ನ್ಯಾಯಮೂರ್ತಿ ನಾಗಮೋಹನ್ ಆಯೋಗವು ನೀಡಿರುವ ರಾಜ್ಯದ ದಲಿತರ ಜನಸಂಖ್ಯೆಯ ಜೊತೆಗೆ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವ ಸಮೀಕ್ಷ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ತಕ್ಷಣಕ್ಕೆ ಅಂಗೀಕರಿಸಬಾರದೆಂದು ಸರಕಾರಕ್ಕೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.
ಪರಿಶಿಷ್ಟಜಾತಿಯ 101 ಉಪಜಾತಿಗಳನ್ನು ಮೀಸಲಾತಿಯಲ್ಲಿ ಎ,ಬಿ,ಸಿ,ಡಿ.ಇ.ಗುಂಪುಗಳನ್ನಾಗಿ ವರ್ಗೀಕರಿಸಿರುವ ಆಯೋಗವು ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟಿ ಮೀಸಲಾತಿಯನ್ನೇ ನಿರ್ನಾಮ ಮಾಡಲು ಹೊರಟಿದಂತ್ತಿದೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರಪತಿಯಿಂದ ಅಗೀಕೃತಗೊಂಡ ಆದಿ ದ್ರಾವಿಡ, ಆದಿ ಆಂದ್ರ. ಆದಿ ಕರ್ನಾಟಕವನ್ನು ಉಪಜಾತಿಗಳಲ್ಲ ಅದು ಒಂದು ಗುಂಪು ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾಗಮೋಹನ್ ಆಯೋಗವು ಸಮೀಕ್ಷೆಯ ಪ್ರಾರಂಭದಲ್ಲಿ ತಿಳಿಸಿಲ್ಲ. ಹಲವು ದಶಕಗಳಿಂದ ಕರಾವಳಿಯ ದಲಿತರು ಜಾತಿಪ್ರಮಾಣ ಪತ್ರ ಪಡೆಯುವಾಗ ಪರಿಶಿಷ್ಟಜಾತಿ ಮತ್ತು ಉಪಜಾತಿಯಲ್ಲಿ ಆದಿದ್ರಾವಿಡ ಎಂದು ನಮೂದಿಸಿದ್ದರು. ಈಗ ವಗೀಕರಣಮಾಡುವಾಗ ಪ್ರವರ್ಗ ಇ ಯಲ್ಲಿ ಸೇರಿಸಿ ಅನ್ಯಾಯವಾಡಿದೆ ಎಂದಿದ್ದಾರೆ.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆದ ದಲಿತರ ಈ ಒಳಮೀಸಲಾತಿ ಸಮೀಕ್ಷೆ ರಾಜಕಾರಣಿಗಳ, ಅಧಿಕಾರಿಗಳ ಸ್ವಾರ್ಥಕ್ಕೆ ಅಮಾಯಕ ದಲಿತರು ಎಡಗೈ ಬಲಗೈ ಎಂದು ಕದನ ಕಲಹಕ್ಕೆ ಇಳಿಯುವಂತೆ ಮಾಡಿದೆ ಎಂದಿದ್ದಾರೆ. ಪರಿಶಿಷ್ಠ ಜಾತಿಯ 101ಮೂಲ ಜಾತಿಗಳಲ್ಲಿ ಪ್ರವರ್ಗ ಎ.ಯಲ್ಲಿ
59ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ 522099ಕ್ಕೆ 4.97ಶೇಕಡ, ಪ್ರವರ್ಗ ಬಿ,ಯಲ್ಲಿ 18ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ 36,69,246 ಇವರಿಗೆ ಶೇ.34.91ನೀಡಿದರೆ, ಪ್ರವರ್ಗ ಸಿ,ಯಲ್ಲಿ 17ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ 30,08,633ಕ್ಕೆ ಶೇ.28.63% ನೀಡಿದ್ದಾರೆ. ಪ್ರವರ್ಗ ಡಿ.ಯವರಲ್ಲಿ 4ಉಪಜಾತಿಯ ಒಟ್ಟು ಜನಸಂಖ್ಯೆ 28,34,939ಇದ್ದವರಿಗೆ ಶೇಕಡ 26.97% ಹಾಗೂ ಪ್ರವರ್ಗ ಇ.ಯಲ್ಲಿ 3ಉಪಜಾತಿಯನ್ನು ಸೇರಿಸಿ ಒಟ್ಟು ಜನಸಂಕ್ಕೆ 4,74,954ಇದ್ದವರಿಗೆ ಶೇ. 4.52% ನೀಡಿ ಆಯೋಗವು ವರದಿ ನೀಡಿರುವುದು ಸಮಾಜಿಕ ಅಸಮಾನತೆಗೆ ದಾರಿಮಾಡಿದೆ ಎಂದಿದ್ದಾರೆ. ಎಷ್ಟೆಲ್ಲ ಜನರ ಬೆವರು ನೆತ್ತರಿನ ಹೋರಾಟದೊಂದಿಗೆ, ಕನಸುಗಳೊಂದಿಗೆ ಕಟ್ಟಿದ ದಲಿತ ಶಕ್ತಿಯ ಮರ ಫಲ ಕೊಡುವ ಹೊತ್ತಿನಲ್ಲಿ ಮರ ಬೆಳೆಸಿದ ಸೋದರರೇ ಪಾಲು ಬೇಡಿ ಟೊಂಗೆಗಳಿಗೆ ಕೊಡಲಿ ಹಚ್ಚಿದರೆ ಹೇಗೆಂಬುದನ್ನು ಅರಿವು ಮೂಡಿಸಬೇಕಶಾದ ಸರಕಾರವೇ ದಲಿತರನ್ನು ಒಳಮೀಸಲಾತಿಯಲ್ಲಿ ಒಡೆಯುತ್ತಿರುವುದು ನೋವಿನ ಸಂಗತಿ ಎಂದು ಜಯನ್ ಮಲ್ಪೆ ಸರಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿರುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.