ಹಾವೇರಿ | ಜಿಲ್ಲೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ನಿಲುಗಡೆ: ಬಸವರಾಜ ಬೊಮ್ಮಾಯಿ ಸ್ವಾಗತ

Date:

Advertisements

“ಬೆಂಗಳೂರಿನಿಂದ ಬೆಳಗಾವಿಗೆ ಹೋಗುವ ಒಂದೇ ಭಾರತ್ ಎಕ್ಸ್‌ಪ್ರೆಸ್ ಹಾವೇರಿ ಜನರಿಗೂ ಸೇವೆ ಸಲ್ಲಿಸಲಿದೆ. ಅದಕ್ಕಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಅಭಿನಂದನೆಗಳು” ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿ ಪಟ್ಟಣದ ರೇಲ್ವೆ ನಿಲ್ದಾಣದಲ್ಲಿ  ಬೆಂಗಳೂರು – ಬೆಳಗಾವಿ ನೂತನ ವಂದೇ ಭಾರತ ರೈಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಆ ರೈಲಿಗೆ ಹಾವೇರಿಯಲ್ಲಿ ಸ್ವಾಗತ ಮಾಡಿ, ಹಸಿರು ನಿಶಾನೆ ತೋರಿಸಿ ಮಾತನಾಡಿದರು.

“ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ ರೈಲು ಸಂಚರಿಸುತ್ತಿರುವುದು ಭಾರತ ಆರ್ಥಿಕತೆಯಲ್ಲಿ ಬಹಳ ಪ್ರಭಲವಾಗಿ ಮುನ್ನುಗುತ್ತಿದೆ ಎನ್ನುವುದರ ಸಂಕೇತ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

Advertisements

“ಹಾವೇರಿಗೆ ವಂದೇ ಭಾರತ ರೈಲು ನಿಲ್ಲಬೇಕು ಎಂದು ಬಹಳಷ್ಟು ಒತ್ತಡ ಇತ್ತು. ಪಧಾನಿ ನರೇಂದ್ರ ಮೋದಿ ಅವರು ನಮಗೆ ಆಶೀರ್ವಾದ ಮಾಡಿ ಕೊಟ್ಟರು. ಪ್ರತಿ ದಿನ ಹುಬ್ಬಳ್ಳಿ ಬೆಂಗಳೂರು ನಡುವಿನ ವಂದೇ ಭಾರತ ರೈಲು ಪ್ರಯಾಣ ಮಾಡುತ್ತಿದೆ. ಹಾವೇರಿ ಜನತೆ ಒಂದು ವಂದೇ ಭಾರತ ರೈಲು ಕೇಳಿದರೆ, ಪ್ರಧಾನಿ ನರೇಂದ್ರ ಮೋದಿಯವರು ಎರಡು ವಂದೇ ಭಾರತ ರೈಲು ಕೊಟ್ಟಿದ್ದಾರೆ. ನಮಗೆಲ್ಲರಿಗೂ ಸಂತೋಷ ತಂದಿದೆ” ಎಂದರು

ಆದರೆ, ಇದರ ಹಿಂದೆ ದೇಶ ಯಾವ ರೀತಿ ಪ್ರಗತಿ ಆಗುತ್ತಿದೆ ಎನ್ನುವ ಕಥೆ ಇದೆ. ರೈಲೆ ಮೊದಲು ಕಲಿದ್ದಿಲಿನಿಂದ ನಡೆಯುತ್ತಿತ್ತು. ಡಿಸೆಲ್ ಬಂತು. ಈಗ ವಿದ್ಯುದೀಕರಣ ಆಗಿವೆ. ಕರ್ನಾಟಕದಲ್ಲಿ ಶೇ 99 ರಷ್ಟು ವಿದ್ಯುದೀಕರಣ ಮತ್ತು ಡಬಲ್‌ಗೇಜ್ ಆಗಿವೆ. ಹೈಸ್ಪೀಡ್ ರೈಲುಗಳು ನರೇಂದ್ರ ಮೋದಿಯವರ ಕಾಲದಲ್ಲಿ ಪಾರಂಭ ಆಗಿವೆ. ಹಿಂದೇಕೆ ಆಗಲಿಲ್ಲ. ಈಗೇಕೆ ಆಗುತ್ತಿವೆ ಎನ್ನುವುದಕ್ಕೆ ನರೇಂದ್ರ ಮೋದಿಯವರ ದೂರದೃಷ್ಟಿ, ಭಾರತವನ್ನು ವಿಕಸಿತ ಭಾರತ, ಅತ್ಯಂತ ಪ್ರಭಲ ಭಾರತ ಮಾಡಲು ರೈಲ್ವೆ, ರಸ್ತೆ, ಸುಗಮವಾಗಿ ಇರಬೇಕೆಂದು, ಅತಿ ಹೆಚ್ಚು ರೈಲುಗಳನ್ನು ಬಿಡುತ್ತಿದ್ದಾರೆ. ರೈಲು ಸುರಕ್ಷತೆಗೆ ಹೆಚ್ಚಿನ ಆದ್ಯತೆ, ರೈಲಿನಲ್ಲಿ ಊಟ, ಸೇವೆ ಉತ್ತಮಗೊಂಡಿದೆ. ರೈಲ್ವೆ ಚಿತ್ರಣವೇ ಬದಲಾಗಿದೆ” ಎಂದರು. 

“ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಿದ್ದಾರೆ. ಹಾವೇರಿ, ಬ್ಯಾಡಗಿ ಸ್ಟೇಷನ್ ಆಧುನೀಕರಣವಾಗಿದೆ. ಹಾವೇರಿಗೆ ಒಂದು ಗೂಡ್‌ಸೆಡ್‌ ಮಾಡಬೇಕು. ರೈತರು ಬೆಳೆದ ಗೋವಿನ ಜೋಳ ಸೇರಿದಂತೆ ಇತರ ಉತ್ಪನ್ನಗಳನ್ನು ಸಾಗಾಣಿಕೆ  ಮಾಡಲು ಗುಡ್‌ಸೆಡ್ ಮಾಡಬೇಕು. ರಾಣೆಬೆನ್ನೂರು ಗುಡ್‌ಸೆಡ್ ವಿಸ್ತರಣೆ ಮಾಡಬೇಕು. ಶಿವಮೊಗ್ಗ ರಾಣೆಬೆನ್ನೂರು ರೈಲು ಮಾರ್ಗ ಆದಷ್ಟು ಬೇಗ ಭೂಸ್ವಾದಿನ ಪ್ರಕ್ರಿಯೆ ಮಾಡಬೇಕು. ರಾಜ್ಯ ಸರ್ಕಾರ ಸಹಕಾರ ನೀಡದರ ಮಾತ್ರ ರೈಲ್ವೆ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಸಿಎಂ, ಡಿಸಿಎಂ ಸುಮ್ಮನೇ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರೆ ಸಾಲದು, ಗದಗ ಯಲವಿಗೆ ಯೋಜನೆಗೆ ರಾಜ್ಯ ಸರ್ಕಾರ ಭೂಸ್ವಾಧೀನವನ್ನು ಮಾಡಿಕೊಟ್ಟರೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಂಪರ್ಕ ಕಲ್ಪಿಸುವ ಯೋಜನೆ ಆಗಲಿದೆ. ಅಲ್ಲದೇ ಶಿವಮೊಗ್ಗ ರಾಣೆಬೆನ್ನೂರು ರೈಲ್ವೆ ಯೋಜನೆ ಆದರೆ, ಮಲೆನಾಡಿನಿಂದ ಕಿತ್ತೂರು ಕರ್ನಾಟಕ, ಅಲ್ಲಿಂದ ಕಲ್ಯಾಣ ಕರ್ನಾಟಕ ಸಂಪರ್ಕ ಆಗುತ್ತದೆ. ಎಲ್ಲ ಕಾಮಗಾರಿಗಳು ನಿಗದಿತ ಸಮಯದಲ್ಲಿ ಆಗಬೇಕು. ಹಾವೇರಿಯಲ್ಲಿ ಕನಿಷ್ಠ ಲಿಫ್ಟ್‌ನ್ನು ಕೂಡಲೇ ಮಾಡಬೇಕು” ಎಂದು ವಿನಂತಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವೇತನ ಹೆಚ್ಚಳ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಡಿ.ಆರ್.ಎಂ  ಮುದಿತ್ ಮಿತ್ತಲ್, ಮಾಜಿ ಶಾಸಕರಾದ  ವೀರುಪಾಕ್ಷಪ್ಪ ಬಳ್ಳಾರಿ, ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿ, ಅಪರ ಜಿಲ್ಲಾಧಿಕಾರಿ  ನಾಗರಾಜ ಎಲ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ  ಲಕ್ಷ್ಮಣ ಶಿರಕೋಳ ಸೇರಿದಂತೆ ರೇಲ್ವೆ ಇಲಾಖೆಯ ಅಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X