“ಹಾನಗಲ್ಲ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣ ಅಂದರೆ 80% ರಷ್ಟು ರೈತ ಸಮುದಾಯ ಜೀವನ ನಡೆಸುವ ಪ್ರದೇಶವಾಗಿದೆ. ಅತೀ ಹೆಚ್ಚು ಅಂದರೆ ಸುಮಾರು 46 ಸಾವಿರ ಕ್ಕೂ ಹೆಚ್ಚು ಪೆಕ್ಟರ್ ಭೂ ಪ್ರದೇಶ ಸಾಗುವಳಿ ಮಾಡಲು ಅನುಕೂಲವಿದ್ದ ಪ್ರದೇಶವಾಗಿದೆ.ಮಾನ್ಸೂನ್ ಬೂಜಾಟದಿಂದ ಜಡೆ ಮಳೆ ಸುರಿದು ಅಷ್ಟೂ ಭೂ ಪ್ರದೇಶ ನೀರಿನಿಂದ ಆವೃತವಾಗಿದ್ದು, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು” ಎಂದು ಸರಕಾರಕ್ಕೆ ಪ್ರಗತಿಪರ ಸಂಘಟನೆ ಮುಖಂಡರು ಒತ್ತಾಯಿಸಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ತಹಸೀಲ್ದಾರ ಕಚೇರಿಯಲ್ಲಿ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಪ್ರಗತಿಪರ ಸಂಘಟನೆ ಹಾಗೂ ರೋಷನಿ ಟ್ರಸ್ಟ್ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಮನವಿ ಸಮಯದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಬಳಿಗಾರ್ ಮಾತನಾಡಿ, ರೈತರು ಸಾಲ ಸೋಲ ಮಾಡಿ ಬೀಜ ಗೊಬ್ಬರ ಖರೀದಿಸಿ, ಮಣ್ಣಲ್ಲಿ ಬೆರೆಸಿ ಇನ್ನೇನು ಬೆಳೆ ಮೊಳಕೆಯೊಡೆಯುವ ಸಮಯದಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಇಲ್ಲದ ಅವಾಂತರ ಸೃಷ್ಟಿಯಾಗಿ ಬಿತ್ತಿದ ಬೀಜ ಮೊಳಕೆಯೊಡೆಯುವ ಹಂತದಲ್ಲಿಯೇ ಮಣ್ಣಲ್ಲಿ ಕಮರಿಹೋಗಿದೆ. ಅಲ್ಪ ಸ್ವಲ್ಪ ಬೆಳೆದ ಬೆಳೆಯೂ ಹಾಳಾಗಿ ಹೋಗಿದ್ದು, ಬಿತ್ತದೆ ಉಳಿದ ಭೂ ಪ್ರದೇಶ ಇನ್ನೂ ಹಾಗೆಯೇ ಉಳಿದಿದೆ. ಬಿತ್ತನೆಯ ಕಾಲ ಮುಗಿದುಹೋಗಿದ್ದು ರೈತ ಮುಂದಿನ ಜೀವನ ಕ್ರಮದ ಬಗ್ಗೆ ಚಿಂತೆಗೀಡಾಗಿದ್ದಾನೆ” ಎಂದು ಹೇಳಿದರು.
“ಇಂತಹ ಸಂದರ್ಭದಲ್ಲಿ ರೈತರಿಗೆ ಅತ್ಮಸ್ಥೆರ್ಯ ತುಂಬುವುದರ ಜೊತೆಗೆ ಆರ್ಥಿಕ ನೆರವು ಸರಕಾರ ಮಾಡಬೇಕು. ಬೆಳೆ ಹಾನಿಗೆ ಸೂಕ್ತ ಪರಿಹಾರವನ್ನು ಸರಕಾರ ಕೊಡಬೇಕು” ಎಂದು ಒತ್ತಾಯಿದರು.
ಪ್ರಗತಿಪರ ಸಂಘಟನೆ ಮುಖಂಡರು ಫೇರೋಜ್ ಮಾತನಾಡಿ, “ರೈತ ಎಲ್ಲ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಿದ್ದು, ಒಟ್ಟು ನಾಶವಾಗಿರುವ ಬೆಳೆಗೆ ಬೆಳೆ ವಿಮೆ ಪಾವತಿಸಿದ ಎಲ್ಲ ರೈತರಿಗೆ ವಿಮಾ ಕಂಪನಿ ಈ ಕೂಡಲೆ 25% ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಬೇಕು. ತಾಲೂಕಿನಲ್ಲಿ ಬೆಳೆದ ಬೆಳೆಗಳಿಗೆ ಮೇಲುಗೊಬ್ಬರವಾಗಿ ಬಳಸುವ ಯೂರಿಯಾ ಗೊಬ್ಬರ ಸರಿಯಾದ ಸಮಯಕ್ಕೆ ರೈತರಿಗೆ ಸಿಗದೆ ಮತ್ತಷ್ಟು ಬೆಳೆಗಳು ಅವನತಿಯ ಅಂಚಿನಲ್ಲಿದ್ದು ಶೀಘ್ರದಲ್ಲಿ ರೈತನಿಗೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ದೊರಕುವಂತಾಗಬೇಕು” ಎಂದು ಒತ್ತಾಯಿಸಿದರು.
“ರಾಸಾಯನಿಕ ಗೊಬ್ಬರದ ಜೊತೆಗೆ ಮಣ್ಣು ಪರೀಕ್ಷೆ ಮಾಡದೆ ಲಿಂಕ್‌ನ್ನು ಗೊಬ್ಬರದ ಜೊತೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದು, ಒತ್ತಾಯ ಪೂರ್ವಕವಾಗಿ ರೈತರಿಗೆ ಹೊರೆ ಹೊರಿಸಲಾಗಿದೆ. ಇದು ಮತ್ತಷ್ಟು ರೈತರನ್ನು ಸಾಲಗಾರರನ್ನಾಗಿಸುವಲ್ಲಿ ಪ್ರಮುಖ ಕಾರಣವಾಗಿದೆ. ಮುಂದೆ ಕೃಷಿ ಇಲಾಖೆ ಮಣ್ಣು ಪರೀಕ್ಷೆ ಮಾಡದೆ ಯಾವುದೆ ಲಿಂಕ್‌ನ್ನು ರೈತರಿಗೆ ಕೊಡದಂತೆ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಈ ಸಮಯದಲ್ಲಿ ಪ್ರಗತಿಪರ ಮುಖಂಡರು ಮಂಜುನಾಥ ಕರ್ಜಗಿ, ಎನ್. ಎಂ ಪೂಜಾರ, ಬಿ. ಆರ್. ಶೆಟ್ಟರ, ಅನಿತಾ ಡಿಸೋಜಾ, ಕಲ್ಲಪ್ಪ, ಮಾರ್ತಾಂಡಪ್ಪ, ರೈತರು ಇನ್ನೂ ಅನೇಕರು ಉಪಸ್ಥಿತರಿದ್ದರು.