕರ್ತರಾಗಬೇಕು. ದೇಶದ ಅಳಿವು ಉಳಿವು ನಿಮ್ಮ ಕೈಯಲ್ಲಿದೆ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು” ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಶಿವಗ್ಯಾನೆಪ್ಪ ಲಕ್ಕುಂದಿ,ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀನಿವಾಸ ಯಾಳಗಿ, ವೀರೇಶ ಜಂಗಮರ ಹಳ್ಳಿ, ಲಾಲ್ ಸಾಬ್, ಡಾ.ಪಂಪಾಪತಿ , ಡಾ.ದೇವಪ್ಪ ಹೆಬ್ಬಾಳ, ಡಾ.ವಿಶ್ವನಾಥ ಬೆಲ್ಲದ, ಹುಚ್ಚೇಶ ನಾಗಲೀಕರ, ಪ್ರಭುದೇವ ಸಾಲಿಮಠ, ಈರಣ್ಣ ಗೌಡ, ಏಲಕಿಯಾ, ಕನ್ಯಾಕುಮಾರಿ, ಸೈಯದ್ ಅಲಿ, ಹಸೇನಪ್ಪ, ಶಾಲಾ ಅಭಿವೃದ್ಧಿ ಮಂಡಳಿಯ ಸದಸ್ಯರು ಸೇರಿದಂತೆ ಶಿಬಿರಾರ್ಥಿಗಳು, ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು.