ಯಾದಗಿರಿ | ಆಸರೆಯಾಗಿದ್ದ ಮನೆಯೂ ಮಳೆಗೆ ಕುಸಿತ: ನೆರವಿನ ನಿರೀಕ್ಷೆಯಲ್ಲಿ ದೋರನಹಳ್ಳಿ ನಿವಾಸಿ ಅಮಲವ್ವ

Date:

Advertisements

ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮದ ನಿವಾಸಿಯಾಗಿರುವ ಅಮಲವ್ವ ಕಡು ಬಡ ಕುಟುಂಬದವರಾಗಿದ್ದು, ಇವರಿಗೆ ಆಸರೆಯಾಗಿದ್ದ ಮನೆ ಮಳೆಯಿಂದ ಬಿದ್ದು ತಿಂಗಳಾಗಿದೆ. ಸರ್ಕಾರದಿಂದ ನೆರವಿನ ನಿರೀಕ್ಷೆಗಾಗಿ ಅವರ ಕುಟುಂಬ ಕಾಯುತ್ತಿದೆ.

ಯಾವುದೇ ಆದಾಯ ಮೂಲಗಳೂ ಇಲ್ಲದ ಅಮಲವ್ವ ಅವರ ಗಂಡ ತೀರಿಕೊಂಡು ಏಳೆಂಟು ವರ್ಷವಾಗಿದೆ. ಕೂಲಿ ನಾಲಿ ಮಾಡಿ ಬಂದ ಹಣದಲ್ಲೇ ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನುವಬಿದ್ದಿರುವ ಮನೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಮಳೆ ಬಂದರೆ ಬೆಚ್ಚಗಿರುವ ಅಂಗೈ ಅಗಲ ಜಾಗದಲ್ಲಿ ಮಕ್ಕಳನ್ನು ಕರೆದುಕೊಂಡು ರಾತ್ರಿ ಇಡೀ ಅವಿತು ಕುಳಿತುಕೊಂಡು ಕೂಡುವ ಪರಿಸ್ಥಿತಿ ಇದೆ. ಇವರ ಪರಿಸ್ಥಿತಿ ತೀರಾ ಶೋಚನೀಯವಾಗಿದ್ದು, ದಾನಿಗಳು ಸೇರಿದಂತೆ ಸರ್ಕಾರದಿಂದ ನೆರವನ್ನು ಬಯಸುತ್ತಿದ್ದಾರೆ.

ಮಳೆಯಿಂದ ಎರಡು ಕೋಣೆಗಳ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಆದರೆ ಕಂದಾಯ ಇಲಾಖೆಯಿಂದ ಈವರೆಗೆ ಸಿಕ್ಕಿರುವ ಪರಿಹಾರ ಬರಿ ಆರು ಸಾವಿರ ರೂಪಾಯಿಗಳು ಮಾತ್ರ. ಈ ಪರಿಹಾರದ ಹಣ ಯಾವುದಕ್ಕೂ ಸಾಲುತ್ತಿಲ್ಲ. ಅಮಲವ್ವ ಕುಟುಂಬಕ್ಕೊಂದು ಆಸರೆ ಒದಗಿಸುವಂತೆ ದೋರನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisements

ಉಪ್ಪಾರ ಸಮುದಾಯದ ಅಮಲವ್ವ ಈದಿನ.ಕಾಮ್ ನೊಂದಿಗೆ ಮಾತನಾಡಿ, “ನನ್ನಗೆ ಒಟ್ಟು ಐದು ಜನ ಮಕ್ಕಳು. ಮೂವರು ಹೆಣ್ಣು ಮಕ್ಕಳ ಪೈಕಿ ಇಬ್ಬರನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ್ದೇವೆ. ಇಬ್ಬರು ಗಂಡು ಮಕ್ಕಳು ಅದರಲ್ಲಿ ಒಬ್ಬ ಗಂಡು ಮಗ ಮದುವೆಯಾಗಿ ಕುಟುಂಬದಿಂದ ದೂರ ಇದ್ದು, ಆತನು ಕೂಲಿ ನಾಲಿ ಮಾಡುತ್ತಾನೆ. ಇನ್ನುಳಿದ ಇಬ್ಬರು ಮಕ್ಕಳಲ್ಲಿ ಓರ್ವ ಗಂಡು ಹಾಗೂ ಹೆಣ್ಣು ಮಗಳು ಬುದ್ಧಿಮಾಂದ್ಯರಾಗಿದ್ದಾರೆ. ಅವರನ್ನು ನಾನೇ ನೋಡಿಕೊಳ್ಳಬೇಕು. ಅವರಿಗೆ ರಾತ್ರಿ ಸಮಯದಲ್ಲಿ ಸರಿಯಾಗಿ ಕಣ್ಣು ಕಾಣುವುದಿಲ್ಲ” ಎಂದು ತಮ್ಮ ಕಷ್ಟವನ್ನು ವಿವರಿಸಿದರು.

“ನಾವು ತೀರಾ ಕಡು ಬಡವರಾಗಿದ್ದು, ಆದಾಯಕ್ಕೆ ಯಾವುದೇ ಮೂಲಗಳು ಇಲ್ಲ. ದುಡಿದು ಸಾಕುವ ಗಂಡ ತೀರಿಕೊಂಡು ಏಳೆಂಟು ವರ್ಷವಾಗಿದೆ. ಬದುಕಿಗೆ ಆಸರೆ ಆಗಿರುವುದೊಂದೇ ಈ ಮನೆ. ಆ  ಮನೆ ಕೂಡಾ ಇಗ ನಮ್ಮ ಪಾಲಿಗೆ ಇಲ್ಲದಂತಾಗಿದೆ.
ಮನೆಯ ಮೇಲ್ಛಾವಣಿ ಬಿದ್ದು ಎರಡು ತಿಂಗಳಾಗಿದೆ. ಬಿದ್ದಿರುವ ಮನೆಯಲ್ಲಿ ಬದುಕು ನಡೆಸುತ್ತಿದ್ದೇವೆ. ಮಳೆ ಬಂದರೆ ರಾತ್ರಿ ಪೂರ್ತಿ ನಿದ್ದೆಗೆಡುವ ಪರಿಸ್ಥಿತಿ ಇದೆ. ನಮ್ಮ ಪರಿಸ್ಥಿತಿ ಮನಗಂಡು ಅಧಿಕಾರಿಗಳು ದಯವಿಟ್ಟು ನಮಗೆ ಒಂದು ಮನೆ (ಸೂರು) ಮಾಡಿಕೊಂಡಬೇಕು” ಎಂದು ಮನವಿ ಮಾಡಿದರು.

dornahalli

ಈದಿನ.ಕಾಮ್ ನೊಂದಿಗೆ ಸಾಮಾಜಿಕ ಕಾರ್ಯಕರ್ತ ಸುರೇಶ ದೋರನಹಳ್ಳಿ ಮಾತನಾಡಿ, “ಇವರ ಕಷ್ಟ ಗಂಡ ಕೂಲಿ-ನಾಲಿ ಮಾಡಿ ದುಡಿದು ಸಾಕುತ್ತಿದ್ದರು. ಅವರು ತೀರಿಕೊಂಡು ಏಳೆಂಟು ವರ್ಷವಾಗಿದೆ. ಇವರಿಗೆ ಐದು ಜನ ಮಕ್ಕಳು. ಅದರಲ್ಲಿ ಯಾರೂ ಕೂಡ ವಿದ್ಯಾವಂತರಿಲ್ಲ. ಇಬ್ಬರು ಬುದ್ಧಿಮಾಂದ್ಯರಾಗಿದ್ದಾರೆ. ತಿಳುವಳಿಕೆ ಇಲ್ಲ ತಾಯಿ ಆ ಇಬ್ಬರು ಮಕ್ಕಳ ಸೇವೆ ಮಾಡಿಕೊಂಡು ಕೂಲಿ ಕೆಲಸ ಮಾಡಿ ಬದುಕಿಸಬೇಕು. ಇವರ ಬದುಕು ತುಂಬಾ ಕಷ್ಟಕರವಾಗಿದೆ ಹಾಗಾಗಿ ಸರಕಾರ ಇವರ ನೇರವಿಗೆ ಬರಬೇಕು” ಎಂದು ಮನವಿ ಮಾಡಿದರು.

ಈದಿನ.ಕಾಮ್ ನೊಂದಿಗೆ ಶಿವರಾಜ ತಳವಾರ ಮಾತನಾಡಿ, “ಒಂದು ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಇವರ ಮನೆ ಬಿದ್ದಿದೆ. ಬಿದ್ದಿರುವ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಸರಕಾರದಿಂದ ಯಾವುದೇ ಸವಲತ್ತುಗಳು ಇವರಿಗೆ ದೊರಕಿಲ್ಲ. ಯಾರೊಬ್ಬ ಅಧಿಕಾರಿಯು ಇವರ ನೆರವಿಗೆ ಬಂದಿಲ್ಲವೆಂದು” ದೂರಿದರು.

