ಬೆಳಗಾವಿ ತಾಲ್ಲೂಕಿನ ಯಳ್ಳೂರ ಗ್ರಾಮದಲ್ಲಿ ಕೇವಲ 500 ರೂ. ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಹುಸೇನ್ ಗೌಸ್ ಸಾಬ್ ತಾಸೇವಾಲೆ (45) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಮಿಥುನ್ ಮತ್ತು ಮನೋಜ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ಹುಸೇನ್ ಹಾಗೂ ಆರೋಪಿಗಳು ಗಾರೆ ಕೆಲಸ ಮಾಡುತ್ತಿದ್ದರು. ಸಾಮಾನು ಮಾರಾಟದಿಂದ ಬಂದ ಹಣದಲ್ಲಿ 500 ರೂ. ನೀಡುವ ವಿಷಯಕ್ಕೆ ಸಂಬಂಧಿಸಿ ಹುಸೇನ್ ಮನೆ ಬಳಿ ರಾತ್ರಿ ಜಗಳ ಶುರುವಾಯಿತು. ತೀವ್ರವಾದ ಗಲಾಟೆಯ ವೇಳೆ ಆರೋಪಿಗಳು ಹುಸೇನ್ ಅವರ ಗುಪ್ತಾಂಗಕ್ಕೆ ಹೊಡೆದಿದ್ದು, ಗಂಭೀರ ಗಾಯದಿಂದ ಅವರು ಅಸ್ವಸ್ಥರಾದರು. ತಕ್ಷಣವೇ ಪ್ರಾಣ ಕಳೆದುಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದ್ದಾರೆ: “ಇದು ನಿಜಕ್ಕೂ ಅಮಾನವೀಯ ಕೃತ್ಯ. ಕೇವಲ 500 ರೂ. ವಿಚಾರಕ್ಕೆ ಮಾನವನ ಜೀವ ಹೋದದ್ದು ವಿಷಾದನೀಯ. ಬಂಧಿತರಿಂದ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.”
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಪಾನ್‌ಶಾಪ್ ಅಂಗಡಿ ಬೀಗ ಮುರಿದು ಸಿಗರೇಟ್, ಗುಟ್ಕಾ ಕಳ್ಳತನ – ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
https://shorturl.fm/hmKhp