ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಿ ದೇಗುಲದಲ್ಲಿ ಇಂದು ವಿಶೇಷ ಪೂಜೆ ನೆರವೇರಿತು. ಮುಂಜಾನೆಯೇ ಶುರುವಾಗಿದ್ದ ಭಕ್ತರ ಆಗಮನ ಸಂಜೆಯ ತನಕ ಮುಂದುವರೆಯಿತು. ಶ್ರೀ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿತ್ತು.
ತಮ್ಮ ಮನೆಗಳಲ್ಲಿ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿದ ಮಹಿಳೆಯರು ಹಾಗೂ ಭಕ್ತ ವೃಂದ ದೇಗುಲಕ್ಕೂ ಆಗಮಿಸಿ ವಿಶೇಷವಾದ ಪೂಜೆ ಸಲ್ಲಿಸಿ ದೇವಿಗೆ ನಮಿಸಿದ್ದಾರೆ.ಶ್ರಾವಣ ಮಾಸದ 3ನೇ ಶುಕ್ರವಾರ ಪೌರ್ಣಿಮೆ ಮೊದಲು ಬರುವ ವರ ಮಹಾಲಕ್ಷ್ಮಿ ಹಬ್ಬ ಭಕ್ತರಿಗೆ ಸಕಲ ಸಂಪತ್ತು ತಂದುಕೊಡುತ್ತದೆ ಎಂಬ ವಾಡಿಕೆ ಇದೆ. ಹೀಗಾಗಿ ಭಕ್ತರು ಮಹಾಲಕ್ಷ್ಮಿ ದೇವಿಗೆ ಭಕ್ತಿಯಿಂದ ನಮಿಸಿ ಇಷ್ಟಾರ್ಥಗಳ ಫಲಿಸಲು ಪಾರ್ಥಿಸಿದರು.
ಈ ಬಾರಿಯ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತ್ತಿತ್ತು, ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಪುನೀತರಾದರು.
ಕಮಲಪ್ರಿಯಾ ಪ್ಯಾಲೇಸ್ ಪಕ್ಕದಲ್ಲಿ ಸುಸರ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ನೀಡಿದರು. ತುರ್ತು ಸೇವೆಗೆ ಅಂಬ್ಯುಲೆನ್ಸ್, ಅಗ್ನಿ ಶಾಮಕದಳ ವ್ಯವಸ್ಥೆ ನೀಡಲಾಯಿತ್ತು. ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಸಾಮಾನ್ಯ ದಿನಗಳಲ್ಲೇ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂದು ವಿಶೇಷ ದಿನವಾದ ಹಿನ್ನೆಲೆಯಲ್ಲಿ ಈ ಸಂಖ್ಯೆ ಲಕ್ಷ ದಾಟಿದೆ ಎನ್ನಲಾಗಿದೆ. ಹೀಗೆ ದೂರದ ಊರುಗಳಿಂದ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಬಂದಿದ್ದ ಭಕ್ತರಿಗೆ ದಾಸೋಹ ಕಾರ್ಯಕ್ರಮ ಏರ್ಪಡಿಸಿದ್ದರು. ಜೊತೆಗೆ ಭಕ್ತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಹೀಗೆ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಭಕ್ತರು ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆದು ಭಕ್ತಿಯಿಂದ ನಮಿಸಿದರು. ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಿ ದೇಗುಲದಲ್ಲಿ ಇಂದು ವಿಶೇಷ ಪೂಜೆ ನೆರವೇರಿತು.
ಮುಂಜಾನೆಯೇ ಶುರುವಾಗಿದ್ದ ಭಕ್ತರ ಆಗಮನ ಸಂಜೆಯ ತನಕ ಮುಂದುವರೆಯಿತು. ಶ್ರೀ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿತ್ತು.ತಮ್ಮ ಮನೆಗಳಲ್ಲಿ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿದ ಮಹಿಳೆಯರು ಹಾಗೂ ಭಕ್ತ ವೃಂದ ದೇಗುಲಕ್ಕೂ ಆಗಮಿಸಿ ವಿಶೇಷವಾದ ಪೂಜೆ ಸಲ್ಲಿಸಿ ದೇವಿಗೆ ನಮಿಸಿದ್ದಾರೆ.ಶ್ರಾವಣ ಮಾಸದ 3ನೇ ಶುಕ್ರವಾರ ಪೌರ್ಣಿಮೆ ಮೊದಲು ಬರುವ ವರ ಮಹಾಲಕ್ಷ್ಮಿ ಹಬ್ಬ ಭಕ್ತರಿಗೆ ಸಕಲ ಸಂಪತ್ತು ತಂದುಕೊಡುತ್ತದೆ ಎಂಬ ವಾಡಿಕೆ ಇದೆ. ಹೀಗಾಗಿ ಭಕ್ತರು ಮಹಾಲಕ್ಷ್ಮಿ ದೇವಿಗೆ ಭಕ್ತಿಯಿಂದ ನಮಿಸಿ ಇಷ್ಟಾರ್ಥಗಳ ಫಲಿಸಲು ಪಾರ್ಥಿಸಿದರು.
