ಮೈಸೂರಿನ ಎ ಆರ್ ಕನ್ವೆನ್ಷನ್ ನಲ್ಲಿ ಭಾನುವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಸಹಯೋಗದೊಂದಿಗೆ ನಡೆದ 2024 ನೇ ಸಾಲಿನ ಗೌರವ ಪ್ರಶಸ್ತಿ ಪ್ರಧಾನ ಮತ್ತು ಬ್ಯಾರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ಮಾತನಾಡಿ ‘ ಹಿರಿಯರ ತ್ಯಾಗದಿಂದ ಬ್ಯಾರಿ ಸಮುದಾಯ ಗೌರವದಿಂದ ಬದುಕುತಿದೆ ‘ ಎಂದರು.
” ಬ್ಯಾರಿ ಇತಿಹಾಸ ಹಾಗೂ ಸಂಸ್ಕೃತಿ ತಿಳಿಸಿಕೊಡುವ ಕೆಲಸ ಮೈಸೂರಿನಲ್ಲಿ ಆಗುತ್ತಿದೆ. ಇದು ಜಿಲ್ಲೆಗೆ ಸೀಮಿತವಾದರೆ ಸಾಲದು ಅಕ್ಕಪಕ್ಕದ ಜಿಲ್ಲೆಗಳಿಗೂ ವ್ಯಾಪಿಸಬೇಕು. ಇತಿಹಾಸ ನಿರ್ಮಿಸಬೇಕಾದರೆ ಸಂಸ್ಕೃತಿ ಅರ್ಥ ಮಾಡಿಕೊಳ್ಳಬೇಕು. ಬ್ಯಾರಿ ಸಂಸ್ಕೃತಿ, ಆಚರಣೆ, ವಿಚಾರ ಭವಿಷ್ಯದ ಪೀಳಿಗೆಗೆ ವರ್ಗಾವಣೆ ಮಾಡುವ ಕೆಲಸವಾಗಬೇಕಿದೆ ” ಎಂದು ಅಭಿಪ್ರಾಯಪಟ್ಟರು.
” ಒಂದು ಬಾಷೆ ಪರಂಪರೆ, ಆಚಾರ, ವಿಚಾರ, ನಂಬಿಕೆ, ವ್ಯಕ್ತಿತ್ವ ಇದೆಲ್ಲವನ್ನು ತಿಳಿಸುತ್ತದೆ. ಹಿರಿಯರು ಕೊಟ್ಟ ಪ್ರೀತಿ, ಗೌರವ, ವಿಶ್ವಾಸ ಗೌರವದ ಜೀವನ ಕೊಟ್ಟಿದೆ. ನಮಗಿರುವ ಗೌರವದ ಜೀವನವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕಿದೆ. ಸ್ವಾಭಿಮಾನಿಯಾಗಿ ಬಾಳಲು ಎಲ್ಲಾ ರೀತಿಯ ಅವಕಾಶವಿದೆ. ಬೀದಿಯಲಿ ಎಸೆದ ಪೇಪರ್, ಬಾಟಲ್ ಮಾರಿಯು ಸಹ ಗೌರವದ ಜೀವನ ಕಂಡುಕೊಂಡಿದ್ದೇವೆ. “

” ಶ್ರಮಕ್ಕೆ ಮೊದಲ ಗೌರವ, ಪರಿಶ್ರಮಕ್ಕೆ ಆಧ್ಯತೆ. ಬ್ಯಾರಿ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಯಾವುದಕ್ಕೆ ಕಷ್ಟ ಆದರೂ ಪರ್ವಾಗಿಲ್ಲ ಶಿಕ್ಷಣಕ್ಕೆ ಕೊರತೆ ಮಾಡಬೇಡಿ. ಶಿಕ್ಷಣವೊಂದಿದ್ದರೆ ಯಾರು ಮುಂದೆ ತಲೆ ಬಾಗುವ ಅಗತ್ಯವಿಲ್ಲ. ಜೀವನದಲ್ಲಿ ಏನೇ ಬಂದರು ಎದುರಿಸಬಹುದು. ಶ್ರಮದ ಬದುಕು ಕಟ್ಟಿಕೊಳ್ಳಬಹುದು. ಪ್ರೀತಿ ಸಹೋದರತೆ ಎಲ್ಲರಲ್ಲಿ ಮೂಡಬೇಕು. ಮಕ್ಕಳಲ್ಲಿ ಬೆಳೆಸಬೇಕು, ಸೌಹಾರ್ದತೆಯ ಬದುಕು ನಮ್ಮಗಳದ್ದಾಗಿರಬೇಕು. ಯಶಸ್ಸನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕಠಿಣವಾದ ಎಂತಹ ಕಷ್ಟವೇ ಬರಲಿ ತಾಳ್ಮೆಯಿಂದ ಮುನ್ನುಗ್ಗುಬೇಕು. ಸಮುದಾಯ ಎಲ್ಲಾ ಸಮುದಾಯಗಳ ನಡುವೆ ಸಾಮರಸ್ಯ ಹೊಂದಿ ಬದುಕಬೇಕು. ಪ್ರೀತಿಸುವ ಗುಣ ಬೆಳೆಸಬೇಕು. ಪ್ರೀತಿ ವಿಶ್ವಾಸದಿಂದ ಸಮಾಜದ ಬೆಳವಣಿಗೆ ಸಾಧ್ಯ. ಎಲರಿಗೂ ಅಧಿಕಾರ ಹೊಂದುವ ಅವಕಾಶವಿದೆ. ಅದೇ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಿ ” ಎಂದು ಕರೆಕೊಟ್ಟರು.

