ಮತಗಳ್ಳತನ | ರಾಹುಲ್ ಗಾಂಧಿ ಪಲಾಯನವಾದಿ: ಛಲವಾದಿ ನಾರಾಯಣಸ್ವಾಮಿ ಟೀಕೆ

Date:

Advertisements

ರಾಹುಲ್ ಗಾಂಧಿಯವರು ‘ಹಿಟ್ ಅಂಡ್ ರನ್’ ಪ್ರವೃತ್ತಿಯ ಪಲಾಯನವಾದಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ರಾಹುಲ್ ಗಾಂಧಿಯವರು ಕರ್ನಾಟಕದ ಚುನಾವಣೆಯಲ್ಲಿ ದೊಡ್ಡಮಟ್ಟದ ಕಳ್ಳತನ ಆಗಿದೆ ಎಂದು ದೆಹಲಿಯಿಂದ ಅತೀ ಉತ್ಸಾಹದಿಂದ ಬಂದರು. ಆದರೆ ದೊಡ್ಡಮಟ್ಟದ ಕಳ್ಳತನ ಆಗಿರುವ ಬಗ್ಗೆ ಸಾಬೀತುಪಡಿಸಲು ಅವರ ಕೈಯಲ್ಲಿ ಆಗಲಿಲ್ಲ. ಕರ್ನಾಟಕ ಕಾಂಗ್ರೆಸ್ ನಾಯಕರು ಹೇಳಿಕೊಟ್ಟ ವಿಚಾರಗಳನ್ನು ಅವರ ಭಾಷಣದ ರೂಪದಲ್ಲಿ ಹೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ ತೆರಳಿದರು” ಎಂದು ವ್ಯಂಗ್ಯವಾಡಿದರು.

“ಪ್ರಬುದ್ಧ ನಾಯಕರಾದರೆ ಹೇಳಿದ ಮಾತನ್ನು ಸಾಬೀತುಪಡಿಸುವವರೆಗೆ ಹೋರಾಟ ಮಾಡುತ್ತಾರೆ. ಚುನಾವಣಾ ಆಯೋಗವು ನೀವು ಪ್ರಮಾಣಪತ್ರದ ಮೂಲಕ ಸಹಿ ಮಾಡಿ ದೂರನ್ನು ನೀಡಿ ಎಂದು ಕೇಳಿದ್ದರು. ದೂರು ಸುಳ್ಳಾಗಿದ್ದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ ಇವರು ಭಾಷಣ ಮಾತ್ರ ಮಾಡಿದ್ದು, ದೂರು ನೀಡುವ ಸಾಹಸ ಮಾಡಲಿಲ್ಲ. ಕಾರಣವೇನೆಂದರೆ ಇದರಲ್ಲಿ ಸತ್ಯವಿಲ್ಲ ಎಂದು ಅವರಿಗೂ ತಿಳಿದಿತ್ತು” ಎಂದು ಆಕ್ಷೇಪಿಸಿದರು.

Advertisements

“ಮತದಾರರ ಪಟ್ಟಿಯಲ್ಲಿ ಸತ್ತವರೂ ಇದ್ದಾರೆ ಹಾಗೂ ಒಂದೇ ವಿಳಾಸ, ಹೆಸರುಗಳು ಇರುವ ಮತದಾರರ ಗುರುತಿನ ಚೀಟಿ ಇವೆ. ಈ ರೀತಿ ಇರುವ ಮತದಾರರ ಗುರುತಿನ ಚೀಟಿಗಳನ್ನು ಹುಡುಕಿ ತೆಗೆಯಬೇಕೆಂದು ನಾವು ಹೋರಾಟಗಳನ್ನು ಮಾಡಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಕರ್ನಾಟಕದಲ್ಲಿ ಮತಪಟ್ಟಿ ಪರಿಶೀಲನೆ ಆಗಿಲ್ಲವೆಂದು ಹೇಳುತ್ತಿರುವುದು ಸತ್ಯ. ಇದಕ್ಕೆ ಕಾರಣ ಯಾರು” ಎಂದು ಪ್ರಶ್ನಿಸಿದರು.

“ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿಯ ಪರಿಶೀಲಲನೆ ಮಾಡಿಸಬೇಕಾಗಿತ್ತು. ಆದರೆ ಪರಿಶೀಲನೆ ಮಾಡಿರುವುದಿಲ್ಲ. ಇಂದು ಕರ್ನಾಟಕದಲ್ಲಿ ಮತಪಟ್ಟಿ ಪರಿಶೀಲನೆ ಮಾಡಿಲ್ಲದಿರುವ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡುತ್ತಿದ್ದಾರೆ. ಚುನಾವಣೆ ಆಯೋಗವು ಬಿಹಾರದಲ್ಲಿ ಮತಪಟ್ಟಿ ಪರಿಶೀಲನೆ ಕೆಲಸವನ್ನೇ ಮಾಡುತ್ತಿದೆ” ಎಂದು ವಿವರಿಸಿದರು.

ರಾಹುಲ್ ಗಾಂಧಿಯವರಿಗೆ ಜ್ಞಾನದ ಕೊರತೆ

“ಒಂದು ಕಡೆ ಬಿಹಾರದಲ್ಲಿ ಮತಪಟ್ಟಿಯಿಂದ ಹೆಸರುಗಳನ್ನು ತೆಗೆಯಬಾರದು ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ತೆಗೆಯಲಿಲ್ಲ ಎಂದು ಹೇಳುತ್ತಾರೆ. ಇದು ಡಬಲ್ ಸ್ಟ್ಯಾಂಡರ್ಡ್ ರಾಜಕೀಯ ಅಲ್ಲವೇ? ರಾಹುಲ್ ಗಾಂಧಿಯವರಿಗೆ ಜ್ಞಾನದ ಅರಿವಿನ ಕೊರತೆ ಇರುವುದರಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಜನರು ರಾಹುಲ್ ಗಾಂಧಿಯವರಿಗೆ ಆಳವಾದ ಜ್ಞಾನವಿಲ್ಲ” ಎಂದು ಎಂದು ಟೀಕಿಸಿದರು.

ಸಿಎಂ ಮತಗಳ್ಳನೆಂದು ಆಪ್ತನ ಆರೋಪ

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಬ್ಬ ಮತಗಳ್ಳ ಅನ್ನುವ ಮಾತನ್ನು ಸಿ.ಎಂ ಇಬ್ರಾಹಿಂ ಅವರು ಎಂದು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಹೇಗೆ ಪಲಾಯನ ಮಾಡಿ ಬಾದಾಮಿಯಲ್ಲಿ ನಿಂತು ಮತಗಳ್ಳತನ ಮಾಡಿ ಗೆದ್ದಿದ್ದಾರೆ ಎಂದು ಅವರ ಆಪ್ತ ಸ್ನೇಹಿತರಾದ ಇಬ್ರಾಹಿಂ ಅವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ಕೂಡ ಗೆದ್ದಿರುವುದು ಮತಗಳ್ಳತನದಿಂದ. ಕಾಂಗ್ರೆಸ್ಸಿನ ಚರಿತ್ರೆಯೇ ಹೇಳುತ್ತದೆ. ಮತಗಳ್ಳರು ಯಾರು ಎಂದರೆ ಕಾಂಗ್ರೆಸ್ಸಿನವರೇ ಬೇರೆ ಯಾರೂ ಅಲ್ಲ” ಎಂದು ಆರೋಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X