ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಜಿಲ್ಲಾ ಶಾಖೆ ಉಡುಪಿ ವತಿಯಿಂದ ಇತ್ತೀಚೆಗೆ ಕೊಡಂಕೂರಿನಲ್ಲಿ ದ.ಸಂ.ಸ.ಕೊಡಂಕೂರು ಶಾಖೆಯ ಸಂಚಾಲಕರಾದ ಗೋಪಾಲ ಕೊಡಂಕೂರು ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಕೊಡಂಕೂರು ಗೋಪಾಲ ಅವರು ತೀರಿಕೊಂಡಿದ್ದರು. ನುಡಿ ನಮನದಲ್ಲಿ ಗೋಪಾಲ ಕೊಡಂಕೂರು ಅವರಿಗೆ ಗೌರವ ಸಲ್ಲಿಸಿ ಮಾತನಾಡಿದ ದ.ಸಂ.ಸ.ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಗೋಪಾಲಣ್ಣಾ ದ.ಸಂ.ಸ.ದ ಆಸ್ತಿಯಾಗಿದ್ದರು. ಯಾವುದೇ ಕಾರ್ಯಕ್ರಮಕ್ಕೆ ತಿಳಿಸಿದ ತಕ್ಷಣ ಕಾರ್ಯಕರ್ತರನ್ನು ಕರೆದುಕೊಂಡು ಬರುತ್ತಿದ್ದರು. ಅದರಲ್ಲೂ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ತೋರಿಸುತ್ತಿದ್ದ ಧೈರ್ಯ ಮತ್ತು ಬಧ್ಧತೆ ಉಳಿದ ಕಾರ್ಯಕರ್ತರಿಗೆ ಮಾದರಿಯಾಗಿತ್ತು. ನಮ್ಮ ದ.ಸಂ.ಸ.ಬಗ್ಗೆ ಅತೀವ ಪ್ರೀತಿ ಹೊಂದಿದ್ದ ಗೋಪಾಲಣ್ಣಾ ಕೊಡಂಕೂರಿನಲ್ಲಿ ಅಂಬೇಡ್ಕರ್ ಭವನಕ್ಕೆ ನಿವೇಶನ ಕಾದಿರುಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತನ್ನ ಮೇಲೆ ಕೇಸ್ ಹಾಕಿಸಿಕೊಂಡು ದ.ಸಂ.ಸಕ್ಕಾಗಿ ದುಡಿದರು ಎಂದರು.

ಗೋಪಾಲಣ್ಣನವರಿಗೆ ಗೌರವ ಸಲ್ಲಿಸಿ ಮಾತನಾಡಿದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ಸ್ವಭಾವತಃ ಮಿತಭಾಷಿಯಾಗಿದ್ದ ಗೋಪಾಲಣ್ಣಾನವರು ನಮ್ಮವರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಹೊರ ನೋಟಕ್ಕೆ ತುಂಬಾ ಮೃದುವಾಗಿದ್ದು ಅವರು ದಲಿತರ ಮೇಲೆ ದೌರ್ಜನ್ಯಗೊಳಗಾದಗ ಸಿಟ್ಟಿನಿಂದ ಕುದಿಯುತ್ತಿದ್ದರು ಎಂದರು.
ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಮಾತಾನಾಡಿ ಗೋಪಾಲಣ್ಣಾ ನವರ ನಿಸ್ವಾರ್ಥ ಸೇವೆ ಸದಾಕಾಲ ನೆನಪಿಟ್ಟುಕೊಳ್ಳುವಂತದ್ದು, ನಾವು ಒಬ್ಬ ಪ್ರಾಮಾಣಿಕ, ಬದ್ದತೆಯ ನಾಯಕರನ್ನು ಕಳೆದುಕೊಂಡಿದ್ದೇವೆ. ಕೊಡಂಕೂರು ಶಾಖೆಯವರು ಗೋಪಾಲಣ್ಣಾ ಮಾಡಿದ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ತಮ್ಮ ಸ್ವಂತ ಕೆಲಸಗಳೆಷ್ಟೇ ಇದ್ದರೂ ಬೆಂಗಳೂರಿನ ಎಲ್ಲಾ ಕಾರ್ಯಕ್ರಮಗಳಿಗೂ ಕಾರ್ಯಕರ್ತರನ್ನು ಕರೆದುಕೊಂಡು ಬಂದು ನಮ್ಮ ಕಾರ್ಯಕ್ರಮವನ್ನು ಯಶಸ್ಸುಗೊಳಿಸುತ್ತಿದ್ದರು ಎಂದರು.
ನುಡಿನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಶಂಕರ್ ದಾಸ್ ಚೆಂಡ್ಕಳ, ವಿಠಲ ಕೊಡಂಕೂರು, ಶೇಖರ ಕೊಡಂಕೂರು, ಕೃಷ್ಣ ಬೆಳ್ಳೆ ಮತ್ತಿತರರು ಉಪಸ್ಥಿತರಿದ್ದರು.