ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿರುವ ನ್ಯೂನ್ಯತೆ ಸರಿಪಡಿಸುವಂತೆ ಆಗ್ರಹಿಸಿ ಆ.14ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳಮೀಸಲಾತಿ ರಕ್ಷಣಾ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ ತಿಳಿಸಿದರು.
ಕಲಬುರಗಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನ್ಯಾಯಮೂರ್ತಿ ನಾಗಮೋಹನ್ ದಾಸ್, ಒಳ ಮೀಸಲಾತಿ, ಏಕ ಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಸಮೀಕ್ಷೆ ನಡೆಸಿ ಆಗಸ್ಟ್ 4 2025ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸದರಿ ವರದಿ ಸಿದ್ಧಪಡಿಸಲು ಮೇ 5 2025 ರಿಂದ ಜುಲೈ 6 2025ರವರೆಗೆ ನಡೆದ ಸಮೀಕ್ಷೆಯಲ್ಲಿ 27.24 ಲಕ್ಷ ಕುಟುಂಬಗಳ 1.07 ಕೋಟಿ ಜನರನ್ನು ಸಮೀಕ್ಷೆ ಮಾಡಿದೆ. ಪ್ರಸ್ತುತ 5 ಗುಂಪುಗಳಾಗಿ ವಿಂಗಡಿಸಿ ಅತೀ ಹಿಂದುಳಿದ ಗುಂಪಿಗೆ ಶೇಕಡ 1ರಷ್ಟು ಎಡಗೈ ಗುಂಪಿಗೆ ಶೇಕಡ 6ರಷ್ಟು, ಬಲಗೈ ಗುಂಪಿಗೆ ಶೇಕಡ 5ರಷ್ಟು, ಬಂಜಾರ, ಭೋವಿ, ಕೊರಮ, ಕೊರಚ, ಅಸ್ಪೃಶ್ಯರಲ್ಲದ ಜಾತಿಗಳಿಗೆ ಶೇಕಡ 4ರಷ್ಟು ನೀಡಿದ್ದಾರೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಅಂದ್ರ ಇವು ಜಾತಿಯೇ ಅಲ್ಲದ ಗುಂಪುಗಳಿಗೆ ಶೇಕಡ 1ರಷ್ಟು ಮೀಸಲಾತಿಯನ್ನು ನಿಗದಿಪಡಿಸಿರುವುದು ಖಂಡನೀಯ” ಎಂದರು.
ಧರ್ಮದ ಕಾಲಂ ಇಡುವಂತೆ 49 ಉಪಜಾತಿಗಳು ಸೇರಿ ಹೊಲೆಯ ಜಾತಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡದೆ ಬರಿ ಹದಿನೇಳು ಉಪಜಾತಿಗಳ ಒಳಗೊಂಡು ಹೊಲೇಯ ಬಲಗೈ ಸಮುದಾಯಕ್ಕೆ ಮೀಸಲಾತಿ ಹಂಚಿಕೆ ಮಾಡಿರುವುದು ಯಾವ ನ್ಯಾಯ? ಏಕಪಕ್ಷಿಯವಾಗಿ ಒಂದು ಸಮುದಾಯವನ್ನು ಓಲೈಸಲು ಮತ್ತೊಂದು ಸಮುದಾಯಕ್ಕೆ ಅನ್ಯಾಯ ಮಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ವರದಿ ಸಲ್ಲಿಸಿದ್ದಾರೆ. ಈ ಸದರಿ ವರದಿಯು ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿರುತ್ತದೆ ಎಂದು ಆರೋಪಿಸಿದರು.
