2024ರ ಲೋಕಸಭಾ ಚುನಾವಣೆಯಲ್ಲಿ 70-100 ಕ್ಷೇತ್ರಗಳಲ್ಲಿ ಮತ ಕಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅದರಲ್ಲೂ, ಬೆಂಗಳೂರಿನ ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮತದಾರರನ್ನು ಅಕ್ರಮವಾಗಿ ಸೇರಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದು, ಅದಕ್ಕೆ ಪೂರಕವಾದ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.
ರಾಹುಲ್ ಗಾಂಧಿ ಆರೋಪದ ಬೆನ್ನಲ್ಲೇ, ಬಿಜೆಪಿಗೆ ಚುನಾವಣಾ ಆಯೋಗವು ಸಹಕಾರ ನೀಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಚುನಾವಣಾ ಆಯೋಗವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಈ ನಡುವೆ ಮೀಮ್‌ವೊಂದು ವೈರಲ್ ಆಗಿದೆ. ಅದರಲ್ಲಿ, 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ರಾಜೀವ್ ಕುಮಾರ್ ಅವರನ್ನು ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.
ಮೀಮ್‌ನಲ್ಲಿ; ಎಡಗೈನಲ್ಲಿ ಚುನಾವಣಾ ಅಕ್ರಮದ ದಾಖಲೆಗಳನ್ನು ಹಿಡಿದಿರುವ ರಾಹುಲ್ ಗಾಂಧಿ, ತಮ್ಮ ಬಲಗೈನಲ್ಲಿ ರಾಜೀವ್ ಕುಮಾರ್ ಅವರ ಸೂಟ್‌ಅನ್ನು ಕಳಚುತ್ತಾರೆ. ಆಗ, ರಾಜೀವ್ ಕುಮಾರ್ ಅವರು ಬಿಜೆಪಿಯ ಚಿಹ್ನೆಗಳಿರುವ ಒಡಉಡುಪು ಧರಿಸಿರುವುದು ತೆರೆದುಕೊಳ್ಳುತ್ತದೆ.
#VoteChor !!
— ISHA VERMA (@IshaVerma__) August 8, 2025
LoP Rahul Gandhi exposes both the Election Commission and BJP !!
Bravo RAHUL 🔥🔥 pic.twitter.com/yMB2LWZhir
ಈ ಮೀಮ್ ರಾಜೀವ್ ಕುಮಾರ್ ಅವರು ಹೊರಗಿನಿಂದ, ಆಡಳಿತಾತ್ಮಕವಾಗಿ ಚುನಾವಣಾ ಆಯುಕ್ತರಾಗಿದ್ದಾರೆ. ಆದರೆ, ಆಂತರಿಕವಾಗಿ ಅವರು ಬಿಜೆಪಿಗರಾಗಿದ್ದಾರೆ. ಬಿಜೆಪಿಯನ್ನು ಬೆಂಬಲಿಸುತ್ತಾರೆ. ತಮ್ಮ ಅಧಿಕಾರವನ್ನು ಬಿಜೆಪಿ ನೆರವು ನೀಡಲು ಬಳಸಿಕೊಂಡಿದ್ದಾರೆ ಎಂಬ ಅರ್ಥವನ್ನು ಸೂಚಿಸುತ್ತದೆ.
ಗುರುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮತ್ತು ಶುಕ್ರವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡಸಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಅಕ್ರಮ ಎಸಗಿದೆ. ಬಿಜೆಪಿಯ ಅಕ್ರಮಕ್ಕೆ ಚುನಾವಣಾ ಆಯೋಗ ನೆರವಾಗಿದೆ ಎಂದು ಆರೋಪಿಸಿದ್ದಾರೆ. ಮಹದೇವಪುರದಲ್ಲಿ 1,00,250 ಮತಗಳ ಕಳ್ಳತನವಾಗಿದೆ ಕಾಂಗ್ರೆಸ್ ಸತ್ಯಶೋಧನೆ ನಡೆಸಿರುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಆರೋಪವನ್ನು ಚುನಾವಣಾ ಆಯೋಗವು ಅಸಂಬದ್ಧ ಎಂದು ಬಿಜೆಪಿ ಮತ್ತು ಚುನಾವಣಾ ಆಯೋಗ ಅಲ್ಲಗಳೆದಿದೆ.