ಟೀಕೆ, ಟಿಪ್ಪಣಿ ಎಷ್ಟೇ ಬಂದರು ತಲೆಕೆಡಿಸಿಕೊಳ್ಳಬೇಡಿ. ತಮ್ಮ ಕೆಲಸದ ಕಡೆಗೆ ಗಮನ ಕೊಡಿ. ಟೀಕೆ, ಟಿಪ್ಪಣಿ ಸ್ವಾಭಾವಿಕ. ಸೋದರತೆ, ಸಹಬಾಳ್ವೆ ಅತ್ಯಗತ್ಯ. ನಮ್ಮನ್ನು ನಾವು ಸರಿಪಡಿಸಿಕೊಂಡು. ಎಲ್ಲರನ್ನು ಒಟ್ಟಿಗೆ ಕಟ್ಟಿಕೊಂಡು ಸಾಗುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
2024 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಬ್ಯಾರಿ ಭಾಷೆ – ಸಂಘಟನೆಗೆ ಡಾ. ಮಕ್ಸೂದ್ ಅಹ್ಮದ್ ಮುಲ್ಕಿ, ಬ್ಯಾರಿ ಕಲೆ – ಸಂಸ್ಕೃತಿಗೆ ಪಿ. ಎಂ. ಹಸನಬ್ಬ ಮೂಡುಬಿದಿರೆ, ಬ್ಯಾರಿ ಸಾಹಿತ್ಯಕ್ಕೆ ಹೈದರಾಲಿ ಕಾಟಿಪಾಳ್ಯ ಅವರಿಗೆ ಪ್ರಧಾನ ಮಾಡಿ, ಇದೇ ಸಂದರ್ಭದಲ್ಲಿ ‘ ಪೆರಿಮೆ ‘ ಪುಸ್ತಕ ಹಾಗೂ ‘ ಬೆಲ್ಕೆರಿ ‘ ದ್ವೈಮಾಸಿಕ ಬಿಡುಗಡೆ ಮಾಡಿದರು.

ಸಾಂಸ್ಕೃತಿಕ ಕಾರ್ಯಕರ್ಮಗಳಾದ ದಫ್ ಕುಣಿತ, ಒಪ್ಪನೆ ಹಾಡುಗಳು, ಕೋಲಾಟ, ಬ್ಯಾರಿ ಹಾಡುಗಳ ಕಾರ್ಯಕ್ರಮ ನಡೆಯಿತು. ಮಹಿಳೆಯರಿಗೆ ಮೆಹಂದಿ ವಿನ್ಯಾಸ, ಬ್ಯಾರಿ ಸಂಪ್ರದಾಯಿಕ ಆಹಾರ, ಮಕ್ಕಳಿಗೆ ಬ್ಯಾರಿ ಹಾಡು, ಪುರುಷರು, ಮಕ್ಕಳು, ಮಹಿಳೆಯರಿಗೆ ನಡೆದ ಬ್ಯಾರಿ ಕ್ವಿಜ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯಕ್ಕೆ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಸಿಯಸ್ ರೋಡ್ರಿಗಸ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಆಜೀಜ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಉಮರ್ ಯು. ಹೆಚ್, ರೆಜಿಸ್ಟಾರ್ ಜಿ. ರಾಜೇಶ್, ಅಧ್ಯಕ್ಷ ಹಾಜಿ ಯು. ಕೆ. ಹಮೀದ್, ಪ್ರಧಾನ ಕಾರ್ಯದರ್ಶಿ ಎಂ. ಐ. ಅಹ್ಮದ್ ಬಾವ,ಬಿ. ಎಸ್. ಮಹಮ್ಮದ್, ಹಫ್ಸಾ ಭಾನು, ಸಾರ ಆಲಿ ಪರ್ಲಡ್ಕ, ಶಮಿರಾ ಜಹಾನ್, ಯು. ಹೆಚ್. ಖಾಲಿದ್ ಉಜಿರೆ, ತಾಜುದ್ದಿನ್ ಅಮ್ಮುಜೆ, ಅಬೂಬಕ್ಕರ್ ಅನಿಲಕಟ್ಟಿ, ಶರೀಫ್ ಭಾರತ್ ಬಾಳಿಲ, ಹಮೀದ್ ಹಸನ್ ಮಾಡೂರು, ಶಮೀರ್ ಮುಲ್ಕಿ, ಮುಹಮ್ಮದ್ ಆಲಿ ಉಚ್ಚಿಲ, ಅನ್ಸಾರ್ ಕಾಟಿಪಾಳ್ಯ, ಹಾಜಿ ಯು. ಕೆ. ಹಮೀದ್ ಸೇರಿದಂತೆ ಹಲವರು ಇದ್ದರು.