“ಗುಂಪು-2 ರಲ್ಲಿ ಆದಿ ಕರ್ನಾಟಕ, ಛಲವಾದಿ, ಛಲವಾದಿ, ಚೆನ್ನದಾಸರ, ಹೊಲೆಯ ದಾಸರ, ಮಹರ್, ತರಲ್ ಮತ್ತು ದೇಘು-ಮೇಗು ಜಾತಿಗಳನ್ನು ಮಾತ್ರ ಪಟ್ಟಿ ಮಾಡಲಾಗಿತ್ತು. ಆದರೆ ಆಡಿಯಾ(ಕೊಡಗು ಜಿಲ್ಲೆಯಲ್ಲಿ), ಅರೇಮಾಲ, ಆರವಮಾಲ, ಬೈರಾ, ಬುಕುಡ, ಬಲಗೈ, ಬಂಡಿ, ಬ್ಯಾಗಾರ/ಬೇಗಾರ, ಛಲವಾದಿ, ಛಲ್‌ವಾದಿ, ಮೇತ್ರಿ, ಮಹಾರ್, ತರಲ್, ದೇಘು-ಮೇಗು, ಮೈಲಾ, ಮಾಲಾ, ಮಾಲಾ ದಾಸರಿ, ಮಾಲಾ ಹನ್ಯ, ಮಾಲಾ ಜಂಗಮ, ಮಾಲಾ ಮಾಸ್ತಿ, ಚನ್ನಯ್ಯ, ಚನ್ನದಾಸರ್, ಹೊಲೆಯ ದಾಸರ್, ಹಳ್ಳಿರ್, ಹಲ್ಸಾರ್, ಹಸ್ಲಾರ, ಹುಲಾಸವಾರ, ಹಲಾಸ್‌ವಾರ್, ಹೊಲಾರ್, ವಲ್‌ಹಾರ್, ಹೊಲಯ, ಹೊಲೇರ್, ಹೊಲೆಯ, ಹೊಲೆಯ ದಾಸರ್, ಕೋಟೆಗಾರ್, ಮಾಲಾ ಸಾಲೆ, ನೆಟ್ಟಣಿ, ಮಾಲಾ ಸನ್ಯಾಸಿ, ಮಾಸ್ತಿ, ಮೇಘವಾಲ್, ಮಂಘರ್ವಾ, ಮುಖ್ರಿ, ಮುಂಡಾಲ, ಆಡಿ, ಪಲ್ಲನ್, ಪರೈಯನ್, ಪರಯ, ಪರವನ್, ವಲ್ಲುವನ್ ಜಾತಿ/ಉಪ ಜಾತಿಗಳು ಹೊಲೆಯ/ಛಲವಾದಿ/ಬಲಗೈ ಉಪ ಜಾತಿ/ಮೂಲ ಜಾತಿಗಳ ಸಂಬಂಧಿತ ಜಾತಿಗಳಾಗಿರುತ್ತವೆ(Synonyms castes) ಇವುಗಳು ಒಳಗೊಂಡು ಹೊಲೆಯ ಜಾತಿಸಂಖ್ಯೆವಾರು ಮೀಸಲಾತಿ ಹಂಚಿಕೆಯಾಗಬೇಕೆಂದು ಮನವಿ ಮಾಡಿದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ಏಕಪಕ್ಷೀಯವಾದ ಪಕ್ಷಪಾತದಿಂದ ಕೂಡಿರುವ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಳ್ಳದೆ, ರಾಜ್ಯ ಸರ್ಕಾರವು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿ ನಮ್ಮ ಮನವಿಯಲ್ಲಿ ತಿಳಿಸಿರುವ ವಿಷಯದಂತೆ ಕ್ರಮಕೈಗೊಳ್ಳಲುವಂತೆ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳಮೀಸಲಾತಿ ರಕ್ಷಣಾ ಸಮಿತಿ ಆಗ್ರಹಿಸುತ್ತದೆ” ಎಂದು ತಿಳಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, “ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರ್ಪಡೆಗೊಳ್ಳುವ ಜಾತಿಗಳನ್ನು ನಮೂದಿಸಿ ಸರ್ಕಾರಿ ಆದೇಶ ಹೊರಡಿಸುವುದು. ಸದರಿ ಆದೇಶವನ್ನು Edgar Thurston & K Rangachari “Caste and Tribes of Southern India” ಪುಸ್ತಕದ ಆಧಾರದ ಮೇಲೆ ಬಲಗೈ ಸಮುದಾಯವನ್ನು ಗುರುತಿಸಿ ಅದರ ಜನಸಂಖ್ಯೆಯನ್ನು ಒಟ್ಟುಗೂಡಿಸುವುದು ಹಾಗೂ ಮೀಸಲಾತಿ ಪ್ರಮಾಣವನ್ನು ಮರು ಹಂಚಿಕೆ ಮಾಡಬೇಕು, ಸಮೀಕ್ಷೆಯನ್ನು ಸಮರ್ಪಕವಾಗಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸದೇ ಇರುವುದರಿಂದ ಸಂಗ್ರಹಿಸಿರುವ ದತ್ತಾಂಶಗಳನ್ನು ದೃಢೀಕರಿಸಲು 15 ದಿನಗಳ ಕಾಲಾವಕಾಶ ನೀಡಿ ಆಕ್ಷೇಪಣೆಗಳನ್ನು ತಂತ್ರಾಂಶದ ಮೂಲಕ ಆಹ್ವಾನಿಸಬೇಕೆಂದು” ಮನವಿ ಮಾಡಿದರು.
“ಸ್ವೀಕೃತ ದೂರುಗಳನ್ನ/ಮನವಿಗಳನ್ನು ಆಧರಿಸಿ ಸೂಕ್ತ ಸಮಂಜಸವಾಗಿ ಮೀಸಲಾತಿ ಮರು ಹಂಚಿಕೆಗೆ ಕ್ರಮವಹಿಸಬೇಕು, ಆಯೋಗವು ದುರುದ್ದೇಶ ಪೂರ್ವಕವಾಗಿ ಪರೈಯ್ಯ ಪರವನ್ ಸಮುದಾಯವನ್ನು ಎಡಗೈ ಗುಂಪಿಗೆ ಸೇರಿಸಿರುವುದನ್ನು ರದ್ದುಪಡಿಸಿ ಬಲಗೈ ಗುಂಪಿಗೆ ಸೇರ್ಪಡೆಗೊಳಿಸಬೇಕೆಂದು” ತಿಳಿಸಿದರು.
