ಶಿವಮೊಗ್ಗ, ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಬಸವೇಶ್ವರ ಧರ್ಮ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸಂಘದ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಚಲನ ಚಿತ್ರಗೀತೆಗಳ ಗಾಯನ ಸ್ಪರ್ಧೆಯನ್ನು “ಕರ್ನಾಟಕ ಸ್ಟಾರ್ ಸಿಂಗರ್ 2025 ಸೀಸನ್-2” ಎಂಬ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಬಿ ಎ ಮಂಜುನಾಥ , ಕಾರ್ಯಕ್ರಮದ ಗಾಯಕ-ಗಾಯಕಿಯರ ಆಡಿಶನ್ ಆ. 16 ರಂದು ಲಯನ್ಸ್ ಕ್ಲಬ್, ಶುಗರ್ ಟೌನ್, ಇಲ್ಲಿ ನಡೆಯಲಿದೆ.
ಆಡಿಶನ್‌ನಲ್ಲಿ ಆಯ್ಕೆಯಾದ ಗಾಯಕ-ಗಾಯಕಿಯರಿಗೆ ಸೆಮಿಫೈನಲ್ ರೌಂಡ್ ಆ. 17-08-2025 ರಂದು ಲಯನ್ಸ್ ಕ್ಲಬ್, ಜೆ.ಟಿ.ಎಸ್. ಸ್ಕೂಲ್ ಪಕ್ಕ, ಶುಗರ್ ಟೌನ್. ಇಲ್ಲಿ ಸೆಮಿಫೈನಲ್ ನಡೆಯಲಿದೆ ಎಂದರು.
ಸೆಮಿಫೈನಲ್‌ನಲ್ಲಿ ಆಯ್ಕೆಯಾದ ಗಾಯಕ-ಗಾಯಕಿಯರಿಗೆ ರಾಜ್ಯ ಮಟ್ಟದ ಚಲನಚಿತ್ರಗೀತೆಗಳ ಫೈನಲ್ ಮತ್ತು ಗ್ರಾಂಡ್ ಫಿನಾಲೆ ಸ್ಪರ್ಧೆಯು ಆ. 24 ರ ಭಾನುವಾರ ಬಸವೇಶ್ವರ ಸಭಾ ಭವನ ಸಿದ್ಧರೂಢನಗರ, ಭದ್ರಾವತಿಯಲ್ಲಿ ನಡೆಯಲಿದೆ. ವಿಜೇತರಾದವರಿಗೆ ಪ್ರಥಮ ಬಹುಮಾನ 25000/- ನಗದು ಮತ್ತು ಪಾರಿತೋಷಕ. ದ್ವೀತಿಯ ಬಹುಮಾನ 15000/- ನಗದು ಮತ್ತು ಪಾರಿತೋಷಕ. ತೃತೀಯ ಬಹುಮಾನ 10000/- ನಗದು ಮತ್ತು ಪಾರಿತೋಷಕ. ಸಮಾಧಾನಕರ ಬಹುಮಾನ 2000/- ಭಾಗವಹಿಸಿದ ಎಲ್ಲಾ ಗಾಯಕ ಗಾಯಕಿಯರಿಗೆ ಸರ್ಟಿಫೀಕೆಟ್‌ಗಳನ್ನು ನೀಡಕಾಗುವುದು ಎಂದರು.
ಇದೇ ಕಾರ್ಯಕ್ರಮದಲ್ಲಿ ಇಬ್ಬರು ಹಿರಿಯ ಕಲಾವಿದರಿಗೆ ದಿ॥ ಜಯಶೀಲನ್ ರಾಜ್ಯಪ್ರಶಸ್ತಿ ಮತ್ತು ದಿ| ಗೀತಾಂಜಲಿ ಶ್ರೀನಿವಾಸ್ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಹಾಗೂ ಸಂಘದ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ, ಕಲಾವಿದರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವೈ ಕೆ ಹನುಮಂತಯ್ಯ, ಚರಣ್ ಕವಾಡ್, ಚಿದಾನಂದ, ಪ್ರಶಾಂತ್ ಮೊದಲಾದವರಿದ್ದರು.