ಈ ಬಾರಿಯ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತ್ತಿತ್ತು, ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಪುನೀತರಾದರು.ಕಮಲಪ್ರಿಯಾ ಪ್ಯಾಲೇಸ್ ಪಕ್ಕದಲ್ಲಿ ಸುಸರ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ನೀಡಿದರು. ತುರ್ತು ಸೇವೆಗೆ ಅಂಬ್ಯುಲೆನ್ಸ್, ಅಗ್ನಿ ಶಾಮಕದಳ ವ್ಯವಸ್ಥೆ ನೀಡಲಾಯಿತ್ತು. ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಸಾಮಾನ್ಯ ದಿನಗಳಲ್ಲೇ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂದು ವಿಶೇಷ ದಿನವಾದ ಹಿನ್ನೆಲೆಯಲ್ಲಿ ಈ ಸಂಖ್ಯೆ ಲಕ್ಷ ದಾಟಿದೆ ಎನ್ನಲಾಗಿದೆ. ಹೀಗೆ ದೂರದ ಊರುಗಳಿಂದ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಬಂದಿದ್ದ ಭಕ್ತರಿಗೆ ದಾಸೋಹ ಕಾರ್ಯಕ್ರಮ ಏರ್ಪಡಿಸಿದ್ದರು. ಜೊತೆಗೆ ಭಕ್ತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಹೀಗೆ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಭಕ್ತರು ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆದು ಭಕ್ತಿಯಿಂದ ನಮಿಸಿದರು.
ಶ್ರೀ ಮಾತೆ ಕಮಲಮ್ಮ ಧ್ಯಾನ ಮಂದಿರದಲ್ಲಿ ಶ್ರೀ ಶ್ರೀ ಡಾ.ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಗುರೂಜಿಯವರಿಂದ ವಚನಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ರಾಜ್ಯ ಸೇರಿ ಹೊರ ರಾಜ್ಯದಿಂದಲೂ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಆಗಮಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ಪ್ರತಿವರ್ಷ ಕೂಡ ಅದ್ಧೂರಿಯಾಗಿ ಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ. ಈ ವರ್ಷ ಮತ್ತೊಂದು ವಿಶೇಷ ಕೂಡ ಸೇರಿತ್ತು. ಅದೇನೆಂದ್ರೆ ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಹಿನ್ನೆಲೆ ಮಹಿಳಾ ಭಕ್ತರಿಗೆ ಸಾಕಷ್ಟು ಅನುಕೂಲ ಆಗಿತ್ತು. ಹೀಗಾಗಿ ಈ ಬಾರಿ ಶ್ರೀ ಮಹಾಲಕ್ಷ್ಮಿ ಹಬ್ಬಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಭಕ್ತರಿಗೆ ಯಾವುದೇ ರೀತಿ ಸಮಸ್ಯೆ ಎದುರಾಗದಂತೆ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಭದ್ರತೆಯನ್ನ ಕೂಡ ಹೆಚ್ಚಿಸಲಾಗಿತ್ತು.ಇಂದು ವರಮಹಾಲಕ್ಷ್ಮೀ ಹಬ್ಬದ ವಿಶೇಷವಾದ ದಿನವಾಗಿರುವುದರಿಂದ ನಮ್ಮ ನಿರೀಕ್ಷೆಗೂ ಮೀರಿದ ಭಕ್ತರು ದೇವಸ್ಥಾನಕ್ಕೆ ಆಮಗಮಿಸುತ್ತಿದ್ದಾರೆ, ಟ್ರಸ್ಟ್ ವತಿಯಿಂದ ವ್ಯವಸ್ಥಿವಾಗಿ ದೇವಿಯ ದರ್ಶನಕ್ಕೆ ಅನುವು ಮಾಡಲಾಗಿದೆ.

ಈ ಕ್ಷೇತ್ರದಲ್ಲಿ ಇಂದು ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆಯನ್ನು ಮಾಡಿರುವುದು ಜನತೆಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಆ ದೇವಿಯ ಕೃಪೆಯಿಂದ ಆಸ್ಪತ್ರೆಯನ್ನು ಕೂಡ ನಿರ್ಮಿಸಿ ಸುತ್ತಮುತ್ತಲ ಬಡಜನತೆಗೆ ಉಚಿತ ಆರೋಗ್ಯ ಸೇವೆ ನೀಡಲು ನಮ್ಮ ಟ್ರಸ್ಟ್ ತೀರ್ಮಾನಿಸಿದೆ ಎಂದು ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ಷಅಧ್ಯಕ್ಷ ವಾಸುದೇವ್ ಹೇಳಿದರು.ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ನೂತನವಾಗಿ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಿದ್ದು,ಶ್ರೀ ಶ್ರೀ ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಗುರೂಜಿಯವರಿಂದ ನೂತನ ಆರೋಗ್ಯ ಪ್ರಾಥಮಿಕ ಕೇಂದ್ರವನ್ನು ಉದ್ಘಾಟಿಸಿದರು. ನಿವೃತ್ತ ವೈದ್ಯರಾದ ಡಾ. ಲಕ್ಷ್ಮೀಕಾಂತ್ ರವರು ಕರ್ತವ್ಯ ನಿರ್ವಹಿಸಲಿದ್ದು, ಶ್ರೀಕ್ಷೇತ್ರದಲ್ಲಿ ತುರ್ತು ಸಂಧರ್ಭದಲ್ಲಿ ಸ್ಥಳೀಯವಾಗಿ ಆರೋಗ್ಯ ಸೇವೆ ನೀಡಲು ಮುಂದಾಗಿರುವ ಟ್ರಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಧ್ಯಮಕ್ಕಿಂತ ಕಡು ಮಧ್ಯಮ ಜನರಿಗೆ ಅನುಕೂಲವಾಗಲಿದೆ ಎಂದು ಗುರೂಜಿ ಶುಭ ಹಾರೈಸಿದರು.
