ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿರುವ ನಾಳೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮಂಗಳವಾರ ತಿಳಿಸಿದ್ದಾರೆ.
ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿರುವ ಹುಕ್ಕುಂದ ಬಳಿ ಚಿಕ್ಕಮಗಳೂರು 66/11 ಕೆ.ವಿ. ವಿ.ವಿ ಕೇಂದ್ರದಿಂದ ಹೊರಹೊಮ್ಮುವ ಜೋಳದಾಳ್ ಫೀಡರ್ 11 ಕೆ.ವಿ. ಮಾರ್ಗಗಳಲ್ಲಿ ರಿಅಲೈನ್‌ಮೆಂಟ್ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಆಗಸ್ಟ್ 13 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಲೋಕಾಯುಕ್ತ ದಾಳಿ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಶ
ಹಾಗೆಯೇ, ಜೋಳದಾಳ್ ಮತ್ತು ಶಿರವಾಸೆ ಫೀಡರ್‌ಗಳ ವ್ಯಾಪ್ತಿಗೆ ಬರುವ ಹುಕ್ಕುಂದ, ಜೋಳದಾಳ್, ಶಿವಗಂಗೆ, ಸಂತೆಗುಡ್ಡ, ಮಸಗಲಿ, ಮೈಲಿಮನೆ, ಆವತಿ, ಮಲ್ಲಂದೂರು, ಜಕ್ಕನಹಳ್ಳಿ, ಆಣೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ರವರು ತಿಳಿಸಿದ್ದಾರೆ