ಕಲಬುರಗಿ ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ರಾಘವೇಂದ್ರ ನಗರ ಠಾಣೆ ಪೊಲೀಸರು ಬಂಧಿರನಿಂದ 10 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಹೋಟೆಲ್ ವ್ಯಾಪಾರ ಮಾರುತ್ತಿದ್ದ ಮೋಮಿನಪುರದ ಮೊಹಮ್ಮದ್ ಸಾದಿಕ್ (22) ಬಂಧಿತ ಆರೋಪಿಯಗಿದ್ದಾನೆ. ಮಿಸ್ಟಾ ನಗರದ ನಜಿರೋದ್ದೀನ ಮುಲ್ಲಾ ಅವರು ನೀಡಿದ ಬೈಕ್ ಕಳ್ಳತನದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲೀಸರು, ಅಂದಾಜು 5 ಲಕ್ಷ ಮೌಲ್ಯದ ವಿವಿಧ ಕಂಪನಿಯ 10 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪತ್ತೆಗೆ ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ ನೇತೃತ್ವದಲ್ಲಿ ಪ್ರಭಾರ ಪಿಐ ದಿಲೀಪಕುಮಾರ ಸಾಗರ ಮತ್ತು ಪಿಎಸ್‍ಐ ಸುಭಾಶ್ಚಂದ್ರ, ಎಎಸ್‍ಐ ಮಲ್ಲಿಕಾರ್ಜುನ ಜಾನೆ ಹಾಗೂ ಹೆಡ್ ಕಾನ್‍ಸ್ಟೆಬಲ್‍ಗಳಾದ ಮಲ್ಲನಗೌಡ,ರಾಜಕುಮಾರ, ಕಾನ್‍ಸ್ಟೆಬಲ್‍ಗಳಾದ ಉಮೇಶ, ಅರೇಶ, ಆತ್ಮಕುಮಾರ, ಶರಣಬಸವ, ಕರಣಕುಮಾರ, ಬಸವರಾಜ, ತುಕಾರಾಮ, ಎಪಿಸಿ ಜಾಕೀರ ಒಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಬೀದರ್ | ವರದಕ್ಷಿಣೆ ಕಿರುಕುಳ ಆರೋಪ : ಗಂಡ, ಮಾವ, ಅತ್ತೆ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲು
ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.