ಚಾಲಕನ ಮೇಲೆ ಸುಳ್ಳು ದೂರು ದಾಖಲಿಸಿ ದರ್ಪದಿಂದ ಮೆರೆದು ಕರ್ತವ್ಯ ಲೋಪ ಎಸಗಿದ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮದ ಕಂದಾಯ ನಿರೀಕ್ಷಕ ಮಹೇಂದ್ರ ಹಿರೇಮಠ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟಿಸಿದರು.
ಸಿದ್ದಾರ್ಥ ಟಿಪ್ಪರ್ ಚಾಲಕರ ಸಂಘದಿಂದ ಶಹಾಪುರ ನಗರದ ತಹಸೀಲ್ದಾರ್ ಕಚೇರಿ ಎದುರುಗಡೆ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಶರಣು ದೋರನಹಳ್ಳಿ ಮಾತನಾಡಿ, ʼಕಂದಾಯ ನೀರಿಕ್ಷಕರಾದ ಮಹೇಂದ್ರ ಹಿರೇಮಠ ಅವರು ಆ.9ರಂದು ದೋರನಹಳ್ಳಿ ಸೀಮಾಂತರದಲ್ಲಿ ಅಕ್ರಮ ಮರಮು ಸಾಗಾಣಿಕೆ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳು ದೂರು ನೀಡಿ, ದೋರನಹಳ್ಳಿ ಗ್ರಾಮದ ಖಾಲಿ ಟಿಪ್ಪರ್ ಜಿಪಿಎಸ್ ಪೋಟೋಗಳ ತಮ್ಮ ಕಚೇರಿಯ ಸಿಬ್ಬಂದಿಯಿಂದ ತೆಗೆಸಿ ಅದರ ಆಧಾರದ ಮೇಲೆ ಅಕ್ರಮ ಮರಮು ಸಾಗಣಿಕೆ ಮಾಡುತ್ತಿವುದನ್ನು ಆರೋಪಿಸಿ ಶಹಾಪೂರ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆʼ ಎಂದು ಆರೋಪಿಸಿದರು.
“ಕಂದಾಯ ನೀರಿಕ್ಷಕರಾದ ಮಹೇಂದ್ರ ಹೀರೇಮಠ ಅವರು ಆಗಸ್ಟ್ 09 2025ರಂದು ಬೆಳಿಗ್ಗೆ 10 ರಿಂದ ಸಂಜೆ 8 ಗಂಟೆವರೆಗೂ ಕೇಂದ್ರಸ್ಥಾನದಲ್ಲಿಯೇ ಇರಲಿಲ್ಲ. ಆದರೂ ದೋರನಹಳ್ಳಿ ಗ್ರಾಮದಲ್ಲಿ ನನ್ನನ್ನು ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು ಎಂದು ಆರೋಪಿಸಿ ಅಮಾಯಕ ಟಿಪ್ಪರ್ ಚಾಲಕನ ಮೇಲೆ ಮತ್ತು ಜಮೀನಿನ ಮಾಲಿಕನ ಮೇಲೆ ಸುಳ್ಳು ದೂರು ದಾಖಲಿಸಿರುವುದು ಖಂಡನೀಯʼ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ
ಈ ಸಂದರ್ಭದಲ್ಲಿ ಮುಖಂಡರಾದ ಸಾಬಣ್ಣ ಗೋಷಿ, ಶಿವು ಪೋತೆ, ಶಿವಕುಮಾರ್ ತಳವಾರ, ಹಣಮಂತ ದಿಗ್ಗಿ, ಸುರೇಶ ರೆಡ್ಡಿ, ಸುಭಾಷ್ ತಳವಾರ, ಇನ್ನಿತರರು ಉಪಸ್ಥಿತರಿದ್ದರು.