ಶ್ರೀ ಮಾತೆ ಕಮಲಮ್ಮ ಧ್ಯಾನ ಮಂದಿರದಲ್ಲಿ ಶ್ರೀ ಶ್ರೀ ಡಾ.ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಗುರೂಜಿಯವರಿಂದ ವಚನಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು, lರಾಜ್ಯ ಸೇರಿ ಹೊರ ರಾಜ್ಯದಿಂದಲೂ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಆಗಮಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ಪ್ರತಿವರ್ಷ ಕೂಡ ಅದ್ಧೂರಿಯಾಗಿ ಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ. ಈ ವರ್ಷ ಮತ್ತೊಂದು ವಿಶೇಷ ಕೂಡ ಸೇರಿತ್ತು. ಅದೇನೆಂದ್ರೆ ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಹಿನ್ನೆಲೆ ಮಹಿಳಾ ಭಕ್ತರಿಗೆ ಸಾಕಷ್ಟು ಅನುಕೂಲ ಆಗಿತ್ತು. ಹೀಗಾಗಿ ಈ ಬಾರಿ ಶ್ರೀ ಮಹಾಲಕ್ಷ್ಮಿ ಹಬ್ಬಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಭಕ್ತರಿಗೆ ಯಾವುದೇ ರೀತಿ ಸಮಸ್ಯೆ ಎದುರಾಗದಂತೆ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಭದ್ರತೆಯನ್ನ ಕೂಡ ಹೆಚ್ಚಿಸಲಾಗಿತ್ತು.
ಇಂದು ವರಮಹಾಲಕ್ಷ್ಮೀ ಹಬ್ಬದ ವಿಶೇಷವಾದ ದಿನವಾಗಿರುವುದರಿಂದ ನಮ್ಮ ನಿರೀಕ್ಷೆಗೂ ಮೀರಿದ ಭಕ್ತರು ದೇವಸ್ಥಾನಕ್ಕೆ ಆಮಗಮಿಸುತ್ತಿದ್ದಾರೆ, ಟ್ರಸ್ಟ್ ವತಿಯಿಂದ ವ್ಯವಸ್ಥಿವಾಗಿ ದೇವಿಯ ದರ್ಶನಕ್ಕೆ ಅನುವು ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಇಂದು ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆಯನ್ನು ಮಾಡಿರುವುದು ಜನತೆಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಆ ದೇವಿಯ ಕೃಪೆಯಿಂದ ಆಸ್ಪತ್ರೆಯನ್ನು ಕೂಡ ನಿರ್ಮಿಸಿ ಸುತ್ತಮುತ್ತಲ ಬಡಜನತೆಗೆ ಉಚಿತ ಆರೋಗ್ಯ ಸೇವೆ ನೀಡಲು ನಮ್ಮ ಟ್ರಸ್ಟ್ ತೀರ್ಮಾನಿಸಿದೆ ಎಂದು ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ಷಅಧ್ಯಕ್ಷ ವಾಸುದೇವ್ ಹೇಳಿದರು.
ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ನೂತನವಾಗಿ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಶ್ರೀ ಶ್ರೀ ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಗುರೂಜಿಯವರಿಂದ ನೂತನ ಆರೋಗ್ಯ ಪ್ರಾಥಮಿಕ ಕೇಂದ್ರವನ್ನು ಉದ್ಘಾಟಿಸಿದರು. ನಿವೃತ್ತ ವೈದ್ಯರಾದ ಡಾ. ಲಕ್ಷ್ಮೀಕಾಂತ್ ರವರು ಕರ್ತವ್ಯ ನಿರ್ವಹಿಸಲಿದ್ದು, ಶ್ರೀಕ್ಷೇತ್ರದಲ್ಲಿ ತುರ್ತು ಸಂಧರ್ಭದಲ್ಲಿ ಸ್ಥಳೀಯವಾಗಿ ಆರೋಗ್ಯ ಸೇವೆ ನೀಡಲು ಮುಂದಾಗಿರುವ ಟ್ರಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಧ್ಯಮಕ್ಕಿಂತ ಕಡು ಮಧ್ಯಮ ಜನರಿಗೆ ಅನುಕೂಲವಾಗಲಿದೆ ಎಂದು ಗುರೂಜಿ ಶುಭ ಹಾರೈಸಿದರು.