ಸಾರಿಗೆ ಕಚೇರಿಗೆ ಹೊಂಡಾ ಆಕ್ಟಿವಾ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯಗಳಾಗಿ ಸಾರಿಗೆ ಕಛೇರಿ ಅಧೀಕ್ಷಕರೊಬ್ಬರು ಮೃತ ಪಟ್ಟ ಧಾರುಣ ಘಟನೆ ದಾವಣಗೆರೆ ರಿಂಗ್ ರಸ್ತೆಯಲ್ಲಿ ನಡೆದಿದೆ. ದುರ್ಮರಣ ಹೊಂದಿದ ದುರ್ದೈವಿ ಚಿಕ್ಕಮಗಳೂರು ಮೂಲದವರು ಎಂದು ತಿಳಿದು ಬಂದಿದೆ.
ದಾವಣಗೆರೆ ಆರ್ ಟಿ ಓ ಕಚೇರಿಯ ಸೂಪರಿಂಡೆಂಟ್ ತಿಪ್ಪೇಶಪ್ಪ ಮೃತ ಪಟ್ಟ ದುರ್ದೈವಿಯಾಗಿದ್ದು, ಅವರು ತೆರಳುತ್ತಿದ್ದ ಹೋಂಡಾ ಆಕ್ಟಿವಾ ಬೈಕ್ ಗೆ ಕೆಎಸ್ಆರ್ಟಿಸಿ ಬಸ್ ಗುದ್ದಿದ ಪರಿಣಾಮ, ಬಸ್ ನ ಹಿಂಬದಿ ಚಕ್ರವು ತಿಪ್ಪೇಶಪ್ಪನವರ ತಲೆಗೆ ಅಪ್ಪಳಿಸಿದ್ದರಿಂದ ಹೆಲ್ಮೆಟ್ ಧರಿಸಿದ್ದರೂ ಕೂಡ ತಲೆಗೆ ಬಲವಾದ ಹೊಡೆತ ಬಿದ್ದಿದ್ದು, ಹೆಲ್ಮೆಟ್ ನ ಒಳಗೆ ತಲೆ ನುಜ್ಜುಗುಜ್ಜಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿದ್ದಾರೆ ಮೃತಪಟ್ಟಿದ್ದಾರೆ.

ಆರ್ ಟಿ ಓ ಅಧೀಕ್ಷಕ ತಿಪ್ಪೇಶಪ್ಪನವರು ದಾವಣಗೆರೆಯ ಸಾರಿಗೆ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನವರಾದ ಅವರು ದಾವಣಗೆರೆಯ ಜೆ ಎಚ್ ಪಟೇಲ್ ಬಡಾವಣೆಯಲ್ಲಿ ವಾಸವಿದ್ದು, ಕಚೇರಿಗೆ ಹೊರಹೊರ್ತುಲ ರಸ್ತೆ ಮಾರ್ಗವಾಗಿ ಪ್ರತಿನಿತ್ಯ ಕಚೇರಿಗೆ ಆಗಮಿಸುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಸ್ಮಶಾನ ಒತ್ತುವರಿ | ಹಲವು ವರ್ಷಗಳಾದರೂ ತೆರವುಗೊಳಿಸದೆ ಅಧಿಕಾರಿಗಳ ನಿರ್ಲಕ್ಷ್ಯ
ಅಪಘಾತ ಸಂಭವಿಸುತ್ತಿದ್ದಂತೆ ಜನರು ದೌಡಾಯಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರಾದರೂ ತೀವ್ರ ಸ್ವರೂಪದ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಸೌಮ್ಯ ಸ್ವಭಾವದ ವ್ಯಕ್ತಿಯೆಂದೇ ಹೆಸರಾಗಿದ್ದರು.