ಬೀದರ್ ನಗರದ ಹಬ್ಸಿಕೋಟ್ ಪ್ರವಾಸಿ ಮಂದಿರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಭಾಲ್ಕಿ ತಾಲೂಕಿನ ಗೋದಿಹಿಪ್ಪರ್ಗಾ ಗ್ರಾಮದ ಪರಮೇಶ್ವರ (30) ಮೃತ ಯುವಕ ಎನ್ನಲಾಗಿದೆ. ಹಲ್ಲೆ ಮಾಡಿ ನೇಣು ಹಾಕಿದ್ದಾರೆಂದು ಯುವಕನ ಪೋಷಕರು ಆರೋಪಿಸಿ ನಾಲ್ವರ ವಿರುದ್ಧ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೃತನು ಕಳೆದ ಹಲವು ವರ್ಷದಿಂದ ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದನು. ಅಲ್ಲಿ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಮಹಿಳೆ ಮದುವೆ ಮಾಡಿಕೊಳ್ಳುವಂತೆ ಯುವಕನಿಗೆ ಮಹಿಳೆ ದುಂಬಾಲು ಬಿದ್ದಿದ್ದಳು. ಮಹಿಳೆಯ ಕಾಟ ತಾಳಲಾರದೆ ಪರಮೇಶ್ವರ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದನು.
ಮಹಿಳೆ ಬೆಂಗಳೂರಿನಿಂದ ಮಹಿಳಾ ಸಂಘಟನೆಯ ಓರ್ವ ಮಹಿಳೆಯನ್ನು ಕರೆದುಕೊಂಡು ಪರಮೇಶ್ವರನ ಮನೆಗೆ ಹೋಗಿದ್ದಾಳೆ. ಶುಕ್ರವಾರ ಮಹಿಳೆ ಪರಮೇಶ್ವರನ ಮನೆಗೆ ಹೋಗಿ ಗಲಾಟೆ ಮಾಡಿ ಮದುವೆ ಮಾಡಿಕೊಳ್ಳುವಂತೆ ಹಠ ಹಿಡಿದಿದ್ದಳು.
ಇದನ್ನು ಓದಿ : ಬೀದರ್ | ಮನರೇಗಾ ಕಾಮಗಾರಿ ಸ್ಥಳದಲ್ಲಿ ʼರಕ್ಷಾ ಬಂಧನʼ ಆಚರಣೆ
ಪರಮೇಶ್ವರ ಮತ್ತು ಆತನ ಸ್ನೇಹಿತರು ಹಾಗೂ ಮಹಿಳೆ ಸೇರಿ ನಾಲ್ವರು ಪ್ರವಾಸಿ ಮಂದಿರದಲ್ಲಿ ರಾತ್ರಿ ಇದ್ದರು. ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪರಮೇಶ್ವರನ ಶವ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.