“ಶೇಕಡ 1ರ ಗುಂಪಿಗೆ ಸೇರ್ಪಡೆಗೊಳಿಸಿರುವ ಬಲಗೈ ಗುಂಪಿನ ಜನಾಂಗಗಳನ್ನು Edgar Thurston 2 K Rangachari d ಸಂಶೋಧನೆಯಂತೆ ಬಲಗೈ ಗುಂಪಿಗೆ ಸೇರ್ಪಡೆಗೊಳಿಸುವುದು ಹಾಗೂ ಜನ ಸಂಖ್ಯೆಯನ್ನು ಬಲಗೈ ಗುಂಪಿನ ಲೆಕ್ಕಕ್ಕೆ ತೆಗೆದುಕೊಂಡು, ಜಾತಿಗಳೇ ಇಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಅಂದ್ರ ಸಮೂಹಗಳಿಗೆ ನಿಗದಿಪಡಿಸಿರುವ ಶೇಕಡ 1ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಆಯಾ ಜಾತಿಗಳಿಗೆ ಮರು ಹಂಚಿಕೆ ಮಾಡಬೇಕೆಂದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಆಯೋಗದ ವರದಿಯಲ್ಲಿ ಇರುವ ನ್ಯೂನ್ಯತೆ ಆಗಿರುವ ತಪ್ಪುಗಳನ್ನು ಸಮಗ್ರವಾಗಿ ಪರಿಶಿಲಿಸಿ ಪರಿಷ್ಕರಣೆ ಮಾಡಲು ಇಬ್ಬರು (Anthropologist) ಮಾನವ ಶಾಸ್ತ್ರಜ್ಞರು ಗಳನೊಳ್ಳಗೊಂಡಂತೆ ಸಚಿವ ಸಂಪುಟದ ಉಪ ಸಮಿತಿ ರಚಿಸಿ. ಉಪ ಸಮಿತಿಯ ಶಿಫಾರಿಸ್ಸಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಆಗಸ್ಟ 14ರಂದು ಪ್ರತಿಭಟನೆ ನಡೆಸಲಾಗುವುದೆಂದು” ತಿಳಿಸಿದರು.
ಹೊಲೆಯ ಜಾತಿಗೆ ಸೇರಿದ ಎಲ್ಲ ಸಚಿವರು, ಶಾಸಕರು ಈ ವರದಿಯನ್ನು ಒಪ್ಪಿಕೊಳ್ಳಬಾರದು. ಒಂದು ವೇಳೆ ಒಪ್ಪಿಕೊಂಡರೆ ಇದು ನಮ್ಮ ಸಮುದಾಯಕ್ಕೆ ನೀವು ಮಾಡುವ ಘೋರವಾದ ಅನ್ಯಾಯವೆಂದು ನಾವು ಪರಿಗಣಿಸಬೇಕ್ಕಾಗುತ್ತದೆ. ಇದಕ್ಕೆ ನೀವುಗಳೆ ನೇರ ಹೊಣೆ ಎಂದು ಸುದ್ದಿ ಗೋಷ್ಠಿಯ ಮೂಲಕ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ತಮಿಳರ ವಿರೋಧಿ ಆರೋಪ: ರಾಜ್ಯಪಾಲ ಆರ್ ಎನ್ ರವಿ ಕೈಯಿಂದ ಪದವಿ ಸ್ವೀಕರಿಸಲು ನಿರಾಕರಿಸಿದ ಪಿಎಚ್‌ಡಿ ವಿದ್ಯಾರ್ಥಿನಿ!
ಸುದ್ದಿಗೋಷ್ಠಿಯಲ್ಲಿ ಗುಂಡಪ್ಪ ಲಂಡನಕರ್, ಮಲ್ಲಪ್ಪ ಹೊಸಮನಿ, ದಿನೇಶ ದೊಡ್ಡಮನಿ, ಮರೆಪ್ಪ ಮೇತ್ರಿ, ರಮೇಶ ಪಟ್ಟೇದಾರ್, ಪ್ರಕಾಶ ನಾಗನಹಳ್ಳಿ, ಬಸವರಾಜ್ ಪಾಸ್ವನ್, ದೇವಿಂದ್ರ ಸಿನ್ನೂರ್, ಅಂಬಾರಾಯ ಅಷ್ಟಗಿ ಇನ್ನಿತರರು ಇದ್ದರು.