ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಘದ ವಾರ್ಷಿಕ ಸಾಮಾನ್ಯ ಸಭೆ ಫರಂಗಿಪೇಟೆಯ ‘ಸುಲ್ತಾನ್ ಕುಝಿ ಮಂದಿ’ ಸಭಾಂಗಣದಲ್ಲಿ ಜರಗಿತು. ಸದಸ್ಯರ ಸಕ್ರಿಯ ಹಾಜರಾತಿ ಮತ್ತು ಏಕಮನೋಭಾವದ ಮಧ್ಯೆ ನೂತನ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಘದ 2025-26 ಅವಧಿಯ ನೂತನ ಪದಾಧಿಕಾರಿಗಳನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶರೀಫ್ ಅಬ್ಬಾಸ್ ವಲಾಲ್ ಮರು ಆಯ್ಕೆಯಾಗಿದ್ದು, ಸಂಸ್ಥೆಯ ಗೌರವ ಸಲಹೆಗಾರರಾಗಿ ನವಾಝ್ ಹಜ್ಜಾಜ್ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಮುನ್ನಾ ಕಮ್ಮರಡಿ, ಅನಿವಾಸಿ ಉಪಾಧ್ಯಕ್ಷರಾಗಿ ಶಬೀರ್ ಜಾಕ್, ಪ್ರಧಾನ ಕಾರ್ಯದರ್ಶಿಯಾಗಿ ಶೌಕತ್ ಅಲಿ, ಕೋಶಾಧಿಕಾರಿಯಾಗಿ ಇಮ್ತಿಯಾಝ್ ಎಸ್.ಎಂ ಜೊತೆ ಕಾರ್ಯದರ್ಶಿಯಾಗಿ ರಿಯಾಜ್ ಶೈನ್ ಹಾಗೂ ಜುನೈದ್ ಬಂಟ್ವಾಲ್ ಆಯ್ಕೆಯಾದರು.
ಸಮಿತಿಯ ಸದಸ್ಯರಾಗಿ ಸಾಬಿತ್ ಕುಂಬ್ರ, ಸಫ್ವಾನ್ ಕರ್ವೇಲ್, ಆಫ್ತಾಬ್ ಬಸ್ತಿಕರ್ ಮತ್ತು ಬದ್ರುದ್ದೀನ್ ಅಮನ್ ಸ್ಥಾನ ಪಡೆದಿದ್ದಾರೆ. ಸಭೆಯಲ್ಲಿ ಸದಸ್ಯರು ನೂತನ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿ, ಮುಂದಿನ ಅವಧಿಯಲ್ಲಿ ಸಂಘದ ಸೇವಾ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಸಂಕಲ್ಪ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮತಗಳ್ಳತನ | ಚುನಾವಣಾ ಆಯೋಗ ಬಿಜೆಪಿ ಏಜೆಂಟ್: ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
2025-26 ಅವಧಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಣಂಬೂರು ಪೋಲಿಸ್ ಇನ್ಸ್‌ಪೆಕ್ಟರ್ ಸಲೀಮ್ ಅಬ್ವಾಸ್ ವಳಾಲ್ ಭಾಗವಹಿಸಿ ಚುನಾವಣಾ ಪ್ರಕ್ರಿಯೆ ಪಾರದರ್ಶಕತೆ, ಮೌಲ್ಯ, ಹೊಣೆಗಾರಿಕೆಯ ಮಹತ್ವವನ್ನು ವಿವರಿಸಿದರು. ಗೌರವಾಧ್ಯಕ್ಷರಾದ ಆಸಿಫ್ ಸೂರಲ್ಪಾಡಿ, ಗೌರವ ಸಲಹೆಗಾರ ಮುಸ್ತಫಾ ದಮ್ಮಲೆ ಮತ್ತು ಕೋಸ್ಟಲ್ ಫ್ರೆಂಡ್ಸ್ ಸ್ಥಾಪಾಧ್ಯಕ್ಷರಾದ ಸಿರಾಜ್ ಪರ್ಲಡ್ಕ ಉಪಸ್ಥಿತರಿದ್ದರು.
