ಎಸ್‌ಸಿಪಿ- ಟಿಎಸ್‌ಪಿ 2013ರ ಕಾಯ್ದೆಯ ಸಮರ್ಪಕ ಜಾರಿ, ಎಸ್‌ಸಿ-ಎಸ್‌ಟಿ ಬ್ಯಾಕ್ಲಾಗ್ ಹುದ್ದೆಗಳ ಶೀಘ್ರ ಭರ್ತಿ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಸಹ ಸಂಚಾಲಕ ಶರಣು ಶಿಂಧೆ, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿದೆ. ಈ ಕಾಯ್ದೆಯ ಕಲಂ 7ಡಿ ಮತ್ತು 7ಸಿ ರಲ್ಲಿ ಕಾಯ್ದೆ ಇಡಿ ನಿಗದಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸರ್ಕಾರಗಳು ವಂಚಿಸುತ್ತಿವೆ. ಆದ್ದರಿಂದ 7ಡಿ ಮತ್ತು 7ಸಿ ಕಲಂಗಳನ್ನು ಕೂಡಲೇ ರದ್ದು ಪಡಿಸಬೇಕು” ಎಂದು ಆಗ್ರಹಿಸಿದರು.
ರಾಜ್ಯ ಸಹ ಸಂಚಾಲಕ ರಮೇಶ್ ಆಸಂಗಿ ಮಾತನಾಡಿ, “ಸರ್ಕಾರದ 38 ಇಲಾಖೆಗಳ ಬ್ಯಾಕ್ಲಾಗ್ ಹುದ್ದೆಗಳ ಕುರತಂತೆ ಅಂಕಿ ಅಂಶ ನೀಡದಿರುವ ಇಲಾಖೆ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲಿಸಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದತ್ತಾಂಶ ಪಡೆದ ತಕ್ಷಣ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ಮಹಿಳಾ ವಿವಿ ಆವರಣದಲ್ಲಿರುವ ಅಕ್ಕಮಹಾದೇವಿ ಮೂರ್ತಿ ತೆರವಿಗೆ ಆಗ್ರಹ
ಪ್ರತಿಭಟನೆಯಲ್ಲಿ ಸಂಚಾಲಕ ಅಶೋಕ ಚಲವಾದಿ, ವಿನಾಯಕ ಗುಣಸಾಗರ, ಪ್ರಕಾಶಗುಡಿಮನಿ, ಪರಶುರಾಮ ದಂಡಿವಾರ, ಲಕ್ಕಪ್ಪ ಬಡಿಗೇರ, ಅನಿಲ ಕೊಡತೆ, ಸುರೇಶ ನಡಗಡ್ಡಿ, ರೇಣುಕಾ ಮಾದರ, ಯಶೋಧ ಮೇಲಿನಕ್ಕೆ, ಸುಭದ್ರ ಮೇಲಿನ ಮನೆ, ಚಂದ್ರಕಲಾ ಮಸಳಿಕೇರಿ, ಬಿಎಸ್ ತಳವಾರ, ರಾಜು ತೊರವಿ, ಮಳಸಿದ್ದ ನಾಯ್ಕೋಡಿ, ರವಿ ಮ್ಯಾಗೇರಿ, ಶಿವು ಮೂರುಮಣ, ಕಾಶಿನಾಥ ಬನಸೋಡೆ, ರಾಜಕುಮಾರ ಸಿಂದಗೇರಿ, ಮಂಜುನಾಥ ಎಂಟಮಾನ, ಬಸವರಾಜ ಹೊಸಮನಿ, ಲಕ್ಷ್ಮಣ ಹರಿಹಾಳ, ರವೀಂದ್ರ ಛಲವಾದಿ, ಸಂಜೀವನ ಜಾಣಕಾರ, ಸೂರ್ಯಕಾಂತ ಜಾಣಕಾರ, ಶಿವಕುಮಾರ ಗುಣಮಿ, ಶಿಲ್ಪಿ ಉಮೇಶ್ ಚಲವಾದಿ ಇದ್ದರು.