ಈದಿನ.ಕಾಮ್ ನೊಂದಿಗೆ ನೇರಮನೆಯ ರಾಘವೇಂದ್ರ ಮಾತನಾಡಿ, “ಮನೆ ಬಿದ್ದಿರುವ ವಿಚಾರ ತಕ್ಷಣ ನಾವು ವಿಲೇಜ್ ಅಕೌಂಟ್ ಅವರಿಗೆ ಕರೆ ಮಾಡಿ ಮನೆ ಬಿದ್ದಿರುವ ಪೋಟೋ ಕಳುಹಿಸಿದ್ದೆವು. ವಿಲೇಜ್ ಅಕೌಂಟ್, ಗ್ರಾಮ ಪಂಚಾಯತ್ ಸೆಕ್ರೆಟರಿ, ಮನೆ ಪರಿಶೀಲನೆ ಮಾಡಿ ಬರೀ ಆರು ಸಾವಿರ ಪರಿಹಾರ ಕೊಟ್ಟಿದ್ದಾರೆ. ಅವರು ಕಡುಬಡವರಾಗಿರುವುದರಿಂದ ಹೆಚ್ಚಿನ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

ಈದಿನ.ಕಾಮ್ ದೊಂದಿಗೆ ಗ್ರಾಮ ಲೆಕ್ಕಾಧಿಕಾರಿ ದೇವಿಂದ್ರ ಬಿರಾದಾರ ಮಾತನಾಡಿ, ನಾವು ಬಿದ್ದಿರುವ ಮನೆಗೆ ಹೋಗಿ ಪರಿಶೀಲನೆ ನಡೆಸಿ ನಮ್ಮ ಇಲಾಖೆ ಕಡೆಯಿಂದ ಆರು ಸಾವಿರ ರೂಪಾಯಿ ಪರಿಹಾರ ನೀಡಿದ್ದೇವೆ. ಮುಂದಿನ ದಿನಗಳಲ್ಲೂ ನೆರವು ಕಲ್ಪಿಸುವ ಬಗ್ಗೆ ನೋಡುತ್ತೇವೆ” ಎಂದು ತಿಳಿಸಿದರು.

yadgiri

ಈದಿನ.ಕಾಮ್ ನೊಂದಿಗೆ ಗ್ರಾಮ ಅಭಿವೃದ್ಧಿ ಅಧಿಕಾರಿ ದೇವರಾಜ್ ಮೌರ್ಯ ಮಾತನಾಡಿ, “ಗ್ರಾಮ ಪಂಚಾಯತಿಗೆ ಮನೆಗಳು  ಬಂದಿದ್ದು, ಒಂದು ತಿಂಗಳಲ್ಲಿ ಮನೆಗಳು ಮಂಜೂರು ಆಗುತ್ತವೆ. ಅದರಲ್ಲಿ ಅವರಿಗೊಂದು ಮನೆ ಹಾಕಿಸಿ ಕೊಡುತ್ತೇವೆ” ಎಂದು ಭರವಸೆ ನೀಡಿದರು.

ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಹೆಣ ಹೂಳಲು ಗ್ರಾಮ ಪಂಚಾಯ್ತಿಯವರು ಹೇಳಿಲ್ಲ, ದೇವಸ್ಥಾನದ ಮಾಹಿತಿ ಕೇಂದ್ರದಿಂದಲೇ ಸೂಚನೆ: ಸಾಕ್ಷಿ ದೂರುದಾರ

ಈದಿನ.ಕಾಮ್ ನೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ  ಚಂದ್ರಾವತಿ ಮಾತನಾಡಿ, “ನಾನು ಕೂಡಾ ಅಂತಹಾ ಪರಿಸ್ಥಿತಿಯಿಂದಲ್ಲೇ ಬೆಳೆದು ಬಂದವಳು. ಅವರ ಕಷ್ಟ ನನಗೆ ಅರ್ಥವಾಗುತ್ತದೆ. ಹಾಗಾಗಿ ಅವರ (ವಾರ್ಡ್ ಮೆಂಬರ್) ಗ್ರಾಮ ಪಂಚಾಯತಿ ಸದಸ್ಯನೊಂದಿಗೆ ಚರ್ಚಿಸಿ ಮನೆ ಹಾಕಿಸಿಕೊಂಡಲು ತಿಳಿಸುವೆ. ಒಂದು ವೇಳೆ ಅವರು ನಿರಾಕರಣೆ ಮಾಡಿದ್ದರೆ ನಾನು ನನ್ನ ಕಡೆಯಿಂದ ಮನೆ ಹಾಕಿಸಿಕೊಂಡುತ್ತೇನೆ” ಎಂದು ಭರವಸೆ ನೀಡಿದರು.

WhatsApp Image 2024 11 08 at 12.18.37 667ed234 e1731048718511
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ಹಾವೇರಿ | ಮಾದಕ ವಸ್ತು ಮಾರಾಟ; ನಾಲ್ವರು ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ...

ಶಿವಮೊಗ್ಗ | ಕಾಂಗ್ರೆಸ್ ಕಚೇರಿಯಲ್ಲಿ ಅರಸು ಮತ್ತು ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ

ಶಿವಮೊಗ್ಗ, ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ...

ಶಿವಮೊಗ್ಗ | ಆರು ಜಿಲ್ಲೆಯ ಮುಖಂಡರಿಂದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆ : ತೀ.ನ. ಶ್ರೀನಿವಾಸ್

ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ...

Download Eedina App Android / iOS

X