ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ 6ನೇ ತರಗತಿಯಲ್ಲಿ ಖಾಲಿ ಉಳಿದಿರುವ ಸ್ಥಾನಗಳ ದಾಖಲಾತಿಗೆ ಕೌನ್ಸಿಲಿಂಗ್ ಆಗಸ್ಟ್ 14 ರಂದು ಬೆಳಿಗ್ಗೆ 10:30ಕ್ಕೆ ಬೀದರ್‌ನ ನೌಬಾದ್‌ನಲ್ಲಿರುವ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಿಗದಿಪಡಿಸಲಾಗಿದ್ದು, ಅರ್ಹ ಮಕ್ಕಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕೆಂದು ಬೀದರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2025-26ನೇ ಸಾಲಿಗಾಗಿ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರೈಸ್ ಅಡಿಯ ವಸತಿ ಶಾಲೆಗಳಿಗೆ ಕೆಇಎ ಮುಖಾಂತರ 6ನೇ ತರಗತಿಗೆ ಮೆರಿಟ್ ಆಧಾರದ ಮೇಲೆ ವಿವಿಧ ಮೀಸಲಾತಿ ವರ್ಗಗಳಲ್ಲಿ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸ್ಥಳ ನಿಯುಕ್ತಿಗೊಳಿಸಿದ ನಂತರ ವಿಶೇಷ ವರ್ಗದ ಮಕ್ಕಳಿಗೆ ಕೌನ್ಸಲಿಂಗ್ ನಡೆಸಿ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂದಿದ್ದಾರೆ.
ಪ್ರಸಕ್ತ 6 ನೇ ತರಗತಿಯಲ್ಲಿ ವಸತಿ ಶಾಲೆಗಳಲ್ಲಿ ವರ್ಗವಾರು, ಲಿಂಗವಾರು ಖಾಲಿಯುಳಿದ ಸಾಮಾನ್ಯ ವರ್ಗ (ಇತರೆ)ಹೆಣ್ಣು-2 ಗಂಡು 5, ಪ್ರವರ್ಗ-1 ಹೆಣ್ಣು-7, ಪರಿಶಿಷ್ಟ ಜಾತಿ ಹೆಣ್ಣು-55 ಗಂಡು 12, ಪರಿಶಿಷ್ಟ ಪಂಗಡ ಹೆಣ್ಣು-14, ಪ್ರವರ್ಗ 2 (ಎ) ಹೆಣ್ಣು-14 ಗಂಡು 9, ಪ್ರವರ್ಗ 2(ಬಿ) ಹೆಣ್ಣು-8, ಗಂಡು-7, ಪ್ರವರ್ಗ 3(ಎ) ಹೆಣ್ಣು 7 ಗಂಡು 7 , ಪ್ರವರ್ಗ 3(ಬಿ) ಹೆಣ್ಣು 7 ಒಟ್ಟು 152 ಸೀಟುಗಳ ಭರ್ತಿಗೆ ಕೌನ್ಸಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲು ಮಾನ್ಯ ಸಹಾಯಕ ಆಯುಕ್ತರು ಬಸವಕಲ್ಯಾಣ ಹಾಗೂ ಬೀದರ ಇವರ ಅಧ್ಯಕ್ಷತೆಯ ಸಮಿತಿ ನಿರ್ಧರಿಸಿದೆ.
ಮೆರಿಟ್ ಆಧಾರದ ಮೇಲೆ ಅರ್ಹರಿರುವ ವಿದ್ಯಾರ್ಥಿಗಳನ್ನು ವರ್ಗಾವಾರು, ಲಿಂಗಾವಾರು, ಮೀಸಲಾತಿ ರೋಸ್ಟರ್ ಪ್ರಕಾರ ಕೌನ್ಸಿಲಿಂಗ್ ನಡೆಸಲು ಅಂಕಗಳ ಕಟ್ ಆಫ್ ನಿಗದಿ ಮಾಡಿದ್ದು ಶೇಕಡಾ ಅಂಕಗಳನ್ನು ಸಮಿತಿಯ ಸದಸ್ಯರು ನಿಗದಿಪಡಿಸಿರುತ್ತಾರೆ. ಸಾಮಾನ್ಯ ವರ್ಗ (ಇತರೆ) ಹೆಣ್ಣು-72 ಅಂಕ ಗಂಡು 75 ಅಂಕ, ಪ್ರವರ್ಗ-1 ಹೆಣ್ಣು-39, ಪರಿಶಿಷ್ಟ ಜಾತಿ ಹೆಣ್ಣು-26 ಅಂಕ, ಗಂಡು 49 ಅಂಕ, ಪರಿಶಿಷ್ಟ ಪಂಗಡ ಹೆಣ್ಣು-47 ಅಂಕ , ಪ್ರವರ್ಗ 2 ಎ ಹೆಣ್ಣು-131 ಅಂಕ ಗಂಡು 49 ಅಂಕ, ಪ್ರವರ್ಗ 2ಬಿ ಹೆಣ್ಣು-16 , ಗಂಡು-46 ಅಂಕ, ಪ್ರವರ್ಗ 3ಎ ಹೆಣ್ಣು 44 ಅಂಕ, ಗಂಡು 57 ಅಂಕ, ಪ್ರವರ್ಗ 3ಬಿ ಹೆಣ್ಣು 69 ಮೆರಿಟ್ ಕಟ್-ಆಪ್ ಅಂಕ ಇದ್ದ ಅರ್ಹ ಮಕ್ಕಳಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತ!