ಈಗಾಗಲೇ ಉಡುಪಿ ಜಿಲ್ಲಾ ಆಸ್ಪತ್ರೆಯಿಂದ ವರ್ಗಾವಣೆಗೊಂಡು ಬಿಡುಗಡೆ ಆಗಿರುವ ಮಾಜಿ ಜಿಲ್ಲಾ ಸರ್ಜನ್ ಹೆಚ್.ಎಸ್. ಅಶೋಕ ರವರು ಬಲಾತ್ಕಾರವಾಗಿ ಜಿಲ್ಲಾ ಸರ್ಜನ್ ಕುರ್ಚಿಯಲ್ಲಿ ಕೂತು ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ತೀವ್ರವಾಗಿ ಖಂಡಿಸುತ್ತದೆ.
ಈಗಾಗಲೇ ಚಾರ್ಜ್ ತೆಗೆದುಕೊಂಡ ನಿತ್ಯಾನಂದ ನಾಯಕರವರಿಗೆ ಕರ್ತವ್ಯ ನಿರ್ವಹಿಸಲು ಬಿಡದೆ ಉಡಾಪೆಯಿಂದ ವರ್ತಿಸುತ್ತಿರುವುದು ಅಕ್ಷಮ್ಯ. ಬೇರೆಕಡೆಗೆ ಬಿಡುಗಡೆಗೊಂಡಿದ್ದರೂ ಈ ಹಿಂದೆ ಕರ್ತವ್ಯ ವಿರ್ವಸುತ್ತಿದ್ದ ಸಂದರ್ಭದಲ್ಲಿ ದಲಿತ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರಕುಳ ಕೊಟ್ಟು ಅದು ಸಾಬೀತಾಗಿ 5 ಇಂಕ್ರಿಮೆಂಟ್ ಕಡಿತಗೊಂಡು ಶಿಕ್ಷೆ ಆಗಿದ್ದರೂ ಇಲ್ಲಿ ಈಗ ಅದೇ ರೀತಿ ಅನಧಿಕೃತವಾಗಿ ರಾತ್ರಿ ಪಾಳಿಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ರೋಗಿಗಳ ವಾರ್ಡನಲ್ಲಿ ರಾತ್ರಿ ಹೊತ್ತು ವಾರ್ಡಿಂದ ವಾರ್ಡಿಗೆ ಸುತ್ತಾಡುತ್ತಾ ರೋಗಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ.
ಈ ಕೂಡಲೇ ಈ ಮಾಜಿ ಜಿಲ್ಲಾ ಸರ್ಜನ್ ಮೇಲೆ ಕಾನೂನು ಕ್ರಮಕೈಗೊಂಡು ಅಮಾನತು ಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.