ಸಕ್ರಿಯವಾಗಿಲ್ಲದ ರಾಜಕೀಯ ಪಕ್ಷಗಳಿಗೆ ಭಾರತದ ಚುನಾವಣಾ ಆಯೋಗವು (ECI) ಇತ್ತೀಚೆಗೆ ನೋಟಿಸ್ ನೀಡಿತ್ತು. ಇದೀಗ, ಸಕ್ರಿಯವಾಗಿಲ್ಲದ 344 ರಾಜಕೀಯ ಪಕ್ಷಗಳನ್ನು ನೋಂದಾಯಿತ ಪಟ್ಟಿಯಿಂದ ಕೈಬಿಟ್ಟಿರುವಾಗಿ ಮಾಹಿತಿ ನೀಡಿದೆ.
2019ರಿಂದ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದೆ, ಚುನಾವಣಾ ಪ್ರಕ್ರಿಯೆಗಳಿಂದ ಹೊರಗುಳಿದಿರುವ ಪಕ್ಷಗಳನ್ನು ನೋಂದಾಯಿತ ಗುರುತಿಸಿಕೊಳ್ಳದ ರಾಜಕೀಯ ಪಕ್ಷಗಳು (Registered Unrecognized Political Parties – RUPP) ಎಂದು ಆಯೋಗವು ಹೆಸರಿಸಿದೆ. ಇದರ ಅಡಿಯಲ್ಲಿ ದೇಶಾದ್ಯಂತ 345 ಪಕ್ಷಗಳನ್ನು ಆಯೋಗವು ಗುರುತಿಸಿದ್ದು, ಅವುಗಳಲ್ಲಿ 344 ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಈ ಪಟ್ಟಿಯನ್ನು ಚುನಾವಣಾ ಆಯೋಗವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿರದ ಪಕ್ಷಗಳ ರದ್ದತಿಯ ತನ್ನ ಕ್ರಮವು ಚುನಾವಣಾ ವ್ಯವಸ್ಥೆಯ ಶುದ್ಧೀಕರಣ, ಆದಾಯ ತೆರಿಗೆ ವಿನಾಯಿತಿಯ ದುರ್ಬಳಕೆ ತಡೆಗಟ್ಟುವಿಕೆ ಹಾಗೂ ಚುನಾವಣೆಯ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಆಯೋಗ ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಮತಗಳ್ಳತನ | ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್
ಕೈಬಿಡಲಾದ ಈ ಪಕ್ಷಗಳು ಕಳೆದ ಆರು ವರ್ಷಗಳಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಭೌತಿಕವಾಗಿ ಎಲ್ಲಿಯೂ ಕಚೇರಿಗಳನ್ನು ಕೂಡ ಹೊಂದಿಲ್ಲ ಎಂದು ಆಯೋಗ ಹೇಳಿದೆ. 334 ಪಕ್ಷಗಳ ಪೈಕಿ ಕರ್ನಾಟಕದ 12 ಪಕ್ಷಗಳೂ ಇವೆ. ದೇಶಾದ್ಯಂತ ಒಟ್ಟು 2,520 ರಾಜಕೀಯ ಪಕ್ಷಗಳಿವೆ. ಅವುಗಳಲ್ಲಿ 6 ರಾಷ್ಟ್ರೀಯ ಪಕ್ಷ ಎಂಬ ಸ್ಥಾನಮಾನ ಪಡೆದಿವೆ.